ಒಳಚರಂಡಿ ಕಾಮಗಾರಿ ಸ್ಥಳದಲ್ಲಿ ಸುರಕ್ಷೆ
Team Udayavani, Jun 20, 2018, 10:27 AM IST
ಮಹಾನಗರ: ನಗರದ ಜೈಲ್ ರಸ್ತೆಯಿಂದ ಬಿಜೈ ಚರ್ಚ್ ರಸ್ತೆಯ ಕೊಡಿಯಾಲ್ ಗುತ್ತು ಕ್ರಾಸ್ ರಸ್ತೆ ಮಧ್ಯಭಾಗದಲ್ಲಿ ಮೂರು ವಾರಗಳಿಂದ ಯಾವುದೇ ಸುರಕ್ಷಾ ಕ್ರಮ ಕೈಗೊಳ್ಳದೆ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಈ ಬಗ್ಗೆ ಜೂ.18ರಂದು ‘ಸುದಿನ’ ವಿಸ್ತೃತ ವರದಿ ಪ್ರಕಟಿಸಿದ್ದು, ಈಗ ಪಾಲಿಕೆ ಎಚ್ಚೆತ್ತುಕೊಂಡಿದೆ.
ಒಳಚರಂಡಿ ಕಾಮಗಾರಿ ಬಾಯಿ ತೆರೆದುಕೊಂಡು ಅಪಾಯಕ್ಕೆ ಮುನ್ಸೂಚನೆ ನೀಡುತ್ತಿದ್ದರೂ, ಸ್ಥಳದಲ್ಲಿ ಸಾರ್ವಜನಿಕರ
ದೃಷ್ಟಿಯಿಂದ ಯಾವುದೇ ರೀತಿಯಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದ್ದರಿಂದ ರಸ್ತೆಯಲ್ಲಿ ಸಂಚರಿಸುವವರು ಸ್ವಲ್ಪ ಕಣ್ಣು ತಪ್ಪಿದರೂ ಒಳಚರಂಡಿ ಗುಂಡಿಗೆ ಬೀಳುವ ಪರಿಸ್ಥಿತಿ ಇತ್ತು. ಕಾಮಗಾರಿಗೆಂದು ರಸ್ತೆ ಮಧ್ಯೆ ತೋಡಿದ ಸುಮಾರು ಐದು ಅಡಿ ಆಳದ ಹೊಂಡದಲ್ಲಿ ನೀರು ತುಂಬಿಕೊಂಡು ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಮುಂಜಾಗೃತಾ ಕ್ರಮವಾಗಿ ಯಾವುದೇ ಬ್ಯಾರಿಕೇಡ್ ಕೂಡ ಹಾಕಿರಲಿಲ್ಲ.
ಮುಂಜಾಗೃತೆ ಕ್ರಮ
ಈಗ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಹೊಂಡಕ್ಕೆ ಪ್ಲಾಸ್ಟಿಕ್ ಟರ್ಪಲ್ ನಿಂದ ಮುಚ್ಚಲಾಗಿದೆ. ಮುಂಜಾಗೃತಾ
ದೃಷ್ಟಿಯಿಂದ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಅಷ್ಟೇ ಅಲ್ಲದೆ, ದೂರದಿಂದ ಬರುವ ವಾಹನಗಳಿಗೆ ಮುನ್ಸೂಚನೆಯಂತೆ ಮರದ ಗೆಲ್ಲುಗಳನ್ನು ಇಡಲಾಗಿದೆ. ಸುತ್ತಲೂ ಹರಡಿದ್ದ ಮಣ್ಣು, ಕಲ್ಲನ್ನು ಒಂದೆಡೆ ರಾಶಿ ಹಾಕಲಾಗಿದೆ. ಬಿಜೈ ಚರ್ಚ್ ರಸ್ತೆಯಲ್ಲಿ ಇರುವಂಥ ಮ್ಯಾನ್‌ಹೋಲ್ ಕಾಮಗಾರಿ ಕೆಲ ದಿನಗಳ ಹಿಂದೆ ಪೂರ್ಣಗೊಂಡಿದೆ.
ಆದರೂ ಕಾಮಗಾರಿಗೆ ಬಳಸಲಾದ ಮಣ್ಣು, ಸಿಮೆಂಟ್ ಚೀಲ, ಕಲ್ಲು ಸಹಿತ ಇನ್ನಿತರ ವಸ್ತುಗಳು ರಸ್ತೆ ಬದಿಯೇ
ಇಡಲಾಗಿತ್ತು. ಈ ಬಗ್ಗೆ ‘ಸುದಿನ’ ರಸ್ತೆ ಕಥೆ ರಿಯಾಲಿಟಿ ಚೆಕ್‌ನಲ್ಲಿ ವರದಿ ಮಾಡಿದ್ದು, ಪಾಲಿಕೆ ಎಚ್ಚೆತ್ತು ಮಣ್ಣು ತೆರವು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.