ಕನ್ನಡತಿ ಮೇಘನಾ ದ.ಭಾರತದ ಮೊದಲ ಯುದ್ಧ ವಿಮಾನ ಪೈಲಟ್
Team Udayavani, Jun 17, 2018, 6:30 AM IST
ಚಿಕ್ಕಮಗಳೂರು: ಆಗಸದಲ್ಲಿ “ನಾರಿ ಶಕ್ತಿ ಪ್ರದರ್ಶನ’ಕ್ಕೆ ಮತ್ತೂಂದು ಕಿರೀಟ ಸೇರ್ಪಡೆಯಾಗಿದೆ. ಮೇಘನಾ ಶಾನು ಭೋಗ್ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6ನೇ ಯುದ್ಧ ವಿಮಾನದ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಭಾರತೀಯ ವಾಯುದಳದ ತರಬೇತಿ ಪಡೆದು ಆಂಧ್ರದ ಭೀಂಡಗಲ್‌ನಲ್ಲಿ ಶನಿವಾರ ನಡೆದ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಯುದ್ಧ ವಿಮಾನದ ಮಹಿಳಾ ಪೈಲಟ್ ಆಗುವ ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.
ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ನ್ಯಾಯವಾದಿ ಎಂ.ಕೆ. ರಮೇಶ್ ಹಾಗೂ ಉಡುಪಿ ಗ್ರಾಹಕ ಕೌನ್ಸಿಲ್‌ನ ಅಧ್ಯಕ್ಷೆ ಶೋಭಾ ಅವರ ಪುತ್ರಿ ಮೇಘನಾ ಅಪರೂಪದ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯದ ಹೆಸರನ್ನು ದೇಶಮಟ್ಟದಲ್ಲಿ ಬೆಳಗಿದ್ದಾಳೆ.
ನಗರ ಹೊರವಲಯದಲ್ಲಿರುವ ಮಹರ್ಷಿ ವಿದ್ಯಾಮಂದಿರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಮೇಘನಾ, 5ರಿಂದ 12ನೇ ತರಗತಿವರೆಗೆ ಬ್ರಹ್ಮಾವರದ ಲಿಟ್ಲ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಓದಿದ್ದಾರೆ. ನಂತರ ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಅಡ್ವೆಂಚರ್ ಕ್ಲಬ್ ಸ್ಥಾಪಿಸಿ ಸ್ನೇಹಿತರೊಂದಿಗೆ ಸಾಹಸಮಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. 20ನೇ ವರ್ಷದಲ್ಲೇ ಮೊಟ್ಟ ಮೊದಲ ಬಾರಿಗೆ ಏಕಾಂಗಿಯಾಗಿ ಪ್ಯಾರಾ ಗ್ಲೆ„ಡಿಂಗ್ ನಡೆಸಿದ್ದಳು.
ದಿಕ್ಕು ಬದಲಾಯ್ತು: ಆಕಾಶಕ್ಕೆ ಏಕಾಂಗಿಯಾಗಿ ಏರಿದಾಗಲೇ ಮೇಘನಾಗೆ ತಾನು ಅಸಾಮಾನ್ಯವಾದುದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಚಿಗುರೊಡೆದಿತ್ತು. ಗೋವಾ ಬೀಚ್‌ನಲ್ಲಿ ಪ್ಯಾರಾ ಗ್ಲೆ„ಡರ್‌ನಿಂದ ಯಾವುದೇ ಆತಂಕಕ್ಕೆ ಒಳಗಾಗದೆ ಜಿಗಿದಾಗ ನೋಡುಗರೆಲ್ಲ ಹುಬ್ಬೇರಿಸಿದ್ದರು. ಆ ಸಮಯದಲ್ಲಿ ತನ್ನಲ್ಲಿರುವ ಧೈರ್ಯ ಅರಿತ ಮೇಘನಾ ತಮ್ಮ ಸಾಹಸದ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಸಾಧನೆ ಮಾಡಲು ನಿರ್ಧರಿಸಿದರು. ಸಾಹಸಿ ಮೇಘನಾಗೆ ಮೊದಲ ಅವಕಾಶ ತೆರೆದುಕೊಂಡಿದ್ದು 2016ರ ಜೂನ್‌ನಲ್ಲಿ. ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ಮಹಿಳಾ ಫೈಲೆಟ್ ಗಳಿಗೂ ಅವಕಾಶ ಎಂಬ ವಾಯುದಳದ ಪ್ರಕಟಣೆ ಅವರ ಬದುಕನ್ನೇ ಬದಲಿಸಿತು. ತಕ್ಷಣ ಏರ್‌ಫೋರ್ಸ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿ ಉತ್ತೀರ್ಣರಾದರು. ಆಂಧ್ರದ ಭೀಂಡಿಗಲ್ ಏರ್‌ಫೋರ್ಸ್ ಅಕಾಡೆಮಿಯಲ್ಲಿ ಪ್ರವೇಶ ದೊರೆಯಿತು.
ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡ ಮೇಘನಾ ಭಾರತೀಯ ವಾಯು ದಳ ಸೇರಿದ್ದಾರೆ. ಸಾಹಸ ಪ್ರವೃತ್ತಿಯ ಮೇಘನಾ ಕೊನೆಗೂ ಯುದ್ಧವಿಮಾನ ಏರಲು ಸನ್ನದ್ಧರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.