ಕವಿಸಂ ಯುವಜನ ಮಂಟಪ ಸಲಹಾ ಸಮಿತಿ ರಚನೆ
Team Udayavani, Jun 20, 2018, 4:25 PM IST
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪದ ಕಾರ್ಯ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ
ಪ್ರಾರಂಭಿಸುವಲ್ಲಿ ನೆರವಾಗಲು ಹತ್ತು ಜನರ ಸಲಹಾ ಸಮಿತಿಯೊಂದನ್ನು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಯುವಜನ ಮಂಟಪದ ಸಂಚಾಲಕ ಸತೀಶ ತುರಮರಿ ನೇತೃತ್ವದಲ್ಲಿ ರಚಿಸಲಾಯಿತು.
ಸಂಘದ ಸಭಾಭವನದಲ್ಲಿ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ, ಕನ್ನಡ ನಾಡು ನುಡಿಗಾಗಿ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೇವೆ ಸಲ್ಲಿಸುತ್ತಿರುವ ಸಂಘದ ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
ಮುಂಬರುವ ದಿನದಲ್ಲಿ ಯುವಜನರಲ್ಲಿ ಸಾಹಿತ್ಯಿಕ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಶಾಲಾ-ಕಾಲೇಜು, ವಸತಿ ನಿಲಯ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಮಾರಂಭಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಯಿತು. ಯುವಜನರಲ್ಲಿ ಸಾಹಿತ್ಯಿಕ ಬೆಳವಣಿಗೆ ಬೆಳೆಸುವುದರ ಜೊತೆಗೆ ದುಶ್ಚಟಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಕನ್ನಡ ಪರ ಕಾರ್ಯಕ್ರಮ ರೂಪಿಸುವುದು, ಆರೋಗ್ಯಕರ ಶಿಬಿರ ಹಾಗೂ ವಿಚಾರ ಸಂಕಿರಣ, ಗೋಷ್ಠಿ ಏರ್ಪಡಿಸುವುದು. ಸೆಟ್, ನೆಟ್, ಕೆಎಎಸ್-ಐಎಎಸ್ ಹಾಗೂ ಉದ್ಯೋಗದ ಮಾಹಿತಿ, ಕಾನೂನು ಮಾಹಿತಿ ಒದಗಿಸುವ ಹಾಗೂ ಯುವಕ ಮಂಡಳಗಳನ್ನು ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ವಿಜ್ಞಾನ- ಮೂಢನಂಬಿಕೆಗಳ ತಿಳಿವಳಿಕೆ ಕುರಿತ ಸಮ್ಮೇಳನ ಆಯೋಜನೆ, ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪುರಸ್ಕಾರ ಹಾಗೂ ಹೆಲ್ಮೆಟ್ ಜಾಗೃತಿ ಮೂಡಿಸುವ ಕಿರುಚಿತ್ರ ಪ್ರದರ್ಶನ ಏರ್ಪಡಿಸಲು ಸಭೆ ಅಭಿಪ್ರಾಯಪಟ್ಟಿತು.
ಸಲಹಾ ಸಮಿತಿ: ಸದಸ್ಯರಾಗಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ, ಚನ್ನಬಸು ನೂಲ್ವಿ, ಪ್ರಕಾಶ ಮಲ್ಲಿಗವಾಡ, ವೈ.ಬಿ. ಕಡಕೋಳ, ಬಾಬಾಜಾನ ಮುಲ್ಲಾ, ಅನಿಲ ಮೇತ್ರಿ, ರಾಜೀವಸಿಂಗ್ ಆರ್. ಹಲವಾಯಿ, ಕಲ್ಲನಗೌಡ ಶಿದ್ಧಾಪುರ, ಸಿ.ಸಿ. ಮುಂಡಾಸ್, ರಾಜಶೇಖರ ಅಂಗಡಿ ಸೇರಿದಂತೆ ಹತ್ತು ಜನರ ಸಮಿತಿ ರಚನೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
Naxal: ಸರ್ಕಾರಿ ಬಸ್ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!
Wine Merchants: ನಾಳೆಯ ಮದ್ಯ ಮಾರಾಟ ಬಂದ್ ನಿರ್ಧಾರ ವಾಪಸ್ ಪಡೆದ ಅಸೋಸಿಯೇಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.