ವಾಂಟ್‌ ವಾಟರ್‌


Team Udayavani, Jun 17, 2018, 11:09 AM IST

q-38.jpg

Want water ಕ್ಲಾಸಿನಲ್ಲಿ ಕುಳಿತಿದ್ದ ತುಹಿನಾಳಿಗೆಯ ಅಪ್ಪನ ಮೆಸೇಜ್‌ ನೋಡಿದ್ದೇ ಇನ್ನಿಲ್ಲದ ರೇಜಿಗೆಯಾಗಿಬಿಟ್ಟಿತು. ಪ್ರಾಧ್ಯಾಪಕರ ದೃಷ್ಟಿ ಬೋರ್ಡಿನತ್ತ ತಿರುಗಿದ್ದೇ, Go to hell. ನಾನೇನುಮಾಡಲಿ ಕ್ಲಾಸಿನಲ್ಲಿ ಕುಳಿತಿದ್ದೇನೆ. ಎದ್ದುಹೋಗಿ, ತಂದುಕೊಂಡು ಕುಡಿ. Dont be silly Pappa… ಎಂದು ರಿಪ್ಲೆ„ ಬರೆದು ಫೋನನ್ನು ಸೈಲೆಂಟ್ ಮೋಡೆ ಹಾಕಿ ಲ್ಯಾಬ್‌ಕೋಟ್‌ನ ಜೇಬಿಗಿಳಿಬಿಟ್ಟಳು ತುಹಿನಾ. 

ಕ್ಲಾಸು ಮುಗಿಸಿ ಊಟಮಾಡಿ ಹಾಸ್ಟೆಲ್ ರೂಮಿಗೆ ಬಂದು ಬಿದ್ದುಕೊಂಡವಳಿಗೆ ಮತ್ತೆ ಬೆಳಗಿನದೆಲ್ಲ ನೆನಪಾಯಿತು. ತಾನು ಅಪ್ಪನೊಡನೆ ತುಸು ಹೆಚ್ಚೇ ಒರಟಾಗಿ ನಡೆದುಕೊಂಡೆನೇ ಅನ್ನಿಸಿ ಬೇಸರವೂ ಆಯಿತು. ಅಮ್ಮ ತೀರಿಕೊಂಡು ಹತ್ತು ತಿಂಗಳಾಗುತ್ತ ಬಂತಲ್ಲವೇ? ಕೆಲದಿನಗಳ ಕಾಲ ವ್ಯಥೆಯಲ್ಲಿದ್ದ ಅಪ್ಪಆಮೇಲೆ ತುಸು ಸುಧಾರಿಸಿಕೊಂಡಂತೆ ಕಾಣುತ್ತಿದ್ದ. ಮನೆಗೆಲಸಕ್ಕೆ ಬರುತ್ತಿದ್ದ ಶಾರದಮ್ಮ ಈಗ ಅಡುಗೆಯನ್ನೂ ಮಾಡಿಟ್ಟು ಹೋಗುತ್ತಿದ್ದರು. ಹಳ್ಳಿಯಲ್ಲಿ ಜಮೀನು ಇದ್ದರೂ ಬಹಳ ವರ್ಷಗಳಿಂದ ಐಟಿಕ್ಷೇತ್ರದಲ್ಲಿ ಕೆಲಸಮಾಡಿಕೊಂಡಿದ್ದ ಅಪ್ಪ, ಅಪ್ಪಟ ನಗರವಾಸಿಯಾಗಿಬಿಟ್ಟಿದ್ದ. “ಎಲ್ಲ ಬಿಟ್ಟು ಊರಿಗೆ ಹೋಗಿಬಿಡೋಣ, ಕೃಷಿ ಮಾಡೋಣ, ಗಿಡಮರಗಳ ಸಾನ್ನಿಧ್ಯದಲ್ಲಿ ನೆಮ್ಮದಿಯಾಗಿ ಇದ್ದುಬಿಡೋಣ’ ಎಂದು ಅಮ್ಮ ಹೇಳಿದಾಗಲೆಲ್ಲ, “ಭೂಮಿಯ ಸಂಪರ್ಕವನ್ನೇ ಕಳೆದುಕೊಂಡಿದ್ದೇವಲ್ಲ’ ಎಂದು ಮಾತು ಮುಗಿಸಿಬಿಡುತ್ತಿದ್ದ. ಓರೆನೋಟದಲ್ಲಿ ಅಪ್ಪನನ್ನು ತಿವಿಯುತ್ತಲೇ, “ಸಂಪರ್ಕ ಇದ್ದಿದ್ದು ಯಾವಾಗ? ಕಳೆದುಕೊಳ್ಳಲು…’ ಎಂದು ಅಮ್ಮ ಸಿಡುಕಿದ್ದು ಅದೆಷ್ಟು ಬಾರಿಯೋ. ಅಪ್ಪನಿಗೆ ಭೂಮಿಯ ಸಂಪರ್ಕ ಉಂಟಾಗುತ್ತಿತ್ತೋ ಇಲ್ಲವೋ. ಅಮ್ಮನಂತೂ ಅಂತಹ ಸಂಪರ್ಕ ಸಾಧಿಸಲಾಗದೇ, ಸಾಧಿಸುವ ಸಾಧ್ಯತೆಯನ್ನೂ ಕಾಣದೇ ಜೀವಬಿಟ್ಟಿದ್ದಳು.

ಬೆಳಿಗ್ಗೆ ಎದ್ದವಳೇ ಅಣ್ಣನಿಗೆ ವೀಡಿಯೋಕಾಲ… ಮಾಡಿದಳು-ಅಮೆರಿಕದಲ್ಲಿರುವ ಅವನಿಗೆ ಅದು ರಾತ್ರಿಯ ಸಮಯವಾಗಿರುವುದರಿಂದ ಮಾತನಾಡಲು ಸಿಗುತ್ತಾನೆ. ಅಪ್ಪಪದೇಪದೇ ಹೀಗೆ ಮೆಸೇಜ… ಮಾಡುತ್ತಿರುವುದನ್ನು ಹೇಳಿದಾಗ, ಅವನು ತನಗೂ ಹೀಗ ಮೆಸೇಜ… ಬರುತ್ತಿರುವುದಾಗಿ ಹೇಳಿದ. “ಜಾಸ್ತಿ ತಲೆಕೆಡಿಸಿಕೊಳ್ಳಬೇಡ, ಅಲಕ್ಷ್ಯ ಮಾಡು, ತಂತಾನೇ ಸರಿಹೋಗುತ್ತೆ, ಕಾಲ ಎಲ್ಲವನ್ನೂ ಮರೆಸುತ್ತೆ’ ಅಂದ. ಥೇಟ… ಅಮ್ಮನಂತೆ ಮಾತನಾಡುತ್ತಾನೆ ಇತ್ತೀಚೆಗೆ, ಅಮ್ಮನಿಗೂ ತಾನು ಅಣ್ಣನೊಡನೆ ಆಪ್ತವಾಗಿರುವುದು ಸಮಾಧಾನದ ಸಂಗತಿಯಾಗಿತ್ತು. ಅಕ್ಕ-ತಂಗಿ, ಅಣ್ಣ-ತಮ್ಮ ಅನ್ನುವ ಬಾಂಧವ್ಯಗಳೇ ಇಲ್ಲವಾಗುತ್ತಿರುವ ಇಂದಿನ ಸಿಂಗಲ… ಚೈಲ್ಡ… ಜಮಾನಾದಲ್ಲಿ ಒಂದು ದಿನ ನಿನಗಿದರ ಮೌಲ್ಯಗೊತ್ತಾಗುತ್ತೆ, ಆಗ ನಾನಿರುತ್ತೇನೋ ಇಲ್ಲವೋ ನೀವಿಬ್ಬರೂ ಒಬ್ಬರಿಗೊಬ್ಬರು ಇರುತ್ತೀರಿ ಎನ್ನುವುದೇ ನನಗೆ ನೆಮ್ಮದಿ, ಅಂದಿದ್ದಳಲ್ಲವೇ. “ಓದು-ಪರೀಕ್ಷೆಗಳ ಜೊತೆಗೆ ಸ್ನಾತಕೋತ್ತರ ಪದವಿಗೆ ತಯಾರಿ ಹೇಗೆ ಮಾಡುತ್ತಿದ್ದೀಯಾ, ಎಲ್ಲಿ ಮಾಡಬೇಕು ಅಂತ ನಿರ್ಧರಿಸಿದೆಯಾ?’ ಅಂತಲೂ ಕೇಳಿದ. ಅಮ್ಮ ಇದ್ದಿದ್ದರೆ ಇದರಲ್ಲಿ ಅರ್ಧಕೆಲಸವನ್ನು ಅವಳೇ ಮಾಡಿಬಿಟ್ಟಿರುತ್ತಿದ್ದಳು ಎಂದುಕೊಂಡವಳಿಗೆ ದುಃಖ ಒತ್ತರಿಸಿಕೊಂಡು ಬಂತು. ನೀನು ಆರಿಸಿಕೊಂಡಿರುವ ವಿಷಯ ಅನನ್ಯವಾದುದು ಕಣೇ, ಇದರಲ್ಲಿ ಎಕ್ಸಾರ್ಡಿನರಿ ಆಗಿ ಬೆಳೀಬೇಕು ನೀನು. ನಿನ್ನದೇ ಆದ ಚಂದದ ಕ್ಲಿನಿಕ್‌ ಸೆಟ್‌ ಮಾಡಬೇಕು, ವೃತ್ತಿಯಲ್ಲಿ ಚೆನ್ನಾಗಿ ತರಬೇತಿ ಪಡೆದ, ಸೇವಾಮನೋಭಾವದ ಹುಡುಗ-ಹುಡುಗಿಯರನ್ನು ಹುಡುಹುಡುಕಿ ನಿನ್ನದೇ ಟೀಮ್‌ ಕಟ್ಟಬೇಕು, ಅನ್ನುತ್ತಿದ್ದ ಅಮ್ಮ ಈ ಕುರಿತು ನನಗಿಂತಲೂ ಹೆಚ್ಚು ಕನಸನ್ನು ತಾನೇ ಕಾಣುತ್ತಿದ್ದಳೇನೋ ಅಂತ ಒಮ್ಮೊಮ್ಮೆ ಅನ್ನಿಸಿದ್ದಿದೆ- ಇಂಥ ಅಮ್ಮ ಈಗ ಕನಸುಗಳನ್ನೆಲ್ಲ  ನನ್ನ ಪಾಲಿಗೆ ಬಿಟ್ಟು ಹೀಗೆ ನೇರವಾಗಿ ನಡೆದುಬಿಟ್ಟಳಲ್ಲ.

ತಿಂಡಿತಿಂದು ಇನ್ನೇನು ಕ್ಲಾಸಿಗೆ ಹೊರಡಬೇಕೆನ್ನುವಷ್ಟರಲ್ಲಿ ಅಪ್ಪನ ಫೋನು. “ಶನಿವಾರ ರಜೆಯಿದ್ದರೆ ಬಂದುಹೋಗು. ಎರಡು ದಿನ ಒಟ್ಟಿಗೆ ಇದ್ದ ಹಾಗಾಗುತ್ತೆ’. ಕ್ಷಣಮಾತ್ರವೂ ಯೋಚಿಸದೇ, “ಸರಿ, ಶುಕ್ರವಾರ ರಾತ್ರಿಯ ಬಸ್ಸಿಗೆ ಟಿಕೆಟ… ಬುಕ್‌ ಮಾಡು’ ಎಂದಿದ್ದಳು. ಹಾಗೆ ಬಂದು ಬೆಂಗಳೂರು ತಲುಪಿದವಳನ್ನು ಕರೆದೊಯ್ಯಲು ಬಂದ ಅಪ್ಪ, ದೇಹದಲ್ಲಿ ತುಸು ಹೆಚ್ಚೇ ಸೊರಗಿದ್ದಾನೆ ಎಂದೆನಿಸಿತವಳಿಗೆ. ಎಷ್ಟೆಂದರೂ ಊಟತಿಂಡಿ ಹಿಂದಿನ ಹಾಗಿಲ್ಲವಲ್ಲ, ಹೇಳಿಕೊಳ್ಳದಿದ್ದರೂ ಕೊರಗೇನೂ ಬಿಡದು ಅಂದುಕೊಂಡಳು. ಯಾಕೆ ಹಾಗೆ ಒಂದೇ ಸಮನೆ ಮೆಸೇಜ… ಹಾಕುತ್ತೀಯಾ? ಅಂತ ಕೇಳಹೊರಟವಳು, ಹೇಗೂ ಇರುತ್ತೀನಲ್ಲ ಇನ್ನೆರಡು ದಿನ, ಆರಾಮವಾಗಿ ಮಾತನಾಡಿದರಾಯಿತು ಎಂದೆನಿಸಿ, “ಪಪ್ಪಾ, ದಾರಿಯಲ್ಲಿ ಮಸಾಲೆದೋಸೆ ತಿಂದು ಹೋಗೋಣವಾ? ಶಾರದಮ್ಮನಿಗೆ ಇವತ್ತು ತಿಂಡಿಮಾಡೋದು ಬೇಡ ಅಂದರಾಯಿತು’ ಎಂದವಳಿಗೆ ಇದರಿಂದ ಅಪ್ಪನಿಗೂ ಸ್ವಲ್ಪ$ಬದಲಾವಣೆಯಾದೀತು ಎನ್ನುವ ವಿಚಾರ ಬಂದಿದ್ದೇ ಅರೇ, ಅಮ್ಮನ ಮೈದೊಗಲಿನ ಭಾಗವೇ ಆಗಿಬಿಟ್ಟಂತಿದ್ದ ಕಾಳಜಿ, ನನಗೇ ಅರಿವಿಲ್ಲದ ಹಾಗೆ ನನ್ನೊಳಗಿನ ಭಾಗವಾಗಿಬಿಟ್ಟಿದೆಯಲ್ಲ, ಎಂದೆನಿಸದೇ ಇರಲಿಲ್ಲ. ಈ ದಿನ ಬರುತ್ತದೆ ಅಂತ ಅಮ್ಮನಿಗೆ ಗೊತ್ತಿತ್ತಾ? ಸ್ವಲ್ಪ$ಅತಿಯೇ ಆಯಿತೇನೋ ಎಂಬಂತಹ ಸಲುಗೆಯಲ್ಲಿ ತಾನು ಅಪ್ಪನಿಗೆ ಏನೇನೋ ಹೇಳಿಬಿಟ್ಟರೆ ನೊಂದುಕೊಳ್ಳುತ್ತಿದ್ದಳು ಅಮ್ಮ. ಅವರು ನಿನ್ನ ಮೇಲಿನ ಪ್ರೀತಿಯಿಂದ ಸಹಿಸ್ಕೋತಿದಾರೆ ಕಣೇ. ಅವರೂ ನೊಂದೊRàತಾರೆ. ಹೇಳಲ್ಲ ಅಷ್ಟೇ. ನಾಳೆ ನಾನು ಇÇÉಾಂದ್ರೆ ನೀನೇ ಅವರನ್ನು ನೋಡ್ಕೊàಬೇಕು. ಮನಸ್ಸಿಗೆ       ಬೇಸರ ಆದ್ರೂ ಹೇಗೆ ತೋರಿಸ್ಕೋತಾರೆ, ಯಾರಹತ್ರ ಹೇಳ್ಕೊàತಾರೆ ಹೇಳು? ಅದ್ಕೆà ಹಾಗೆ ಬೇಸರ ಮಾಡದಿರೋ ತರ ಮಾತನಾಡಬೇಕು, ತಮಾಷೆ ಕೂಡ ಮನಸ್ಸಿಗೆ ನೋವು ತರಬಾರದು, ಅಂತ ಅವಳೆಷ್ಟು ಬಾರಿ ಹೇಳಿಲ್ಲ. 

ರಾತ್ರಿ ಊಟಮುಗಿಯುತ್ತಲೇ,  “ಯಾವುದಾದ್ರೂ ಮೂವಿ ನೋಡೋಣಾÌ ಪಪ್ಪಾ?’ ಎಂದು ತುಹಿನಾ ಕೇಳಿದಾಗ ಅದಕ್ಕೇ ಕಾದಿದ್ದವನಂತೆ ಗೋಡೆಗೆ ನೇತಾಡಿಸಿದ್ದ ಟಿವಿಗೆ ಲ್ಯಾಪ್‌ಟಾಪ್‌ ಕನೆಕr… ಮಾಡಲು ಆರಂಭಿಸಿಬಿಟ್ಟಿದ್ದ ಅಪ್ಪ. ಮೊದಲೇ ಹುಡುಕಿ ಇಟ್ಟಿದ್ದನೇನೋ ಎನ್ನುವ ಹಾಗೆ, ನಾಸಿರುದ್ದೀನ್‌ ಶಾ-ಶಬಾನಾ ಆಜ್ಮಿ ನಟಿಸಿದ್ದ ಮಾಸೂಮ… ಪರದೆಯ ಮೇಲೆ ಮೂಡಲಾರಂಭಿಸಿತು. ಅಮ್ಮನೊಡನೆ ಕುಳಿತು ಟಿವಿನೋ ಮೂವಿನೋ ನೋಡದಿದ್ದರೂ ಅಪ್ಪನಿಗೆ ಅದು ಹೇಗೆ ಇಷ್ಟು ಚೆನ್ನಾಗಿಗೊತ್ತಿದೆ, ಇದು ಅಮ್ಮನ ಫೇವರಿಟ… ಮೂವಿ ಎಂದು ಆಶ್ಚರ್ಯವಾಯಿತವಳಿಗೆ. ಅರ್ಧ ಮೂವಿಯೂ ಆಗಿರಲಿಲ್ಲ, ತುಹಿನಾಳಿಗೆ ಅಮ್ಮ ಪದೇಪದೇ ನೆನಪಿಗೆ ಬರತೊಡಗಿದ್ದಕ್ಕೋ ಏನೋ ಮುಂದೆ ನೋಡುವುದೇ ಬೇಡ ಎನಿಸತೊಡಗಿತು. “ಪಪ್ಪಾ, ಸ್ವಲ್ಪ$ಹೊತ್ತುಬಿಟ್ಟು ಮುಂದುವರೆಸೋಣವಾ?’ಎಂದಿದ್ದಕ್ಕೆ ಅಪ್ಪಎದ್ದು ಬಾತೂಮಿಗೆ ಹಲ್ಲುಜ್ಜಲು ಹೋದ. 

ಎಂದಿನಂತೆ ಅಂದೂ ರಾತ್ರಿ ಹತ್ತೂವರೆಗೆ ಅಮ್ಮನೊಡನೆ ಮಾತನಾಡಿದಾಗ ಅಷ್ಟೇನೂ ಅಸ್ವಸ್ಥಳಾದಂತೆ ಕಾಣುತ್ತಿರಲಿಲ್ಲ. ಯಾಕೆ, ಸ್ವಲ್ಪ ಸುಸ್ತಾದ ಹಾಗೆ ಮಾತನಾಡುತ್ತಿದ್ದೀಯಾ? ಅಂತ ಕೇಳಿದರೆ, “ಈ ತಿಂಗಳು ತುಂಬಾ ದಿನ ಬ್ಲೀಡಿಂಗ್‌ ಇತ್ತಲ್ಲ, ಸೋ ಫೀಲ… ಅಬಿಟ…ಅನೀಮಿಕ್‌’ ಅಂದಿದ್ದಳು. ಮೆನೋಪಾಸ್‌ ಹಂತದಲ್ಲಿ ಅವಳು ಅನುಭವಿಸುತ್ತಿರುವ ತೊಂದರೆ ತನಗೆ ತಿಳಿದಿದ್ದೇ, ಹೊಸದೇನಲ್ಲ. ಆದರೂ ಅಚಾನಕ್‌ ಹೀಗೆ. ತಾನು ಬರುವಷ್ಟರಲ್ಲಿ ಅಮ್ಮನ ಶರೀರವನ್ನು ಹಾಸ್ಪಿಟಲ್‌ನಿಂದ ಮನೆಗೆ ತಂದಾಗಿತ್ತು. ಹಾರ್ಟ್‌ ಅಟ್ಯಾಕ್‌ನಿಂದ ಸಾವು ಸಂಭವಿಸಿದೆ ಎಂದು ಡಾಕ್ಟರ್‌ ಹೇಳಿದ್ದರು. ಹಾಗಾದರೆ ಅವಳಿಗೆ ಈ ಮೊದಲು ತೊಂದರೆಯನ್ನು ಸೂಚಿಸುವ ಯಾವ ಲಕ್ಷಣವೂ ಕಾಣಿಸಿಕೊಳ್ಳಲೇ ಇಲ್ಲವೇ? ಕಂಡರೂ ಅಮ್ಮ ಅಲಕ್ಷ್ಯ ಮಾಡಿದಳೇ? ಸಾಯುವ ಮೊದಲು ಅಮ ¾ಒಂದಿಷ್ಟಾದರೂ ಒ¨ªಾಡಿರಲೇಬೇಕಲ್ಲ. ಅವಳು ಮಲಗಿದ್ದ ಹಾಸಿಗೆ, ತಾನು ರೂಮಿನ ಒಳಹೊಕ್ಕಾಗಲೂ ಹಾಗೇ ಕೆದರಿಬಿದ್ದಿತ್ತಲ್ಲವೇ? ಕರೆದೋ ಕೂಗಿಯೋ ಅಪ್ಪನ ಗಮನಸೆಳೆದಿದ್ದರೆ ಹತ್ತಿರದಲ್ಲಿಯೇ ಇದ್ದ ಆಸ್ಪತ್ರೆಗೆ ಸೇರಿಸಲು ಎಷ್ಟು ಸಮಯವೂ ತಗಲುತ್ತಿರಲಿಲ್ಲ. ಅಮ್ಮ ಉಳಿಯಬಹುದಿತ್ತೇನೋ. ತುಹಿನಾಳ ಮನದಲ್ಲಿ ಕೊನೆಮೊದಲಿಲ್ಲದ ಆಲೋಚನೆ.

ಅನ್ಯಮನಸ್ಕಳಾಗಿ ಕುಳಿತಿದ್ದವಳು ಬೆರಳಿಗೆ ತಾಕಿದ ಅಪ್ಪನ ಮೊಬೈಲ್‌ ಬಟನ್‌ಗಳನ್ನು ಅಷ್ಟೇ ಯಾಂತ್ರಿಕವಾಗಿ ಒತ್ತುತ್ತ ಹೋದಳು. ಇನ್ನೊಬ್ಬರ ಖಾಸಗೀತನವನ್ನು ಎಂದೂ ಯಾವ ಕಾರಣಕ್ಕೂ ಅತಿಕ್ರಮಿಸದಂತೆ ಅಮ್ಮ ಮಾಡಿದ್ದ ಪಾಠ, ತುಂಬಿದ್ದ ಮೌಲ್ಯ ಇಂದು ಮೂಲೆಗೆ ಸರಿದಿತ್ತು. ವಾಟ್ಸಾಪ್‌ ಮೆಸೇಜುಗಳನ್ನು ಒಂದೊಂದಾಗಿ ಸೊðàಲ್‌ಡೌನ್‌ ಮಾಡತೊಡಗಿದಳು. ಶಾಲಿನಿ-2 ಎಂಬ ಹೆಸರು ಕಣ್ಣಿಗೆ ಬಿದ್ದಿದ್ದೇ ಜೀವದಲ್ಲಿ ಒಮ್ಮೆಗೇ ಅದೇನೋ ವಿಚಿತ್ರ ಅನುಭವ. ಇದೀಗ ಅಮ್ಮನದೇ ಮೇಸೇಜ… ಬಂತೇನೋ ಎಂಬ ಹಾಗೆ ಒಂದೊಂದನ್ನೇ ಓದತೊಡಗಿದಳು ತುಹಿನ.

“”ಪ್ಲೀಸ್‌, ಎದ್ದುಬರ್ತೀರಾ? ನನಗೆ ವಿಪರೀತ ತ್ರಾಸಾಗುತ್ತಿದೆ”-   11.34
“”ಕರೀತಿರೋದು, ಕೂಗ್ತಿರೋದು ನಿಮಗೆ ಕೇಳ್ತಿಲ್ಲ. ಇಯರ್‌ ಫೋನ್‌ ತೆಗೆದಿಡಿ. ಪ್ಲೀಸ್‌ ಕೂಗೋಕೂ ಆಗ್ತಿಲ್ಲ’-  12.48.
Want water& 1.27
wamt wztrr-&1.39
ಓಗಾಡ್‌! ತಾನು ಪ್ರಸೆಂಟೇಶನ್‌ ರೆಡಿಮಾಡಿ ಮಲಗುವಾಗ ರಾತ್ರಿ ಎರಡೂ ಮುಕ್ಕಾಲಾಗಿತ್ತು. ಬೆಳಿಗ್ಗೆ ಏಳುವುದು ಗಂಟೆ ಎಂಟಾಗಿತ್ತು ಎಂದಿದ್ದನಲ್ಲವೇ ಅಪ್ಪ. ಯಾವತ್ತೂ ಆರಕ್ಕೇ ಎದ್ದು ವಾಕಿಂಗ್‌-ಪ್ರಾಣಾಯಾಮ-ಧ್ಯಾನ ಅಂತೆಲ್ಲ ಚಟುವಟಿಕೆಯಿಂದಿರುವ ಅಮ್ಮ ಇನ್ನೂ ಏಕೆ ಎದ್ದಿಲ್ಲ ಅಂತ ನೋಡಿದಾಗ ಅವಳ ದೇಹದಲ್ಲಿ ಯಾವ ಚಲನೆಯೂ ಇರಲಿಲ್ಲವಂತೆ, ಅಕ್ಕಪಕ್ಕದವರ ಸಹಾಯದಿಂದ ಅಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ಎಲ್ಲವೂ ಮುಗಿದುಹೋಗಿದೆ ಎಂದು ಡಾಕ್ಟರ್‌ ಕೈಚೆಲ್ಲಿದ್ದರಂತೆ. ರಾತ್ರಿ ಎರಡು ಗಂಟೆಯ ಆಸುಪಾಸಿಗೆ ಅವಳ ಪ್ರಾಣಹೋಗಿದೆ ಅಂದಿದ್ದ ನೆನಪು ಅಂದರೆ, ಬರೋಬ್ಬರಿ ನಾಲ್ಕು ತಾಸಿಗೂ ಮೇಲ್ಪಟ್ಟು ಅಮ್ಮನ ದೇಹದ ಪಕ್ಕದಲ್ಲಿಯೇ ಮಲಗಿದ್ದರೂ ಅವಳು ಉಸಿರಾಡುತ್ತಿಲ್ಲ ಅಂತ ಅಪ್ಪನಿಗೆ ಗೊತ್ತಾಗದೇ ಹೋಯಿತೇ? ಎರಡೂ ಕೈಯಿಂದ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಳು ತುಹಿನಾ.

ನಿಮ್ಮಪ್ಪನಿಗೆ ಒಂದಲ್ಲ ಒಂದು ದಿನ ಕೌನ್ಸೆಲಿಂಗ್‌ನ ಅಗತ್ಯ ಬೀಳುತ್ತೆ ನೋಡು… ಆದರೆ ಆ ದಿನ ಬಾರದಿರಲಿ ಎನ್ನುವುದು ನನ್ನ ಪ್ರಾರ್ಥನೆ ಅಂದಿದ್ದೆಯಲ್ಲವೇ ಅಮ್ಮಾ… ಇದು ಹೀಗೆ ಬರುತ್ತೆ ಅಂದುಕೊಂಡಿರಲಿಲ್ಲ.
ಬೆಳಿಗ್ಗೆ ಎದ್ದು, ಹಿಂದಿನ ದಿನ ಒಣಹಾಕಿದ್ದ ಬಟ್ಟೆಗಳನ್ನೆಲ್ಲ ಮಡಚುತ್ತ “”ಪಪ್ಪಾ ಇವತ್ತು ರಾತ್ರಿ ಮಣಿಪಾಲಿಗೆ ಇನ್ನೊಂದು ಟಿಕೆಟ್ ಮಾಡಿಸು.. ನಾಳೆ ಬೆಳಿಗ್ಗೆ ಡಾ. ಪ್ರಶಾಂತ್‌ ಹತ್ತಿರ ನಿನಗೆ ಅಪಾಯಿಂಟ್‌ಮೆಂಟ… ತೆಗೆದುಕೊಂಡಾಗಿದೆ” ಎನ್ನುವಾಗ, ಇದಕ್ಕಾಗಿ ನಿನ್ನನ್ನು ಕೇಳುವ ಅಗತ್ಯವೂ ನನಗಿಲ್ಲ ಎನ್ನುವ ಸ್ಪಷ್ಟತೆ ಅವಳ ಮಾತಿನಲ್ಲಿತ್ತು.

ಸಹನಾ ಹೆಗಡೆ

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.