ಮುರುಘಾ ಶರಣರ ಆರೋಗ್ಯ ಸ್ಥಿರ
Team Udayavani, Jun 17, 2018, 7:25 AM IST
ಚಿತ್ರದುರ್ಗ: ಅನಾರೋಗ್ಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಡಾ|
ಶಿವಮೂರ್ತಿ ಮುರುಘಾ ಶರಣರು ಸಂಪೂರ್ಣ ಗುಣಮುಖರಾಗಿದ್ದಾರೆ.
ಚಿಕಿತ್ಸೆ ಪಡೆದ ನಂತರ ಶನಿವಾರ ಸಂಜೆ 6:30ಕ್ಕೆ ಮುರುಘಾ ಶರಣರು ಮಠಕ್ಕೆ ಆಗಮಿಸಿದರು. ಕಳೆದ ಜೂನ್ 8 ರಂದು ಉಸಿರಾಟ ಸಮಸ್ಯೆಯಿಂದ ಬಳಲಿದ್ದ ಮುರುಘಾ ಶರಣರು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಜೂ.11 ರಂದು ಮಠಕ್ಕೆ ಮರಳಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಶುಕ್ರವಾರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು. ಈಗ ಮುರುಘಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.