ಕಾಲುಸಂಕದ ಮೇಲೆ ಹೊಸಾಡು ಗ್ರಾಮಸ್ಥರ ಸರ್ಕಸ್
Team Udayavani, Jun 20, 2018, 2:10 AM IST
ಬೈಂದೂರು: ಮಳೆಗಾಲ ಬಂತೆಂದರೆ ಬೈಂದೂರಿನ ಬಹುತೇಕ ಗ್ರಾಮೀಣ ಭಾಗದ ಜನರ ಗೋಳು ಹೇಳತೀರದಾಗಿದೆ. ಕಳೆದ ಹಲವು ವರ್ಷಗಳಿಂದ ದೊಡ್ಡ ನದಿಗೆ ಚಿಕ್ಕ ಕಾಲು ಸಂಕದ ಮೂಲಕ ಮಳೆಗಾಲ ಕಳೆಯಬೇಕಾಗಿರುವುದು ಕಾಲೊ¤àಡು ಗ್ರಾ.ಪಂ. ವ್ಯಾಪ್ತಿಯ ಬೋಳಂಬಳ್ಳಿ ಸಮೀಪದ ಹೊಸಾಡು ಜನತೆಯ ಪರಿಸ್ಥಿತಿಯಾಗಿದೆ.
ತಂತಿ ಮೇಲೆ ಸವಾರಿ
ಈ ಭಾಗದಲ್ಲಿ 1,500ಕ್ಕೂ ಅಧಿಕ ಜನರು ಈ ಕಾಲುಸಂಕದ ಮೂಲಕ ನದಿ ದಾಟಬೇಕು. 40ಕ್ಕೂ ಅಧಿಕ ಕುಟುಂಬಗಳಿದ್ದು ಕೃಷಿ ಇಲ್ಲಿನ ಜನರ ಜೀವನಾಡಿಯಾಗಿದೆ. ಇಲ್ಲಿನ ಹೊಸಾಡು, ಕಾಡಿನಹೊಳೆ, ಮುತ್ತಣಿR, ಕೇಂಜಿ, ಕೂಡಾಲು ಭಾಗದ ಜನರು ಕಾಲ್ತೊಡಿಗೆ ತೆರಳಬೇಕಾದರೆ ಈ ನದಿ ದಾಟಿ ಹೋಗಬೇಕು. ಹಳೆಯ ಕಾಲುಸಂಕ ನಾಲ್ಕು ವರ್ಷಗಳ ಹಿಂದೆ ನದಿಪಾಲಾಗಿದೆ. ಹೀಗಾಗಿ ಸ್ಥಳೀಯರು ತಾತ್ಕಾಲಿಕವಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ.
ಹೊಸಾಡುವಿನಿಂದ ಶಾಲಾ, ಕಾಲೇಜು, ಆಸ್ಪತ್ರೆಗೆ ತೆರಳಬೇಕಾದರೆ ಬೈಂದೂರು, ಕಾಲ್ತೊಡು, ಕುಂದಾಪುರಕ್ಕೆ ತೆರಳಬೇಕು. ಆದರೆ ಹೊಸಾಡು – ಬೋಳಂಬಳ್ಳಿ ನಡುವೆ ಹರಿಯುವ ಸುಮನಾವತಿಯ ಉಪನದಿ ಜನರ ಸಂಚಾರಕ್ಕೆ ತೊಡಕಾಗಿದೆ. ಪ್ರೌಢಶಾಲೆ ಹಾಗೂ ಕಾಲೇಜಿಗೆ ತೆರಳಬೇಕಾದರೆ ಹತ್ತು ಕಿ.ಮೀ. ದೂರ ನಡೆಯಬೇಕು. ಜನಪ್ರತಿನಿಧಿಗಳ ನಿರ್ಲಕ್ಷವೇ ಸಮಸ್ಯೆಗೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಶಾಸಕರಿಗೂ ಮನವಿ
ಸದ್ಯದ ಮಟ್ಟಿಗೆ ತಾತ್ಕಾಲಿಕವಾದ ಕಾಲು ಸಂಕವನ್ನು ಸ್ಥಳೀಯರು ನಿರ್ಮಿಸಿಕೊಂಡಿದ್ದಾರೆ. ಹೊಳೆ ಸುಮಾರು 30 ಅಡಿ ಆಳವಿದೆ. ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನ ವಾಗಿಲ್ಲ. ಪ್ರಸ್ತುತ ನೂತನ ಶಾಸಕರಿಗೆ ಮನವಿ ನೀಡಿದ್ದೇವೆ.
– ಸುರೇಂದ್ರ ಗೌಡ, ಹೊಸಾಡು
ಮುಂದಿನ ವಾರ ಸ್ಥಳಕ್ಕೆ ಭೇಟಿ
ಮುಂದಿನ ವಾರದಲ್ಲಿ ಹೊಸಾಡು ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ಜತೆ ಮಾತುಕತೆ ನಡೆಸುತ್ತೇನೆ. ಈ ವರ್ಷದ ಅನುದಾನದಲ್ಲಿ ಸೇತುವೆ ನಿರ್ಮಿಸುವ ಚಿಂತನೆಯಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ವಿವರ ಪಡೆದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.
– ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.