ಮುಂದುವರಿದ ಕಾಡಾನೆ ದಾಂದಲೆ
Team Udayavani, Jun 16, 2018, 12:47 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ದಾಂದಲೆ ಮುಂದುವರೆದಿದ್ದು, ಶುಕ್ರವಾರ ಬೆಳಗಿನ ಜಾವ ತಾಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ತೋಟದ ಬೆಳೆಗಳನ್ನು ತಿಂದು-ತುಳಿದು ತೆಂಗಿನ ಮರ ಸಿಗಿದು ಹಾಕಿರುವ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದ ಗುರುರಾಜ್ ಮತ್ತು ಕೃಷ್ಣಮೂರ್ತಿ ಇತರರ ತೋಟಕ್ಕೆ ನುಗ್ಗಿದ ಒಂಟಿ ಸಲಗ ಮನೆ ಮಂದಿಯನ್ನು ಗಾಬರಿಗೊಳಿಸಿ ನಂತರ ಮನೆ ಬಳಿ ಇದ್ದ ಮಾವಿನ ಮರವನ್ನು ಬುಡ ಸಮೇತ ಉರುಳಿಸಿದೆ. ಒಂದು ಸಸಿ ಸೇರಿದಂತೆ ಮೂರು ತೆಂಗಿನ ಮರವನ್ನು ತಿಂದು, ಸುಳಿಯನ್ನು ಸಿಗಿದು ಹಾಕಿದೆ.
ಇದೇ ಗ್ರಾಮದ ಹಲಗೇಗೌಡರಿಗೆ ಸೇರಿದ ಶುಂಠಿ ಮತ್ತು ಜೋಳದ ಬೆಳೆಯನ್ನು ತುಳಿದು ನಾಶಪಡಿಸಿದೆ. ಉದ್ಯಾನವನದ ವೀರನಹೊಸಹಳ್ಳಿ ವಲಯದಿಂದ ಚಂದನಗಿರಿ ವರೆಗೆ ರೈಲ್ವೆ ಕಂಬಿಯ ತಡೆಗೋಡೆ ನಿರ್ಮಿಸಲಾಗಿದೆ. ಇದೀಗ ಹುಣಸೂರು ವಲಯದ ನೇರಳಕುಪ್ಪೆ-ಕಾಳಬೂಚನಹಳ್ಳಿ ಭಾಗದಿಂದ ಕಾಡಾನೆಗಳು ಟ್ರಂಚ್(ಆನೆಕಂದಕ)ದಾಟಿ ಹೊರಬರಲಾರಂಭಿಸಿದ್ದು,
ಮುಂದೆ ಜೋಳ,ರಾಗಿ ಮತ್ತಿತರ ದ್ವಿಧಳ ಧಾನ್ಯ ಬೆಳೆಗಳು ಕಾಡಾನೆಗಳ ಪಾಲಾಗಿರುವುದರಿಂದ ತಕ್ಷಣವೇ ತಡೆಗೋಡೆ ನಿರ್ಮಿಸಬೇಕು ಇಲ್ಲವೇ ಆನೆ ಕಾಯಲು ಹೆಚ್ಚಿನ ಸಿಬ್ಬಂದಿ ನೇಮಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.