ಕಪಿಲ್ ಹೊಸ ಚಿತ್ರ ಹಸಿವು ಮತ್ತು ಅರಿವು
Team Udayavani, Jun 19, 2018, 11:02 AM IST
“ಹಳ್ಳಿ ಸೊಗಡು’ ಚಿತ್ರ ನಿರ್ದೇಶಿಸಿರುವ ಕಪಿಲ್ ಈಗ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ಆರಂಭಿಸುತ್ತಿದ್ದಾರೆ. “ಹಸಿವು ಮತ್ತು ಅರಿವು’ ಎಂಬ ಹೆಸರಿನ ಈ ಚಿತ್ರದಲ್ಲಿ ಪ್ರಪಂಚದಲ್ಲಿ ಹಸಿವು ಎನ್ನುವುದು ಎಷ್ಟು ಮಹತ್ತರವಾದುದು. ಬಡವರ ಜೀವನದಲ್ಲಿ ಹಸಿವು ಎಷ್ಟೆಲ್ಲ ಕೆಲಸಗಳನ್ನು ಮಾಡಿಸುತ್ತದೆ. ಹಸಿವಿನ ಮಹತ್ವ ಹಾಗೂ ಅದರ ಅನ್ನದ ಪ್ರಾಮುಖ್ಯತೆ ಬಗ್ಗೆ ಅರಿವನ್ನು ಮೂಡಿಸುವ ಕಥಾಹಂದರ ಈ ಚಿತ್ರದಲ್ಲಿರುತ್ತದೆ.
ಈ ಚಿತ್ರದ ಪರಿಕಲ್ಪನೆಯ ಜೊತೆಗೆ ನಿರ್ದೇಶನವನ್ನು ಕಪಿಲ್ ಅವರೇ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಊಟ ಮಾಡುವಾಗ ಅನ್ನವನ್ನು ಅರ್ಧಕ್ಕೆ ಬಿಡಬೇಡಿ, ಅನ್ನವನ್ನು ಬಿಸಾಕಬೇಡಿ, ಅನ್ನಕ್ಕೆ ಬೆಲೆಕೊಡಿ ಎನ್ನುವ ಸಂದೇಶವನ್ನು ಸಾರುವಂಥ ಚಲನಚಿತ್ರ ಇದಾಗಿದೆ. ಮುಂದಿನವಾರ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯಲಿದೆ.
ಭಾನು ಪೃಥ್ವಿ 100 ಮಾರ್ಕ್ ಫಿಲಂಸ್ ಲಾಂಛನದಲ್ಲಿ ಶ್ರೀಮತಿ ಶೋಭಾವತಿ ಕಪಿಲ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಿ.ನಾರಾಯಣ್, ಶ್ರೀನಾಥ್‌ರಾವ್ ಅವರ ಸಂಗೀತ, ಭುವನೇಶ್ವರಿ ಬಲರಾಮ್ ಅವರ ಸಂಗೀತ, ಬಿ.ಆರ್. ನರಸಿಂಹ ಮೂರ್ತಿ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಉದಯಲೇಖಾ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಗುಬ್ಬಿ ನಟರಾಜ್, ಕೃಷ್ಣಮೂರ್ತಿ ತಳಾಲು ಈ ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.