ಸವಾಲಿಗೆ ಅಂಜದ ಎಂಡೋಪೀಡಿತೆಯಿಂದ ಸಾಧನೆ 


Team Udayavani, Jun 17, 2018, 11:44 AM IST

17-june-5.jpg

ಪುತ್ತೂರು: ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಅಂಜದೆ ಮುನ್ನಡೆಯುವವರು ಬಹಳ ಕಡಿಮೆ. ಗೆಲ್ಲುವ ದಾರಿ ಕಾಣದೇ ತಳಮಳಿಸುವವರಿಗೆ ಸೋತು ಗೆದ್ದ ಸಾಧಕರು ಸ್ಫೂರ್ತಿಯೂ ಆಗುತ್ತಾರೆ. ಕೈ ಕಾಲುಗಳು ಶಾಶ್ವತ ಊನಕ್ಕೊಳಗಾಗಿ ತಿರುಚಿಕೊಂಡಿವೆ. ಕೈಯಲ್ಲೊಂದು ಎಲ್ಬೋ ಸ್ಟಿಕ್‌ ಹಿಡಿದುಕೊಂಡು ಮೆಟ್ಟಿಲುಗಳನ್ನು ಹತ್ತಿ ಶಾಲಾ ಕೊಠಡಿಗೆ ಬರುವುದನ್ನು ನೋಡುತ್ತಿದ್ದರೆ ಮನಸೊಮ್ಮೆ ಮರುಗದೇ ಇರಲಾರದು. ಆಕೆಯ ದುರದೃಷ್ಟವೋ ಅಥವಾ ಸರಕಾರದ ಅಚಾತುರ್ಯವೋ ಹುಟ್ಟಿನಿಂದಲೇ ಎಂಡೋಸಲ್ಫಾನ್‌ ಮಹಾಮಾರಿಗೆ ತುತ್ತಾಗಿ ಬದುಕನ್ನು ಕತ್ತಲೆಯನ್ನಾಗಿಸಿತು. ಆದರೆ ಏನಾದರೂ ಸಾಧಿಸಬೇಕೆಂಬ ಮಹದಾಸೆಯಿಂದ ಸಾಧನೆಯ ಕಡೆಗೆ ಸಾಗುತ್ತಿರುವ ಯುವತಿ ಭವ್ಯಾಳ ಕತೆಯಿದು.

ಪುತ್ತೂರು ತಾಲೂಕಿನ ಈಶ್ವರಮಂಗಲದ ಕೂಲಿ ಕಾರ್ಮಿಕ ಮಹಾಲಿಂಗ ಪಾಟಾಳಿ ಹಾಗೂ ಬೀಡಿ ಕಟ್ಟುವ ಕೆಲಸ ಮಾಡುವ ಸಂಜೀವಿ ಅವರ ಪುತ್ರಿ ಭವ್ಯಾ. ಸಣ್ಣ ಮನೆ, ಜೀವನ ಸಾಗಿಸಲು ಸಾಕಾಗದಷ್ಟು ಆದಾಯ, ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿರುವ ಒಬ್ಬ ಅಣ್ಣ, ಇನ್ನೊಬ್ಟಾಕೆ ಅಕ್ಕ ಮದುವೆಯಾಗಿ ಸಂಸಾರಸ್ಥೆ. ಮನೆಯಲ್ಲಿ ಬಡತನದ ಬೇಗೆ, ಇವೆಲ್ಲದರ ನಡುವೆಯೂ ತನ್ನೆರಡು ಮಕ್ಕಳು ಎಂಡೋ ಸಲ್ಫಾನ್‌ ಪೀಡಿತರು ಎಂಬ ಆಘಾತದೊಂದಿಗೇ ಇವರಿಗಾಗಿ ಶ್ರಮಿಸುತ್ತಿದ್ದಾರೆ ಹೆತ್ತವರು.

ತನ್ನ ಪ್ರಾಥಮಿಕ ಶಿಕ್ಷಣವನ್ನು ಮೇನಾಲ ಸರಕಾರಿ ಶಾಲೆಯಲ್ಲಿ ಮುಗಿಸಿದ ಭವ್ಯಾಗೆ ಬರಹಕ್ಕೆ ಅಂಗಾಂಗಗಳು ಸಹಕರಿಸದಿರುವ ಕಾರಣದಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದಾಗ ನಿರಾಶೆಯಾಗಿತ್ತು. ಹೇಗಾದರೂ ಮಾಡಿ ಹತ್ತನೇ ತರಗತಿಯನ್ನು ಪೂರ್ಣಗೊಳಿಸಬೇಕೆಂಬ ಛಲ ಮೂಡಿತು. ಅಲ್ಲಿಂದ ಮುಂದೆ ಒಳ್ಳೆ ಉದ್ಯೊಗ ಪಡೆಯಬೇಕೆಂಬ ಕನಸಿನಿಂದಲೇ ತನ್ನ 28ನೇ ವಯಸ್ಸಿನಲ್ಲಿ ಭವ್ಯಾ ಸೇರಿದ್ದು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ಗೆ, ಹತ್ತನೇ ತರಗತಿಯ ಖಾಸಗಿ ವಿದ್ಯಾರ್ಥಿನಿಯಾಗಿ. ಸಂಸ್ಥೆ ಈಕೆಯ ಓದಿನ ಹಂಬಲವನ್ನು ಪರಿಗಣಿಸಿ ಉಚಿತ ಶಿಕ್ಷಣ ನೀಡಿತು. ವಿದ್ಯಾಭ್ಯಾಸದ ಬಗೆಗಿನ ಆಕೆಯ ಕನಸೇ ಇದೀಗೆ ಭವ್ಯಾ ಎಸೆಸೆಲ್ಸಿ ತೇರ್ಗಡೆಯಾಗಲು ಸಹಕರಿಸಿದೆ.

ಛಲದಿಂದ ಓದಿ 336 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಆತ್ಮವಿಶ್ವಾಸ, ಛಲ ಆಕೆಯ ಸಾಧನೆಗೆ ಪ್ರೇರಣೆ ನೀಡಿದೆ. ಈಕೆ ಮತ್ತೆ ಅದೇ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಯೋಜನೆ ಯಡಿ ಖಾಸಗಿಯಾಗಿ ದ್ವಿತೀಯ ಪಿಯುಸಿ ದೈನಂದಿನ ತರಗತಿಗಳಿಗೆ ಹಾಜರಾಗುತ್ತಿದ್ದಾಳೆ.

ಮಾರ್ಗದರ್ಶನ
ವಿದ್ಯಾರ್ಥಿನಿಗೆ ಬೇಕಾದ ಎಲ್ಲ ರೀತಿಯ ಸಲಹೆ, ಮಾರ್ಗದರ್ಶನ ಒದಗಿಸಿದ್ದೇವೆ. ಅದಕ್ಕೆ ಪ್ರತಿಯಾಗಿ ಆಕೆ ಒಳ್ಳೆಯ ರೀತಿಯಲ್ಲಿ ಸಾಧಿಸಿದ್ದಾಳೆ. ಈ ಬಾರಿಯೂ ಉಚಿತ ಶಿಕ್ಷಣದಡಿಯಲ್ಲಿ ದ್ವಿತೀಯ ಪಿ.ಯು.ಸಿ.ಗೆ ಖಾಸಗಿಯಾಗಿ ಸೇರಿದ್ದಾಳೆ. ಅವಳ ಭವಿಷ್ಯ ಉಜ್ವಲವಾಗಬೇಕೆಂಬುದೇ ನಮ್ಮದೂ ಹಾರೈಕೆ.
-ಪಿ.ವಿ. ಗೋಕುಲ್‌ನಾಥ್‌
ಸಂಚಾಲಕರು, ಪ್ರಗತಿ ಸ್ಟಡಿ ಸೆಂಟರ್‌

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.