ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ
Team Udayavani, Jun 17, 2018, 6:15 AM IST
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಸ್ವಲ್ಪ ತಗ್ಗಿದೆ. ಆದರೆ, ಶನಿವಾರವೂ ಕೆಲವೆಡೆ ಸಾಧಾರಣ ಮಳೆಯಾಗಿದ್ದು, ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.
ಈ ಮಧ್ಯೆ, ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಮೂಲ್ಕಿ, ಕೋಟ ಮತ್ತು
ಭಾಗಮಂಡಲದಲ್ಲಿ ರಾಜ್ಯದಲ್ಲಿಯೇ ಅಧಿಕ, 5 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.
ರಾಜಧಾನಿ ಬೆಂಗಳೂರಿನ ಹಲವೆಡೆ ಸಂಜೆ ವೇಳೆ ಮಳೆಯಾಯಿತು. ಇದರಿಂದಾಗಿ ವಾಹನ ಸವಾರರು
ಪರದಾಡುವಂತಾಯಿತು. ಈ ಮಧ್ಯೆ, ಕೊಡಗಿನಲ್ಲಿ ಸುರಿದ ಮಳೆಯಿಂದಾಗಿ ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚಿದೆ. ಹುಣಸೂರು ತಾಲೂಕಿನ ಹನಗೋಡು, ಕಟ್ಟೆಮಳಲವಾಡಿ ಹಾಗೂ ಶಿರಿಯೂರು ಅಣೆಕಟ್ಟೆಯ ಮೇಲೆ ನೀರು ಭೋರ್ಗರೆದು ಹರಿಯುತ್ತಿದೆ. ನಗರದ ಮಧ್ಯಭಾಗದ ನದಿಯಲ್ಲಿ ಬೆಳೆದಿದ್ದ ಅಂತರಗಂಗೆ ಕೊಚ್ಚಿ ಹೋಗುತ್ತಿದೆ.
ಮಂಗಳೂರಿನ ಬೋಳಾರದಲ್ಲಿ ಶನಿವಾರ ಮಧ್ಯಾಹ್ನ ಹಳೆಯ ಮನೆಯೊಂದರ ಛಾವಣಿ ಕುಸಿದು ಬಿದ್ದಿದ್ದು,ತಾಯಿ ಮತ್ತು ಮಗು ಅಪಾಯದಿಂದ ಪಾರಾಗಿದ್ದಾರೆ.
ಇದೇ ವೇಳೆ, ಮಾಗಡಿ, ಧರ್ಮಸ್ಥಳ, ಸುಳ್ಯ, ಅಂಕೋಲಾ, ವಿರಾಜಪೇಟೆ, ಆಗುಂಬೆ, ಗೋಕರ್ಣ, ಕ್ಯಾಸಲ್‌ರಾಕ್, ಹುನಗುಂದ, ಇಳಕಲ್, ಸೇಡಂ ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.
ಈ ಮಧ್ಯೆ, ರಾಜ್ಯದ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವೆಡೆ ಇನ್ನೆರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.
ಜಲಾಶಯ ನೀರಿನಮಟ್ಟ
ಇಂದಿನ ಮಟ್ಟ ಗರಿಷ್ಠ ಮಟ್ಟ
ಲಿಂಗನಮಕ್ಕಿ 1764.50 ಅಡಿ 1819 ಅಡಿ
ಕೆಆರ್‌ಎಸ್ 99.60 ಅಡಿ 124.80 ಅಡಿ
ಆಲಮಟ್ಟಿ 508.17ಮೀ 519.600 ಮೀ.
ತುಂಗಭದ್ರಾ 1597.19 ಅಡಿ 1633 ಅಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.