ಕಟಪಾಡಿ: ತಲೆ ನೋವಾಗಿರುವ ತ್ಯಾಜ್ಯ ವಿಲೇವಾರಿ
Team Udayavani, Jun 21, 2018, 6:00 AM IST
ಕಟಪಾಡಿ: ತಲೆ ನೋವಾಗಿರುವ ತ್ಯಾಜ್ಯ ವಿಲೇವಾರಿ ಗಾಗಿ ಏಣಗುಡ್ಡೆ ಮತ್ತು ಮೂಡಬೆಟ್ಟು ಗ್ರಾಮಗಳನ್ನೊಳಗೊಂಡ ಕಟಪಾಡಿ ಗ್ರಾ.ಪಂ. ಆಡಳಿತ ಮತ್ತು ಅಧಿಕಾರಿ ವರ್ಗ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಸುವ ಯೋಜನೆಗೆ ಮುಂದಡಿ ಇರಿಸುತ್ತಿದೆ.
ಆ ನಿಟ್ಟಿನಲ್ಲಿ ಕೆಲ ಸದಸ್ಯರನ್ನೊಳ ಗೊಂಡ ಪಂಚಾಯತ್ ತಂಡವು ವಾರಂಬಳ್ಳಿ ಗ್ರಾ.ಪಂ. ನಿರ್ವಹಿಸು ತ್ತಿರುವ ಘನ-ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಕ್ಕೆ ಜೂ.19ರಂದು ಭೇಟಿ ನೀಡಿ ಸಾಧಕ-ಬಾಧಕಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತು.
ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಕಟಪಾಡಿ ಪಂಚಾಯತ್ ತ್ಯಾಜ್ಯ ಸಮಸ್ಯೆಯಿಂದಾಗಿ ಕಡೆಗಣಿಸ ಲ್ಪಡುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಬದಿಯ ಪಂಚಾಯತ್ ಆಗಿರುವುದರಿಂದ ತ್ಯಾಜ್ಯವು ದೊಡ್ಡ ಸಮಸ್ಯೆಯಾಗಿದ್ದು, ಪ್ರಯಾಣಿಕರು, ಪ್ರವಾಸಿಗರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ತಲೆನೋವಾಗಿದ್ದು, ನಾಗರೀರೂ ಹೊರತಾಗಿರಲಿಲ್ಲ. ಇವೆಲ್ಲಕ್ಕೂ ಮುಕ್ತಿ ಕಲ್ಪಿಸುವ ಜತೆಗೆ ತ್ಯಾಜ್ಯವನ್ನು ಸಂಪನ್ಮೂಲ ವನ್ನಾಗಿಸಲು ಯೋಜನೆಯ ರೂಪಿಸುವ ಸಲುವಾಗಿ ಪಂಚಾಯತ್ ಆಡಳಿತ ಮಂಡಳಿಯೊಂದಿಗೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಭೇಟಿ ನೀಡಲಾಗಿದೆ. ಸಾರ್ವಜನಿಕರ ಸಹಕಾರದಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಇದ್ದ ಸರಕಾರಿ ಸ್ಥಳವನ್ನು ಉಪಯೋಗಿಸಿಕೊಂಡು ಸೂಕ್ತ ರೀತಿಯಲ್ಲಿ ಘನ-ದ್ರವ ತ್ಯಾಜ್ಯ ಸಂಪನ್ಮೂಲ ಘಟಕ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗುತ್ತದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತುಲ್ಲಾ ಬೇಗ್ ತಿಳಿಸಿದ್ದಾರೆ.
ಈ ಮೊದಲು ತಡರಾತ್ರಿವರೆಗೂ ಕಾದು ಕುಳಿತು ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ತ್ಯಾಜ್ಯ ಎಸೆಯದಂತೆ ಸಮಜಾಯಿಸ ಲಾಗುತ್ತಿತ್ತು. ಹೆಚ್ಚುತ್ತಿರುವ ಜನದಟ್ಟಣೆ, ವಸತಿ ಸಮುತ್ಛಯಗಳಿಂದಾಗಿ ಸಮಸ್ಯೆ ಉಲ್ಬಣವಾಗಿರುತ್ತದೆ. ಆ ನಿಟ್ಟಿನಲ್ಲಿ ಅಧುನಿಕ ಸೌಲಭ್ಯ ಬಳಸಿಕೊಂಡು, ಸಾರ್ವಜನಿಕರ ಪ್ರೋತ್ಸಾಹದೊಂದಿಗೆ ತ್ಯಾಜ್ಯ ಸಂಪನ್ಮೂಲ ಘಟಕ ರೂಪಿಸಬೇಕಾದ ಅವಶ್ಯಕತೆ ಇದೆ. ದ್ರವ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವಲ್ಲಿ ಸ್ವಂತ ಜಮೀನನ್ನೂ ನೀಡಲೂ ಸಿದ್ಧವಿರುವುದಾಗಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿನಯ ಬಲ್ಲಾಳ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಗ್ರಾ.ಪಂ. ಅಧ್ಯಕ್ಷೆ ಜೂಲಿಯೆಟ್ ವೀರಾ ಡಿಸೋಜಾ, ಉಪಾಧ್ಯಕ್ಷೆ ಪ್ರಭಾ ಬಿ.ಶೆಟ್ಟಿ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿನಯ ಬಲ್ಲಾಳ್, ಸದಸ್ಯರುಗಳಾದ ಸುಭಾಸ್ ಬಲ್ಲಾಳ್, ಪವಿತ್ರಾ ಆರ್. ಶೆಟ್ಟಿ, ಸುಧಾ ಶೆಟ್ಟಿ, ವಾರಂಬಳ್ಳಿ ಗ್ರಾ.ಪಂ. ಪಿಡಿಒ ದಿವ್ಯಾ ಎಸ್, ವಾರಂಬಳ್ಳಿ ಎಸ್‌ಎಲ್‌ಆರ್‌ಎಂ ಘಟಕದವರು ಜತೆಗಿದ್ದರು.
ಕೃಷಿಗೂ ಸಹಕಾರಿ
ದ್ರವ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿದಲ್ಲಿ ವ್ಯವಸಾಯ, ತೋಟಗಾರಿಕೆ, ತರಕಾರಿ ಕೃಷಿ, ಮಲ್ಲಿಗೆ ಕೃಷಿಗೂ ಸಹಕಾರಿಯಾಗುತ್ತದೆ. ಸ್ಥಳೀಯವಾಗಿ ತಂಡವನ್ನು ಗುರುತಿಸಿ ಈ ಘನ-ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ವಹಿಸಲು ಯೋಚಿಸಲಾಗುತ್ತಿದೆ .
– ಜೂಲಿಯೆಟ್ ವೀರಾ ಡಿ’ಸೋಜಾ, ಅಧ್ಯಕ್ಷೆ, ಕಟಪಾಡಿ ಗ್ರಾ.ಪಂ.
ಜನರ ಸಹಕಾರ ಅಗತ್ಯ
ಪರಿಸರಕ್ಕೆ ಹಾನಿ ಇಲ್ಲದ ರೀತಿ ಯಲ್ಲಿ ವಾರಂಬಳ್ಳಿ ಪಂ. ಘಟಕ ವನ್ನು ನಿಭಾಯಿಸುತ್ತಿದೆ. ಅದೇ ಮಾದರಿಯಲ್ಲಿ ಕಟಪಾಡಿ ಪಂ. ವ್ಯಾಪ್ತಿಯಲ್ಲೂ ಘಟಕ ಸ್ಥಾಪನೆ ಸೂಕ್ತವಾಗಿದೆ. ತ್ಯಾಜ್ಯ ಘಟಕವನ್ನು ತ್ಯಾಜ್ಯ ಸಂಪನ್ಮೂಲ ಘಟಕವಾಗಿ ಬಳಸಿಕೊಳ್ಳುವಲ್ಲಿ ಜನರ ಸಹಕಾರ ಆವಶ್ಯಕ.
– ಸುಭಾಸ್ ಬಲ್ಲಾಳ್,ಗ್ರಾ.ಪಂ.ಸದಸ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.