ದೊಡ್ಡ ಕಾಡುಕೋಳಿ

Team Udayavani, Jun 16, 2018, 12:43 PM IST

19.jpg

ಭಾರತದ ಹುಲ್ಲುಗಾವಲಿನ  ದೊಡ್ಡ ಕಾಡುಕೋಳಿ -ಆಸ್ಮಿಚ್‌- ಓಸ್ಟ್ರಿಚ್‌ ಹಕ್ಕಿಯನ್ನು ಬಿಟ್ಟರೆ ಹಾರುವ ಹಕ್ಕಿಗಳಲ್ಲೇ ಇದೇ ದೊಡ್ಡ ಮತ್ತು ಭಾರವಾದ ಹಕ್ಕಿ. ಇದು ಹಾರುವುದಕ್ಕಿಂತ ನೆಲದಲ್ಲಿ ಓಡಾಡುವುದೇ ಹೆಚ್ಚು. ಹಾಗಾಗಿ ಇದನ್ನು ಹಕ್ಕಿ ಎನ್ನುವದಕ್ಕಿಂತ ಕೋಳಿ ಎಂದು ಕರೆಯುವುದೇ ಸೂಕ್ತ.Great Indian bustard (Ardeotis nigriceps (Vigors ) R Vulture + ಊರು ಕೋಳಿಯಂತೆ ಕಾಲಿನಲ್ಲಿ ನೆಲ ಹೆಕ್ಕಿ ಕೆಲವೊಮ್ಮೆ ಅಲ್ಲಿರುವ ಹುಳಗಳನ್ನು ಹುಡುಕಿ ತಿನ್ನುತ್ತದೆ. ಗಂಡು ಹಕ್ಕಿ 122 ಸೆಂ.ಮೀ ದೊಡ್ಡ ಇದೆ. ಹೆಣ್ಣು ಹಕ್ಕಿ ಸ್ವಲ್ಪ ಚಿಕ್ಕದು. ಅಂದರೆ ಸುಮಾರು 92 ಸೆಂ.ಮೀ.

 ಇದು ಹದ್ದಿಗಿಂತ ದೊಡ್ಡದು. ಹದ್ದಿನ ಮೈ ಬಣ್ಣವನ್ನು ತುಂಬಾ ಹೋಲುತ್ತದೆ. ರಾಜಸ್ಥಾನದ ತಳಿ ಸ್ವಲ್ಪ ಕೆಂಪು ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ಉದ್ದ ಗೆರೆಗಳಿರುವ ಹಳದಿ ಕಾಲಿನ ಮುಂಭಾಗದಲ್ಲಿ ಚಿಕ್ಕ ಮೂರು ಬೆರಳಿದೆ. ಇದರ ರೆಕ್ಕೆಯ ಅಗಲ 614-762 ಎಂ.ಎಂ. 100-122-170 ಸೆಂ.ಮೀ.  ದೊಡ್ಡ ಕಾಡು ಕೋಳಿ, ಕೋರಿ ಕಾಡು ಕೋಳಿ ಮತ್ತು ಭಾರತದ ಕಾಡು ಕೋಳಿಯಲ್ಲಿ ತುಂಬಾ ಸಾಮ್ಯತೆ ಇದೆ. ಗಂಡುಹಕ್ಕಿಯ ಕುತ್ತಿಗೆಯಲ್ಲಿ ಚೀಲವಿದ್ದು, ಅದೇ ಕಾರಣದಿಂದ ಪಕ್ಷಿಯು ವಿಚಿತ್ರವಾಗಿ ಕಾಣಿಸುತ್ತದೆ. ಪ್ರಣಯದ ಸಂದರ್ಭದಲ್ಲಿ ಈ ಚೀಲದಲ್ಲಿ ಗಾಳಿ ತುಂಬಿಕೊಂಡು ಸುಮದುರ ದನಿಯನ್ನು ಹೊರಡಿಸುವ ಮೂಲಕ, ಪುಕ್ಕ ಅಗಲಿಸುವುದು, ತಲೆ ಎತ್ತಿ ಕೂಗುತ್ತಾ ತನ್ನ ಪೌರುಶ ಪ್ರದರ್ಶಿಸಿ -ಹೆಣ್ಣನ್ನು ಒಲಿಸಿಕೊಳ್ಳುತ್ತದೆ. 

ಮಿಲನ ಸಂದರ್ಭದಲ್ಲಿ ಗಂಡು ಹಕ್ಕಿ ಜಿಗ್‌ ಜಾಗ್‌ ರೀತಿ ಹೆಜ್ಜೆ ಇಡುತ್ತದೆ.  ಕೆಲವೊಮ್ಮ ಹೆಣ್ಣು ಕೂಡ ಇದರೊಟ್ಟಿಗೆ ಹೆಜ್ಜೆ ಇಟ್ಟು ಗಂಡನ್ನು ಹುರಿದುಂಬಿಸುತ್ತದೆ.  ತಲೆ ಬಗ್ಗಿಸಿ ಕೊರಳಿನ ಚೀಲ ಉಬ್ಬಿಸಿ -ಇದು ಹೊರಡಿಸುವ ಗಡಸು ದನಿ 500ಮೀಟರ್‌ ದೂರದವರೆಗೂ ಕೇಳಿಸುತ್ತದೆ. ಇದು ಸಹವರ್ತಿ ಗಂಡಿಗೆ ನೀಡುವ ಎಚ್ಚರಿಕೆ.  ಇದು ತನ್ನ ವ್ಯಾಪ್ತಿ ಪ್ರದೇಶ ಎಂದು ತಿಳಿಸುವುದಕ್ಕೂ  ಹೀಗೇ ಕೂಗುತ್ತದೆ. ಗಂಡು- ಹೆಣ್ಣು ಎಂರಡೂ ಒಂದೇ ರೀತಿ ಕಪ್ಪು ಮಿಶ್ರಿತ ಕಂದುಬಣ್ಣದಲ್ಲೇ ಕಾಣಸಿಗುತ್ತವೆ. ಹೆಣ್ಣು ಗಾತ್ರದಲಿ Éಸ್ವಲ್ಪ ಚಿಕ್ಕದು. ಹಳದಿ ಮಿಶ್ರಿತ ಕಂದು ಬಣ್ಣದ ಚೂಪು ಚುಂಚು, ಹಳದಿ ಕಣ್ಣು, ಚಿಕ್ಕ ತಲೆ ಈ ಪಕ್ಷಿಯ ವಿಶೇಷ. 

ತಲೆಯಲ್ಲಿ ಕಪ್ಪು ಗರಿ ಇರುತ್ತದೆ.  ಗಂಡು ಹಕ್ಕಿಯ ತಲೆಯಲ್ಲಿ ಇಂಥದೇ ಗರಿಗಳ  ಜುಟ್ಟು ಇದೆ. ಇದು ಮರಿಮಾಡುವ ಸಮಯದಲ್ಲಿ, ಕಾದಾಡುವಾಗ ಎದ್ದು ನಿಲ್ಲುತ್ತದೆ. ಹುಲ್ಲು ಗಾವಲಿನಲ್ಲಿ ಒಣ ಹುಲ್ಲುಗಳ ಮಧ್ಯೆ ಇದ್ದರೆ  ಕೆಲವೊಮ್ಮೆ ಕಾಣುವುದಿಲ್ಲ. ಕುತ್ತಿಗೆ -ಎದೆ ಮಸುಕು ಬಿಳಿಬಣ್ಣ ಇರುವುದು. ಕುತ್ತಿಗೆಯ ಬುಡದಲ್ಲಿ ಎದೆಯ ಭಾಗದಲ್ಲಿ ಕಪ್ಪು ಗರಿ ಕುತ್ತಿಗೆಯಲ್ಲಿರುವ ಕಪ್ಪು ಹಾರದಂತೆ ಕಾಣುತ್ತದೆ. ರೆಕ್ಕೆಯ ತುದಿ ಗರಿ ಕಪ್ಪು ಬಣ್ಣದಿಂದ ಕೂಡಿದೆ. 

ಕಾಲು ಮೊಳಕಾಲಿನ ತನಕ ಚಿಕ್ಕದಿದ್ದು -ಮೊಳ ಕಾಲಿನಿಂದ ಕೆಳಭಾಗ ಉದ್ದವಾಗಿರುವುದು ಕಾಲಲ್ಲಿ ಚಿಕ್ಕ ಮೂರು ಬೆರಳು ಮುಂದಕ್ಕೆ ಚಾಚಿದೆ. ಇದು ವೇಗವಾಗಿ ನೆಲದಮೇಲೆ ಓಡಾಡಲು ಸಹಕಾರಿ. 

ಇದು ತನ್ನ ಕುತ್ತಿಗೆಯನ್ನು ಮುಂದೆ ಚಾಚಿ, ರೆಕ್ಕೆ ಬಿಚ್ಚಿ ನವಿಲಿನಂತೆ ಹಾರುವಾಗ ಇದರ ರೆಕ್ಕೆಯ ಮಧ್ಯ ಇರುವ ಕಪ್ಪು ಗರಿ ಸ್ಪಸ್ಟವಾಗಿ ಕಾಣುತ್ತದೆ. ಇದು ದೊಡ್ಡ ಮತ್ತು ಭಾರವಾಗಿದ್ದರೂ ದೂರ ಹಾರುವ ಸಾಮರ್ಥ್ಯ ಈ ಕೋಳಿಗೆ ಇದೆ. ಗಾಬರಿಯಾದಾಗ, ಕೆಲವೊಮ್ಮೆ ತೋಳ, ನಾಯಿ, ಗಿಡುಗಗಳು ತನ್ನ ಮೊಟ್ಟೆ ಮತ್ತು ಮರಿಗಳನ್ನು ತಿನ್ನಲು ಬಂದಾಗ -ಹಾರಿ , ಕುಪ್ಪಳಿಸಿ ಕುಕ್ಕಿ ರಕ್ಷಣೆ ಒದಗಿಸುತ್ತದೆ. ಇದರ ಇರುನೆಲೆ ನಾಶ, ಬೇಟೆಯಾಡುವುದು, ಇದರ ಗರಿ ಮತ್ತು ಮಾಂಸಕ್ಕಾಗಿ ಕೊಲ್ಲುವುದರಿಂದ,  ಸುಲಭವಾಗಿ ವೈರಿಗಳಿಂದ ಇದರ ಮೊಟ್ಟೆ, ಮರಿಗಳು ನಾಶವಾಗುವುದರಿಂದ -ಇದರ ಸಂತತಿಯಲ್ಲಿ ಕಡಿಮೆಯಾಗುತ್ತಿದೆ. 

ಪಿ. ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.