ಮಕ್ಕಳ ಕಳ್ಳರೆಂದು ಚಚ್ಚಿ ಕೊಂದ ಪ್ರಕರಣ: ತ್ವರಿತ ವಿಚಾರಣೆ ಭರವಸೆ
Team Udayavani, Jun 20, 2018, 5:34 PM IST
ಗುವಾಹಟಿ : ಅಸ್ಸಾಮ್ ನ ಕಾರ್ಬಿ ಆಂಗ್‌ಲಾಂಗ್ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿದ ಉದ್ರಿಕ್ತ ಗ್ರಾಮಸ್ಥರು ಇಬ್ಬರನ್ನು ಚಚ್ಚಿ ಸಾಯಿಸಿದ ಪ್ರಕರಣವನ್ನು ತ್ವರಿತ ವಿಚಾರಣೆ ಮೂಲಕ ಇತ್ಯರ್ಥಪಡಿಸುವಂತೆ ತಾನು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಮನವಿ ಮಾಡಿಕೊಳ್ಳುವುದಾಗಿ ಮೃತರ ಹೆತ್ತವರಿಗೆ ಅಸ್ಸಾಂ ಮುಖ್ಯಮಂತ್ರಿ ಶರಬಾನಂದ ಸೋನೋವಾಲ್ ಭರವಸೆ ನೀಡಿದ್ದಾರೆ.
ಕಾರ್ಬಿ ಆಂಗ್‌ಲಾಂಗ್ ಜಿಲ್ಲೆಯ ಪಂಜೂರಿ ಎಂಬಲ್ಲಿ ಉದ್ರಿಕ್ತ ಗ್ರಾಮಸ್ಥರ ಗುಂಪೊಂದು ವಾಹನವೊಂದನ್ನು ತಡೆದು ಅದರೊಳಗಿದ್ದ 29ರ ಹರೆಯದ ನಿಲೋತ್ಪಲ ದಾಸ್ ಮತ್ತು 30ರ ಹರೆಯದ ಅಭಿಜೀತ್ ನಾಥ್ ಎಂಬವರನ್ನು ಹೊರಗೆಳೆದು ಮಕ್ಕಳ ಕಳ್ಳರೆಂದು ಶಂಕಿಸಿ ಚಚ್ಚಿ ಸಾಯಿಸಿತ್ತು.
ಮೃತರ ತಂದೆ ಅಜಿತ್ ಕುಮಾರ್ ನಾಥ್ ಮತ್ತು ಗೋಪಾಲ ಚಂದ್ರ ದಾಸ್ ಅವರು ನಿನ್ನೆ ಮಂಗಳವಾರ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿಯೊಂದನ್ನು ಅರ್ಪಿಸಿ ತಪ್ಪುಗಾರರಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಆಗ್ರಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.