ಹೂಳೆತ್ತಿ ಗ್ರಾಪಂಗೆ ಗ್ರಾಮಸ್ಥರ ಸೆಡ್ಡು
Team Udayavani, Jun 18, 2018, 9:49 AM IST
ಮಡಿವಾಳಪ್ಪ ಹೇರೂರ
ವಾಡಿ: ಬಾವಿ ಸ್ವಚ್ಛಗೊಳಿಸುವಂತೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಗ್ರಾಪಂ ಆಡಳಿತದ ಬೇಜವಾಬ್ದಾರಿ ಧೋರಣೆಗೆ ಬೇಸತ್ತ ಗ್ರಾಮಸ್ಥರು ತಾವೇ ಮುಂದಾಗಿ ಸ್ವಚ್ಛಗೊಳಿಸಿದ ಪ್ರಸಂಗ ರವಿವಾರ ನಡೆಯಿತು.
ಗ್ರಾಪಂ ಕೇಂದ್ರ ಸ್ಥಾನ ಹೊಂದಿರುವ ರಾವೂರ ಗ್ರಾಮ ನೂರಾರು ಬಾವಿಗಳನ್ನು ಬಾಹುವಿನಲ್ಲಿಟ್ಟುಕೊಂಡ ಐತಿಹಾಸಿಕ ಹಿನ್ನೆಲೆಯುಳ್ಳ ಊರು. ಇಲ್ಲಿ ಶೇ.90ರಷ್ಟು ಮನೆಯ ಅಂಗಳದಲ್ಲಿ ಆಳವಾದ ಪುರಾತನ ಬಾವಿಗಳಿವೆ. ವಿಪರೀತ ಹೂಳು ಮತ್ತು ಭಾರಿ ಪ್ರಮಾಣದ ಕಸಕಡ್ಡಿಗಳಿಂದ ಭರ್ತಿಯಾಗಿ ದುರ್ಗಂಧದ ತಾಣವಾಗಿದ್ದ ಗ್ರಾಮದ ಮಧ್ಯ ಭಾಗದಲ್ಲಿನ 40 ಮತ್ತು 20 ಅಡಿ ಅಗಲದ ಐತಿಹಾಸಿಕ ರಾಮಲಿಂಗ ಬಾವಿ ಸ್ವಚ್ಛತೆಗೆ ಮುಂದಾಗುವ ಮೂಲಕ ಗ್ರಾಮಸ್ಥರು ಆದರ್ಶ ಮೆರೆದಿದ್ದಾರೆ.
ಗ್ರಾಮದ ಗೋವಿಂದಪ್ಪ ಗುರಾಳ, ಅಣವೀರಪ್ಪ ರೊಂಡಿ, ಸಂಗಮ್ಮಾ ಮಾಕಾ, ಈರಮ್ಮ ಸಂಗಾವಿ, ಶಾಂತಮ್ಮ ದಂಡೋತಿ, ಶರಣಮ್ಮ ಹರಸೂರ, ಗಂಗಮ್ಮಾ ರೊಂಡಿ ಎನ್ನುವರು ರವಿವಾರ ಬೆಳಗ್ಗೆ ಸ್ವಯಂ ಪ್ರೇರಿತವಾಗಿ ಬಾವಿ ಸ್ವಚ್ಛತೆಗೆ ಪಣ ತೊಟ್ಟು ಬುಟ್ಟಿ , ಬಕೀಟು ಸೇರಿದಂತೆ ಇತರ ಸಲಕರಣೆಗಳೊಂದಿಗೆ ನೀರಿಗಿಳಿದು ಕಳೆ ಕಿತ್ತು ಹಾಕಿದರು. ಹೂಳೆತ್ತಿ ಹೊರ ಚೆಲ್ಲುವ ಮೂಲಕ ಬಾವಿಯನ್ನು ಕೊಳೆಯಿಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾದರು.
ಚುನಾಯಿತ ಸದಸ್ಯರು ಹಾಗೂ ಗ್ರಾಪಂ ಅಧಿಕಾರಿಗಳು ಕರ್ತವ್ಯ ಮರೆತು ಮಲಗಿದ್ದರಿಂದ ನಾವೇ ಬಾವಿ ಸ್ವಚ್ಛಗೊಳಿಸಬೇಕಾದ ಪ್ರಸಂಗ ಎದುರಾಯಿತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಜಾಗೃತಿಯಿಂದ ಐತಿಹಾಸಿಕ ಬಾವಿಯೊಂದು ಕೊನೆಗೂ ಕಸ-ಕೊಳೆಯಿಂದ ಮುಕ್ತಗೊಂಡು ನೀರು ಬಳಕೆಗೆ ಆಹ್ವಾನ ನೀಡುತ್ತಿದೆ. ಗ್ರಾಮದ ಶ್ರೀರಾಮಲಿಂಗ ಮಠದ ಹತ್ತಿರದ ರಾಮಲಿಂಗ ಬಾವಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇದು ಇಡೀ ಗ್ರಾಮಕ್ಕೆ ನೀರಿನ ಅನುಕೂಲತೆ ಒದಗಿಸುವ ಮುಖ್ಯ ಬಾವಿಯಾಗಿದೆ. ನಿರ್ವಹಣೆ ಕೊರತೆಯಿಂದ ಇಡೀ ಬಾವಿ ಹೂಳಿನಿಂದ ಆವರಿಸಿತ್ತು. ಕಸದಿಂದ ಗೊಬ್ಬು ನಾರುತ್ತಿತ್ತು. ಕೊಳೆ ನೀರಿನಿಂದ ಭರ್ತಿಯಾಗಿ ರೋಗಾಣುಗಳ ತಾಣವಾಗಿತ್ತು. ಇದರ ಸ್ವಚ್ಛತೆ ಮಾಡುವಂತೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಗ್ರಾಪಂ ಅಧಿಕಾರಿಗಳು ನಿರ್ಲಕ್ಷಿಸಿದ್ದರು. ಕುಂದುಕೊರತೆಗಳ ಕುರಿತು ಸಾರ್ವಜನಿಕರು ಮನವಿ ನೀಡಲಿ ಅಥವಾ ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಳ್ಳಲಿ. ತಮಗೇನೂ ಸಂಬಂಧವಿಲ್ಲದಂತೆ ಗ್ರಾಪಂ ಅಧಿಕಾರಿಗಳು ವರ್ತಿಸುತ್ತಾರೆ. ಇವರ ಬೇಜವಾಬ್ದಾರಿಗೆ
ಬೇಸತ್ತು ಗ್ರಾಮಸ್ಥರು ಸ್ವಚ್ಛಗೊಳಿಸಿರುವುದು ಗ್ರಾಪಂ ಆಡಳಿತಕ್ಕೆ ನಾಚಿಕೆ ತರಿಸುವಂತಿದೆ. ಬಾವಿಯ ಜೀರ್ಣೋದ್ಧಾರಕ್ಕೆ ಆಡಳಿತ ಇನ್ನಾದರೂ ಕ್ರಮಕೈಗೊಳ್ಳಲಿ.
ಮಲ್ಲಿಕ್‌ಪಾಶಾ ಮೌಜನ್, ಸಿದ್ಧಲಿಂಗ ಬಾಳಿ, ಯುವ ಮುಖಂಡರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.