ಹುಟ್ಟಿದಾರಭ್ಯ ಕಾಯಿಲೆ ದೂರಕ್ಕೆ ‘ಕಾಸ್ಮೋ ಥೆರಪಿ’

Team Udayavani, Jun 18, 2018, 2:05 AM IST

goswamy-17-6.jpg

ಉಡುಪಿ: ಜೋತಿಷ, ಆಯುರ್ವೇದವನ್ನು ಒಟ್ಟಿಗೆ ತಿಳಿದುಕೊಂಡು ಹುಟ್ಟಿದಾರಭ್ಯದಿಂದ ಆನುವಂಶಿಕವಾಗಿ ಬರುವ ಕಾಯಿಲೆ ದೂರ ಮಾಡಬಹುದು. ಅದಕ್ಕಾಗಿಯೇ ಆಯುರ್ವೇದ ವೈದ್ಯರಿಗೆ ಕಾಸ್ಮೋಥೆರಪಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉಡುಪಿ ಪೇಜಾವರ ಮಠದ ಸಭಾಂಗಣದಲ್ಲಿ ನಡೆಸಲಾಗುತ್ತಿದೆ. ಮೂರು ವರ್ಷದ ಹಿಂದೆಯಷ್ಟೇ ಮಣಿಪಾಲದಲ್ಲಿ  ಆರಂಭಗೊಂಡಿರುವ ಗೋಸ್ವಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೇದಿಕ್‌ ಎಜುಕೇಶನ್‌ ಸಂಸ್ಥೆಯ ಅಧ್ಯಕ್ಷ ಡಾ| ತನ್ಮಯ ಗೋಸ್ವಾಮಿ ಅವರ ನೇತೃತ್ವದಲ್ಲಿ ಕಾಸ್ಮೋ ಥೆರಪಿ ಕುರಿತಾದ ವಿಚಾರ ಸಂಕಿರಣ ಶನಿವಾರದಿಂದ ನಡೆಯುತ್ತಲಿದೆ. ವೇದ ಶಾಸ್ತ್ರ, ಆಯುರ್ವೇದ, ಜೋತಿಷ ಧರ್ಮಶಾಸ್ತ್ರ, ವಾಸ್ತು ಶಾಸ್ತ್ರ ಪಾಠಗಳು ಹಿಂದಿನ ಕಾಲದಲ್ಲಿಯೇ ಇತ್ತು. ಕ್ರಮೇಣ ಮರೆಯಾಗುವ ಹಂತಕ್ಕೆ ಹೋಗಿ ಮತ್ತೆ ಪ್ರಚಲಿತಕ್ಕೆ ಬರುತ್ತಿದೆ.

ಆಯುರ್ವೇದ ವೈದ್ಯರು ಭಾಗಿ
ಚೆನ್ನೈ, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಬಿಜಾಪುರ, ಹಾಸನ ಮೊದಲಾದ ಕಡೆಗಳಿಂದ ಬಂದಿರುವ ಆಯುರ್ವೇದ ವೈದ್ಯರು ವಿಚಾರ ಸಂಕಿರಣದ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಹುಟ್ಟಿದಾರಭ್ಯ ಕಾಯಿಲೆಗಳ ಬಗ್ಗೆ ಡಾ| ತನ್ಮಯ ಗೋಸ್ವಾಮಿಯವರು ತಾನೇ ಬರೆದ ಕಾಸ್ಮೋ ಥೆರಪಿ ಪುಸ್ತಕದ ಮೂಲಕ ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾರೆ. ಸೋಮವಾರ ಸಂಜೆ ಎಲ್ಲ ವಿಷಯಗಳ ಬಗ್ಗೆ ಚರ್ಚಾಕೂಟ  ಇದೆ. ಪಾಲ್ಗೊಂಡವರಿಗೆ ಮುಂದಿನ  ವರ್ಷ ಆನ್‌ ಲೈನ್‌ ಶಿಕ್ಷಣವೂ ಕೊಡಲಾಗುತ್ತದೆ.

ಗ್ರಹ, ಜೀವಿಗಳ ನೇರ ಸಂಬಂಧ
ಗ್ರಹಗಳಿಗೂ ಜೀವಿಗಳಿಗೂ ಅವಿನಾಭಾವ ಸಂಬಂಧವಿದೆ. ಸೂರ್ಯ, ಚಂದ್ರ, ಬುಧ, ಗುರು, ಶುಕ್ರ, ಶನಿ, ಕುಜ ಮೊದಲಾದ ಗ್ರಹಗಳ ಸ್ಥಿತಿಗಳಿಂದ ಮನುಷ್ಯನ ದೇಹಕ್ಕೆ ರೋಗ ಬಾಧಿಸುವುದಿದೆ. ಜಾತಕ, ನಕ್ಷತ್ರ ನೋಡಿಕೊಂಡು ದೇಹಕ್ಕೆ ಬಂದಿರುವ ಕಾಯಿಲೆಗಳನ್ನು ಆಯುರ್ವೇದ ಚಿಕಿತ್ಸೆಯಿಂದ ಗುಣಪಡಿಸಬಹುದು. ಗ್ರಹದೋಷವನ್ನು ಅರ್ಥಮಾಡಿಕೊಂಡು ಆಯುರ್ವೇದ ಚಿಕಿತ್ಸೆಯನ್ನು ರೋಗಿಯ ನಕ್ಷತ್ರಕ್ಕೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಕೊಡಬೇಕಾಗುತ್ತದೆ. ಉದಾ: ಸೂರ್ಯನಿಂದ ಪಿತ್ಥ, ಶನಿಯಿಂದ ವಾತ ದೋಷಗಳು ಮನುಷ್ಯರನ್ನು ಆವರಿಸುತ್ತದೆ. ಇಂತಹ ಸನ್ನಿವೇಶದಲ್ಲಿ ದೇಹಕ್ಕೆ ಏನು, ಹೇಗೆ ಕೊಡಬೇಕು?  ಆಹಾರ ಕ್ರಮದಲ್ಲಿ ಯಾವುದನ್ನು ತಿನ್ನಬೇಕು? ಯಾವುದನ್ನು ತಿನ್ನಬಾರದು ಎನ್ನುವುದನ್ನು ಹೇಳಿಕೊಡಲಾಗುತ್ತದೆ. ಮಾನಸಿಕ ತೊಂದರೆ, ಒತ್ತಡ ನಿಯಂತ್ರಣಕ್ಕೂ ಚಿಕಿತ್ಸೆ ಇದೆ ಎಂದು ಡಾ| ತನ್ಮಯ ಗೋಸ್ವಾಮಿ ಹೇಳುತ್ತಾರೆ. ಆಧುನಿಕ ಖಗೋಳ ವಿಜ್ಞಾನದ ಬಗೆಗೆ ಡಾ|ಎ.ಪಿ.ಭಟ್‌, ಪ್ರಾಚೀನ ಜೋತಿಷ ಶಾಸ್ತ್ರದ ಕುರಿತು ವಿಶ್ವೇಶ್ವರ ಭಟ್‌, ಸುಬ್ರಹ್ಮಣ್ಯ ಭಟ್‌ ಇತರ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು.

ದೇಹ ದಂಡಿಸಿದರೂ ಬೆಂಬಿಡದ ಕಾಯಿಲೆ
ಯೋಗ, ವ್ಯಾಯಾಮ, ಆಟ, ಓಟ ಹೀಗೆ ಎಷ್ಟೇ ದೇಹ ದಂಡಿಸಿದರೂ ಕೆಲ ಹುಟ್ಟಿದಾರಭ್ಯ ಕಾಯಿಲೆಗಳು ಬಂದು ಬಿಡುತ್ತದೆ. ವಿಪರೀತ ಒತ್ತಡ, ಆಧುನಿಕ ಜೀವನ ಶೈಲಿಯೂ ಹಲವಾರು ಕಾಯಿಲೆಗಳಿಗೆ ಮೂಲ ಕಾರಣವಾಗುತ್ತಿದೆ. ಆಯುರ್ವೇದದಿಂದ ಇದನ್ನು ಹೋಗಲಾಡಿಸಬಹುದು. ಜೋತಿಷ ಮತ್ತು ಆಯುರ್ವೇದ ಒಟ್ಟೊಟ್ಟಿಗೇ ಇರಬೇಕು. ಇಲ್ಲಿ ಜೋತಿಷ ಗೊತ್ತಿದ್ದವರಿಗೆ ಆಯುರ್ವೇದ ಗೊತ್ತಿಲ್ಲ. ಆಯುರ್ವೇದ ಪಂಡಿತರಿಗೆ ಜೋತಿಷ ತಿಳಿದಿಲ್ಲ. ಅನುವಂಶೀಯತೆ, ಆಹಾರದ ತಪ್ಪುಗಳಿಂದ ಬರುವ ಕಾಯಿಲೆಗಳನ್ನು ಕಾಸ್ಮೋ ಥೆರಪಿಯಿಂದ ಹೋಗಲಾಡಿಸಬಹುದು. ಹೇಗೆ ಆಕ್ಯುಪೇಶನಲ್‌ ಥೆರಪಿ, ರೇಡಿಯೋಥೆರಪಿ, ಫಿಸಿಯೋಥೆರಪಿ, ಕೀಮೋಥೆರಪಿ ಇರುವ ಹಾಗೆಯೇ ಕಾಸ್ಮೋ ಥೆರಪಿಯೂ ಒಂದಾಗಿದೆ. 
– ಡಾ| ತನ್ಮಯ ಗೋಸ್ವಾಮಿ

ಟಾಪ್ ನ್ಯೂಸ್

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.