ಮೂಲ ಸೌಲಭ್ಯಕ್ಕಾಗಿ ಕಾಯುತ್ತಿದೆ ರುದ್ರಭೂಮಿ
Team Udayavani, Jun 18, 2018, 3:37 PM IST
ರಮೇಶ ಕರುವಾನೆ
ಶೃಂಗೇರಿ: ಪಟ್ಟಣದ ಹೊರವಲಯದಲ್ಲಿರುವ ವಿದ್ಯಾರಣ್ಯಪುರ ಗ್ರಾ.ಪಂ.ನ ಕೆ.ವಿ.ಆರ್. ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಅನುದಾನದ ಕೊರತೆಯಿಂದ ಇನ್ನೂ ಅನೇಕ ಕಾಮಗಾರಿ ಬಾಕಿ ಇದೆ.
ಈ ರುದ್ರಭೂಮಿಯನ್ನು ಪಟ್ಟಣಕ್ಕೆ ಸಮೀಪವಿರುವ ತುಂಗಾನದಿ ದಡದಲ್ಲಿ 1997 ರಲ್ಲಿ ನಿರ್ಮಾಣ ಮಾಡಲಾಗಿದೆ.ಈ ರುದ್ರಭೂಮಿ 70 ಗುಂಟೆ ಜಾಗದಲ್ಲಿದೆ. ಇಲ್ಲಿ ಒಂದೇ ಬಾರಿ ಎರಡು ಶವ ಸಂಸ್ಕಾರ ಮಾಡಲು ಅವಕಾಶವಿದ್ದು, ಸಿಲಿಕಾನ್ ಛೇಂಬರ್ ಗಳಿದ್ದು,ಕಡಿಮೆ ಕಟ್ಟಿಗೆಯಿಂದ ಶವ ದಹನವಾಗುತ್ತದೆ.
ಈಗಾಗಲೇ ರುದ್ರಭೂಮಿಯ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದ್ದು, ನದಿಗೆ ತೆರಳುವ ದಾರಿಯನ್ನು ಕಾಂಕ್ರಿಟಿಕರಣ ಮಾಡಿ, ಮೆಟ್ಟಿಲು ನಿರ್ಮಿಸಲಾಗಿದೆ. ನದಿಗೆ ಕರ್ತೃಗಳು ಇಳಿಯಬೇಕಿದ್ದು, ನದಿಗೆ ಇಳಿಯುವಲ್ಲಿ ಕನಿಷ್ಠ 10 ಅಡಿ ಅಗಲಕ್ಕೆ ಸ್ನಾನ ಘಟ್ಟ ಆಗಬೇಕಿದೆ.
ರುದ್ರಭೂಮಿಯಲ್ಲಿ ದಹನ ಮತ್ತು ಶವವನ್ನು ಹೂಳುವುದಕ್ಕೂ ಜಾಗ ಮೀಸಲು ಇಡಲಾಗಿದೆ. ಆದರೆ ಅನೇಕ ಮೂಲಭೂತ ಸಮಸ್ಯೆ ಇರುವ ರುದ್ರಭೂಮಿಗೆಅನುದಾನದ ಕೊರತೆ ಉಂಟಾಗಿದೆ. ವಿದ್ಯುತ್ ವ್ಯವಸ್ಥೆ ಇದ್ದರೂ, ವಿದ್ಯುತ್ ಕಡಿತಗೊಂಡಾಗ ಪರ್ಯಾಯ ಬೆಳಕಿನ ವ್ಯವಸ್ಥೆ ಇಲ್ಲ. ಶಾಶ್ವತ ನೀರಿನ ವ್ಯವಸ್ಥೆ, ರುದ್ರಭೂಮಿಯಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಆಗಬೇಕಿದೆ. ಪಕ್ಕದಲ್ಲಿ ತುಂಗಾ ನದಿ ಹರಿಯುತ್ತಿದೆ.
ಸದ್ಯಕ್ಕೆ ರುದ್ರಭೂಮಿ ನಿರ್ವಾಹಕರ ಮನೆ ಪೈಪ್ ಮೂಲಕ ನೀರು ಒದಗಿಸಲಾಗುತ್ತದೆ. ವಿದ್ಯುತ್ ವ್ಯವಸ್ಥೆ
ಇದ್ದರೂ, ವಿದ್ಯುತ್ ಕಡಿತ ಉಂಟಾದಾಗ ಬದಲಿ ವ್ಯವಸ್ಥೆಯಾದ ಸೋಲಾರ್ ದೀಪ ಅಥವಾ ಬ್ಯಾಟರಿ
ದೀಪದ ವ್ಯವಸ್ಥೆ ಇಲ್ಲ. ಶವ ಸಂಸ್ಕಾರ ಮಾಡಿದ ನಂತರ ಕರ್ತೃ ನದಿಗೆ ಸ್ನಾನಕ್ಕೆ ಇಳಿಯಬೇಕಾಗುತ್ತದೆ. ಆದರೆನದಿಗೆ ಇಳಿಯುವ ಜಾಗದಲ್ಲಿ ಮೆಟ್ಟಿಲು ನಿರ್ಮಾಣ ಆಗದ್ದರಿಂದ ಈ ಜಾಗ ಅಪಾಯಕಾರಿಯಾಗಿದೆ.
ದಾನಿಗಳು ನೀಡಿದ ಸೌದೆಯನ್ನು ಸಂಸ್ಕಾರಕ್ಕೆ ಬಳಸಲಾಗುತ್ತಿದೆ. ರುದ್ರಭೂಮಿಯ ನಿರ್ವಾಹಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿರುವ ಸಮಿತಿ, ಸಂಬಳ ಅಥವಾ ಗೌರವಧನ ನೀಡುತ್ತಿಲ್ಲ. ಶವ ಸಂಸ್ಕಾರ ಮಾಡುವವರು ಸಮಿತಿಗೆ 1000 ಶುಲ್ಕ ಪಾವತಿಸಬೇಕಿದ್ದು, ಇದರಲ್ಲಿ ಸೌದೆ ಮತ್ತು ನಿರ್ವಹಣಾ ಖರ್ಚುಗಳಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ಬರುವ ಅಲ್ಪ ಆದಾಯದಲ್ಲಿ ನಿರ್ವಾಹಕರಿಗೆ ಸಂಬಳ ನೀಡಲು ಸಮಿತಿಗೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕಾರ್ಯದರ್ಶಿ ಶೃಂಗೇರಿ ಸುಬ್ಬಣ್ಣ.
ರುದ್ರಭೂಮಿ ಸ್ಥಳಾಂತರಕ್ಕೆ ಒತ್ತಾಯ:
ರುದ್ರಭೂಮಿ ನಿರ್ಮಾಣದ ಸಂದರ್ಭದಲ್ಲಿ ಇಲ್ಲಿ ಬಹುತೇಕ ಜಾಗ ಖಾಲಿಯಾಗಿತ್ತು. ಆದರೆ ಪಟ್ಟಣ ಅಭಿವೃದ್ಧಿ ಹೊಂದಿದಂತೆ ಕೆವಿಆರ್ ರಸ್ತೆಯಲ್ಲಿ ಮನೆಗಳ ನಿರ್ಮಾಣವಾಗತೊಡಗಿದೆ. ಇದೀಗ ರುದ್ರಭೂಮಿಯ ಆಕ್ಕ ಪಕ್ಕದಲ್ಲಿ ಸಾಕಷ್ಟು ಮನೆಗಳು ಇದೆ. ಶವ ಸಂಸ್ಕಾರದಿಂದ ದಟ್ಟ ಹೊಗೆ ಹಾಗೂ ಪರಿಸರಕ್ಕೆ ತೊಂದರೆಯಗುತ್ತಿದ್ದು, ರುದ್ರಭೂಮಿಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಲಾಗಿತ್ತು.
ಕಳೆದ 20 ವರ್ಷದಿಂದ ರುದ್ರಭೂಮಿಯ ನಿರ್ವಹಣೆ ಮಾಡುತ್ತಿರುವ ರವಿ ಹಗಲು ರಾತ್ರಿ ಎನ್ನದೇ ರುದ್ರಭೂಮಿಗೆ ಬರುವ ಎಲ್ಲಾ ಶವ ಸಂಸ್ಕಾರಕ್ಕೆ ನೆರವಾಗುತ್ತಿದ್ದಾರೆ. ಕಾಂಡಿಮೆಂಟ್ಸ್ ಮಾರಾಟ ಮಾಡುತ್ತಿರುವ ಇವರು ತಾಲೂಕಿನ ಗ್ರಾಮೀಣ ಪ್ರದೇಶ ಮತ್ತು ಬೇರೆಡೆಗೆ ತೆರಳಿದರೂ, ಕರೆ ಬಂದಾಗ ತಕ್ಷಣ ಬರಲೇಬೇಕಾದ ಅನಿವಾರ್ಯತೆ ಇದೆ. ಜೀವನ ನಿರ್ವಹಣೆಗೆ ಬೇರೆ ಉದ್ಯೋಗ ಮಾಡಿಕೊಂಡು ಸಂಬಳವೂ ಇಲ್ಲದೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1200 ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿರುವ ಇವರನ್ನು ರೋಟರಿ ಸಂಸ್ಥೆ ಗೌರವಿಸಿತ್ತು
ಕಳೆದ 20 ವರ್ಷದಿಂದ ನಾನು ಸೇವೆ ಸಲ್ಲಿಸುತ್ತಿದ್ದು, ರುದ್ರಭೂಮಿಯ ಪಕ್ಕದಲ್ಲಿ ವಾಸವಾಗಿದ್ದೇನೆ. ಜೀವನ
ನಿರ್ವಹಣೆಗೆ ವ್ಯಾಪಾರಿ ವೃತ್ತಿ ಮಾಡುತ್ತಿದ್ದು, ಸಂಸ್ಕಾರವನ್ನೆ ಸೇವೆ ಎಂಬದೃಷ್ಟಿಯಿಂದ ಮಾಡುತ್ತಿದ್ದೇನೆ. ಸ್ವಂತ
ಮನೆಯೂ ಇಲ್ಲದೇ,ಆರ್ಥಿಕವಾಗಿಯೂ ಹಿಂದುಳಿದಿರುವ ನನಗೆ ಸರಕಾರ ಕನಿಷ್ಠ ವೇತನ ಮತ್ತು ನಿವೇಶನ ಒದಗಿಸಬೇಕು. ರುದ್ರಭೂಮಿಯ ಕನಿಷ್ಠ ಸೌಲಭ್ಯ ಪೂರೈಸಬೇಕು.
ಟಿ.ಸಿ.ರವಿ, ರುದ್ರಭೂಮಿ ನಿರ್ವಾಹಕ.
ಹಿಂದೂ ರುದ್ರ ಭೂಮಿಯ ನಿರ್ವಹಣಾ ಸಮಿತಿ ರಚಿಸಿಕೊಳ್ಳಲಾಗಿದ್ದು, ಪಪಂ ಸದಸ್ಯ ನಾಗೇಶ್ ಕಾಮತ್ ಅಧ್ಯಕ್ಷರಾಗಿದ್ದಾರೆ. ಪಪಂ ಚುನಾಯಿತ ಸದಸ್ಯರು ಹಾಗೂ ಸ್ಥಳಿಯ ಗ್ರಾ.ಪಂ.ಸದಸ್ಯರು ಹಾಗೂ ಸಮಾಜದ ಗಣ್ಯರು ಸಮಿತಿಯ ಸದಸ್ಯರಾಗಿದ್ದಾರೆ. ರುದ್ರಭೂಮಿಯ ಕಾಂಪೌಂಡ್ ಏರಿಕೆ, ನಿರ್ಮಾಣಗೊಂಡಿರುವ ಮಂಟಪದಲ್ಲಿ ಈಶ್ವರನ ಪ್ರತಿಮೆ ಸ್ಥಾಪನೆ, ಉತ್ತರ ಕ್ರಿಯೆಗಾಗಿ ಹೆಚ್ಚುವರಿ ಕೊಠಡಿ ನಿರ್ಮಾಣ, ನದಿಗೆ ಇಳಿಯುವ ಜಾಗದಲ್ಲಿ ಸ್ನಾನ ಘಟ್ಟ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯ ಅಗತ್ಯವಾಗಿದೆ. ಅನುದಾನ ಕೊರತೆಯೂ ಇದ್ದು,ದಾನಿಗಳ ಸಹಕಾರ ಅಗತ್ಯವಾಗಿದೆ.
ಶೃಂಗೇರಿ ಸುಬ್ಬಣ್ಣ, ಕಾರ್ಯದರ್ಶಿ ಹಿಂದೂ ರುದ್ರ ಭೂಮಿಯ ನಿರ್ವಹಣಾ ಸಮಿತಿ.
ರುದ್ರಭೂಮಿಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಇನ್ನೂ ಸಾಕಷ್ಟು ಕೊರತೆ ಇದೆ.ಪರಿಸದ ಸ್ವಚ್ಚತೆ ಕಾಪಾಡುವುದು,ನದಿಗೆ ಇಳಿಯುವ ಸ್ಥಳದಲ್ಲಿ ಸ್ನಾನ ಘಟ್ಟ ನಿರ್ಮಾಣ,ಸೋಲಾರ್ ದೀಪದ ವ್ಯವಸ್ಥೆ,ನೀರಿನ ವ್ಯವಸ್ಥೆ,ಆಸನ ವ್ಯವಸ್ಥೆ,ನಿರ್ವಾಹಕರಿಗೆ ಮನೆ ನಿರ್ಮಾಣ ಸೇರಿದಂತೆ ಸೌಲಭ್ಯ ನೀಡಬೇಕು.ರುದ್ರಭೂಮಿಗೆ ನಾಮ
ಫಲಕದ ವ್ಯವಸ್ಥೆಯೂ ಆಗಬೇಕು.
ಪ್ರಕಾಶ್, ಶೃಂಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.