ಡಬ್ಬಲ್‌ ಇಂಜಿನ್‌ಗೆ ಟ್ರಬಲ್‌!

Team Udayavani, Jun 18, 2018, 11:08 AM IST

double-engine.jpg

ಒಂದು ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಗೆ ಮುನ್ನವೇ ಆ ಚಿತ್ರ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿಬಿಟ್ಟರೆ? ಅರೇ, ಇದೇನಿದು, ಪ್ರೇಕ್ಷಕರ ಮುಂದೆ ಬರುವ ಮುನ್ನವೇ, ಆನ್‌ಲೈನ್‌ನಲ್ಲಿ ಚಿತ್ರ ಬಿಡುಗಡೆಯೇ? ಈ ಪ್ರಶ್ನೆ ಎಂಥವರಿಗೂ ಕಾಡದೇ ಇರದು. ಆದರೂ, ಅಂಥದ್ದೊಂದು ಗೊಂದಲಕ್ಕೆ “ಡಬ್ಬಲ್‌ ಇಂಜಿನ್‌’ ಚಿತ್ರ ಕಾರಣವಾಗಿದೆ. ಹೌದು, ಚಂದ್ರಮೋಹನ್‌ ನಿರ್ದೇಶನದ “ಡಬ್ಬಲ್‌ ಎಂಜಿನ್‌’ ಚಿತ್ರದ ಟ್ರೈಲರ್‌ ಎಲ್ಲೆಡೆ ಜೋರು ಸದ್ದು ಮಾಡಿದೆ.

ಆದರೆ, ಟ್ರೈಲರ್‌ ಬಿಡುಗಡೆಯಾಗಿ ಕೇವಲ ಆರು ಗಂಟೆಯಲ್ಲೇ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಆ ಖುಷಿಯಲ್ಲಿದ್ದ ಚಿತ್ರತಂಡಕ್ಕೆ, ಟ್ರೈಲರ್‌ ಬಿಡುಗಡೆ ದಿನದಂದೇ ಶಾಕ್‌ ಆಗಿಬಿಟ್ಟಿದೆ. ಆ ಶಾಕ್‌ಗೆ ಕಾರಣ, ಚಂದ್ರಮೋಹನ್‌ ನಿರ್ದೇಶನದ “ಬಾಂಬೆ ಮಿಠಾಯಿ’ ಚಿತ್ರವನ್ನು ಕಿಡಿಗೇಡಿಗಳು ಯು ಟ್ಯೂಬ್‌ಗ ಅಪ್‌ಲೋಡ್‌ ಮಾಡಿ, “ಡಬ್ಬಲ್‌ ಇಂಜಿನ್‌’ ಫ‌ುಲ್‌ ಮೂವಿ ಎಂದು ಸ್ಟೇಟಸ್‌ ಹಾಕಿಬಿಟ್ಟಿದ್ದಾರೆ.

ಜಿನರೆಲ್ಲಾ ಯೂಟ್ಯೂಬ್‌ನಲ್ಲಿ “ಡಬ್ಬಲ್‌ ಇಂಜಿನ್‌’ ಚಿತ್ರ ಅಪ್‌ಲೋಡ್‌ ಆಗಿದೆ ಅಂತ ನೋಡೋಕೆ ಶುರುಮಾಡಿದ್ದಾರೆ. ಹೀಗೇ ಬಿಟ್ಟರೆ, ಸಮಸ್ಯೆ ಆಗುತ್ತದೆ ಎಂದು ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ಕೊಟ್ಟಿದ್ದಾಗಿ ಹೇಳುತ್ತಾರೆ ನಿರ್ದೇಶಕ ಚಂದ್ರಮೋಹನ್‌. ಈ ಹಿಂದೆ ಅವರ ನಿರ್ದೇಶನದ “ಬಾಂಬೆ ಮಿಠಾಯಿ’ ಚಿತ್ರ ಬಿಡುಗಡೆಯಾಗಿ ಮೂರನೇ ವಾರಕ್ಕೆ ಪೈರಸಿ ಮಾಡಿ ಅಪ್‌ಲೋಡ್‌ ಮಾಡಲಾಗಿತ್ತಂತೆ.

ಅದರಿಂದ ಚಿತ್ರಕ್ಕೆ ಪೆಟ್ಟು ಬಿದ್ದಿತ್ತು ಎಂದು ಹೇಳುವ ನಿರ್ದೇಶಕರು, “ದೊಡ್ಡ ನಿರ್ಮಾಪಕರಾದರೆ, ಇಂತಹ ಪೆಟ್ಟು ಸಹಿಸಿಕೊಳ್ಳುತ್ತಾರೆ. ನಮ್ಮಂತಹ ಹೊಸಬರಿಗೆ ತುಂಬಾ ಸಮಸ್ಯೆ ಎದುರಾಗುತ್ತದೆ. ನಾವು ಸಿನಿಮಾ ಮತ್ತು ಚಿತ್ರಮಂದಿರಗಳನ್ನು ನಂಬಿದವರು. ಹೀಗೆಲ್ಲಾ ಆಗಿಬಿಟ್ಟರೆ ಹೇಗೆ ಎಂಬ ಭಯದಿಂದ ಮುಂಜಿಾಗ್ರತೆಗಾಗಿ ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ಕೊಟ್ಟಿದ್ದಾರೆ’ ಎನ್ನುತ್ತಾರೆ.

ಅಂದಹಾಗೆ, ಚಿತ್ರವನ್ನು ಜಿುಲೈ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಯೋಚಿಸಲಾಗಿದೆ. ಚಿತ್ರದಲ್ಲಿ ಸುಮನ್‌ರಂಗನಾಥ್‌, ಚಿಕ್ಕಣ್ಣ, ದತ್ತಣ್ಣ, ಸಾಧು ಕೋಕಿಲ, ಅಚ್ಯುತ್‌ ಕುಮಾರ್‌, ಸುಚೇಂದ್ರ ಪ್ರಸಾದ್‌ ಇತರರು ನಟಿಸಿದ್ದಾರೆ. ವೀರ್‌ ಸಮರ್ಥ್ ಸಂಗೀತವಿದೆ. ಸೂರ್ಯ ಎಸ್‌.ಕಿರಣ್‌ ಛಾಯಾಗ್ರಹಣವಿದೆ. ಎಸ್‌.ಆರ್‌.ಎಸ್‌. ಗ್ರೂಪ್‌ ಬ್ಯಾನರ್‌ನಡಿ ಗೆಳೆಯರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದವರು ಇಂದು (ಸೋಮವಾರ) ಕರ್ನಾಟಕ ಚಲನಚಿತ್ರ ವಾಣಿಜಿ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರನ್ನು ಭೇಟಿ ಮಾಡಿ, ಸಮಸ್ಯೆ ಕುರಿತು ಮನವಿ ಮಾಡಲು ನಿರ್ಧರಿಸಿದ್ದಾರೆ.

ಟಾಪ್ ನ್ಯೂಸ್

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ

12

Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ

Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ

Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

10

Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ssa

Manipal: ಗಾಂಜಾ ಸೇವನೆ; ವ್ಯಕ್ತಿ ಪೊಲೀಸ್‌ ವಶ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ

12

Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ

Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು

Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.