ಹಿಂದುತ್ವ ಎಂಬುದು ಅದ್ಭುತ ಜೀವನ ಶೈಲಿ


Team Udayavani, Jun 18, 2018, 6:15 AM IST

ban18061807.jpg

ಬೆಂಗಳೂರು: ಹಿಂದುತ್ವವನ್ನು ಯಾರು ಏನು ಬೇಕಾದರೂ ಕರೆಯಲಿ. ಈ ಜಗತ್ತಿನಲ್ಲಿ ಹುಟ್ಟಿ ಬಂದಿರುವ ಅದ್ಭುತ ಜೀವನ ಶೈಲಿ ಹಿಂದುತ್ವ. ಇದನ್ನು ಎಲ್ಲರೂ ಒಪ್ಪಲೇ ಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ.

ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂಸೊಸೈಟಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕ ಜಿ.ಬಿ.ಹರೀಶ್‌ ಅವರು ಕನ್ನಡಕ್ಕೆ ಅನುವಾದಿಸಿರುವ ಸ್ವಾತಂತ್ರ್ಯ ವೀರ ಸಾವರ್ಕರ್‌ ಅವರ “ಹಿಂದುತ್ವ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದುತ್ವ ಎಂದರೆ ಒಂದು ವಿಚಾರ, ರಾಷ್ಟ್ರೀಯತೆ, ಜಿಜ್ಞಾಸೆಯ ವಿಷಯ ಎನ್ನಲಾಗುತ್ತದೆ. ಹಾಗೆಯೇ ಹಿಂದುತ್ವವನ್ನು ಸಂಸ್ಕೃತಿ, ಆಚರಣೆ, ಸಂಪ್ರದಾಯ, ಮೂಢನಂಬಿಕೆ ಎಂದಾದರೂ ಕರೆಯಲಿ. ಆದರೆ ಜಗತ್ತಿನಲ್ಲಿ ಮೂಡಿಬಂದ ಅದ್ಭುತ ಜೀವನ ಶೈಲಿ ಹಿಂದುತ್ವ. ಜಗತ್ತಿನ ಯಾವ ಭಾಗದಲ್ಲೂ ಇದನ್ನು ಹೀಗೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಸಾವರ್ಕರ್‌ ಅವರ “ಹಿಂದುತ್ವ’ ಕೃತಿಯನ್ನು ಪುಸ್ತಕವೆಂದು ಭಾವಿಸದೆ ಅವರು ಆರಾಧನೆ ಮಾಡಿರುವ ವಿಚಾರವೆಂದು, ಬದುಕಿರುವ ದಾರಿ, ಶೈಲಿ ಎಂದು ಪರಿಗಣಿಸಬೇಕು. ಅದನ್ನು ಶಬ್ದ ರೂಪಕ್ಕೆ ಇಳಿಸಿದ್ದಾರೆ. ಇಂದಿನವರು ಕಾಪಿ, ಪೇಸ್ಟ್‌ ಮಾಡುವ ಪಿಎಚ್‌.ಡಿ ರೀತಿಯದ್ದಲ್ಲ ಈ ಕೃತಿ. ಬದಲಿಗೆ ರಕ್ತಗತವಾಗಿ ಬಂದಿರುವ ತಮ್ಮ ಹೃದಯಾಳದ ಭಾವನೆಯನ್ನು ಶಬ್ದಗಳಲ್ಲಿ ಬಿಚ್ಚಿಟ್ಟಿದ್ದಾರೆ ಎಂದು ವಿವರಿಸಿದರು.

ಹೀನವಾದುದ್ದನ್ನು ದೂಷಿಸುವವನೇ ಹಿಂದು. ಇದಕ್ಕಿಂತ ಸರಳ, ಅಮೋಘ ವ್ಯಾಖ್ಯಾನ ಮತ್ತೂಂದಿಲ್ಲ. ಈ ಮಣ್ಣಿನಲ್ಲಿ ಹುಟ್ಟಿದವರ ಬದುಕು ಹಿಂದುತ್ವ. ಆದರೆ ಕೆಟ್ಟದ್ದನ್ನು ಆರಾಧಿಸಿಕೊಂಡು ಬಂದ ಪರಂಪರೆಯವರಿಗೆ ಇದು ಅರ್ಥವಾಗುವುದಿಲ್ಲ. ಎಲ್ಲ ವಿಚಾರಗಳನ್ನು ನೋಡಿ, ಮನನ ಮಾಡಿ, ಬದುಕಿ ಒಳ್ಳೆಯದ್ದನ್ನಷ್ಟೇ ಸ್ವೀಕರಿಸಿರುವ ಪರಂಪರೆ ನಮ್ಮದು ಎಂದು ಹೆಮ್ಮೆಯಿಂದ ನುಡಿದರು.

ಒಂದು ದೇಶವನ್ನು ನಾಶಪಡಿಸಬೇಕಾದರೆ ಆ ದೇಶದ ಬೆನ್ನೆಲುಬಾಗಿರುವ ವಿಚಾರವನ್ನು ಮೊದಲು ನಾಶಪಡಿಸಬೇಕು. ಬಹುತೇಕ ಪಾಶ್ಚಾತ್ಯರು ಇದನ್ನೇ ಮಾಡಿದ್ದು. ನಮ್ಮವರು ಕೂಡ ಅಂತಹವರೊಂದಿಗೆ ಕೈಜೋಡಿಸಿದರು. ಆರ್ಯರು ಮಧ್ಯ ಏಷ್ಯಾದಿಂದ ಬಂದರು. ದ್ರಾವಿಡರನ್ನು ಹೊರಗಟ್ಟಿ ಪ್ರಭುತ್ವ ಮೆರೆದರು ಎಂಬ ಕಾಕಣ್ಣ- ಗುಬ್ಬಣ್ಣ ಕತೆ ಹೇಳಿದರೇ ಹೊರತು ನಮ್ಮ ಧರ್ಮ, ಸಂಸ್ಕೃತಿ, ಬದುಕು, ಪರಂಪರೆ, ಇತಿಹಾಸದ ಬಗ್ಗೆ ಹೇಳಲೇ ಇಲ್ಲ. ನಾವು ಎಲ್ಲಿಂದಲೂ ಬಂದವರಲ್ಲ. ಭಾರತೀಯ ಹಿಂದೂ ಸಂಸ್ಕೃತಿಯ ಮಣ್ಣಿನಲ್ಲಿ ಹುಟ್ಟಿ ಬಂದವರು ನಾವು. ಅಲೆಮಾರಿ ಸಂಸ್ಕೃತಿ ಅಲ್ಲವೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಹಿಂದುತ್ವ ನಮ್ಮ ಬದುಕು. ನಮ್ಮ ಉಸಿರು. ನಮ್ಮ ಚಿಂತನೆ, ಆರಾಧನೆಯ ಕೇಂದ್ರ. ಇಂದಿನ ವೈಚಾರಿಕ ಮಂಥನದ ಸಂದರ್ಭದಲ್ಲಿ ಈ ರೀತಿಯ ಕೃತಿ ಹೊರತಂದು ವೈಚಾರಿಕ ಮಂಥನಕ್ಕೆ ಮತ್ತೂಮ್ಮೆ ಎಡೆ ಮಾಡಿಕೊಟ್ಟಿರುವುದು ಶ್ಲಾಘನೀಯ, ಅಭಿನಂದನೀಯ. ಹಿಂದುತ್ವವನ್ನು ಅರ್ಥ ಮಾಡಿಸಬೇಕಾದ ವಿಚಾರ ಈ ದೇಶದಲ್ಲಿ ಬರಬಾರದು ಎಂದು ಹೇಳಿದರು.

ಹಿರಿಯ ಸಾಹಿತಿ ಎಂ.ಎನ್‌.ವ್ಯಾಸರಾವ್‌, ಸಾವರ್ಕರ್‌ ಅವರು ತಪಸ್ಸಿನ ರೀತಿಯಲ್ಲಿ ರಚಿಸಿರುವ ಕೃತಿಯಿದು. ಅವರ ಚಿಂತನೆ, ದಾರ್ಶನಿಕತೆಗೆ ತಲೆಬಾಗಬೇಕು. ಅವರ ಚಿಂತನಾಲಹರಿಯಲ್ಲೇ ಅನುವಾದ ಅತ್ಯುತ್ತಮವಾಗಿ ಮೂಡಿಬಂದಿದೆ. ಹಿಂದುತ್ವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅದನ್ನು ಅನುಭಾವಿಸಿ, ಜೀವನ ಶೈಲಿಯನ್ನಾಗಿ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಜಿ.ಬಿ.ಹರೀಶ್‌, ವರಕವಿ ಬೇಂದ್ರೆಯವರಂತೆ ಸಾವರ್ಕರ್‌ ಅವರೂ ಶ್ರೇಷ್ಠ ಕವಿ. ತಮ್ಮ ಸಾಹಿತ್ಯದ ಮೂಲಕ ಭಾರತ ಮಾತೆಗೆ ಕಾವ್ಯಾಭಿಷೇಕ ಮಾಡಿದ ಸ್ವಾತಂತ್ರ್ಯ ವೀರ. ಸೆರೆವಾಸದಲ್ಲಿದ್ದುಕೊಂಡೇ ಇಂತಹ ಅದ್ಭುತ ಕೃತಿ ರಚಿಸಿದ್ದಾರೆ. ಸಿಖVರು ಹಿಂದುಗಳಲ್ಲ ಎಂಬ ಸಂದರ್ಭದಲ್ಲಿ ಸಿಖVರು ಹಿಂದುಗಳೇ ಎಂದು ಪ್ರತಿಪಾದಿಸಿದರು. ಸಿಖVರು ಹಿಂದುಗಳಾದರೆ ಲಿಂಗಾಯಿತರು ಹಿಂದುಗಳಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಕೃತಿ ಕುರಿತು ರೋಹಿತ ಚಕ್ರತೀರ್ಥ ಮಾತನಾಡಿದರು. ಸಮೃದ್ಧ ಸಾಹಿತ್ಯದ ಕೆ.ಆರ್‌.ಹರ್ಷ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.