ಕುಹಕಿಗಳ ಬಾಯಿಗೆ ಪಕೋಡ!
Team Udayavani, Jun 21, 2018, 6:00 AM IST
ವಡೋದರಾ: “ಪಕೋಡ ಮಾರಿಯಾದರೂ ನಿರುದ್ಯೋಗ ನೀಗಿಸಿಕೊಳ್ಳಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಕ್ಕೆ ಕಾಂಗ್ರೆಸ್ ಬಲುವಾಗಿ ಆಕ್ಷೇಪಿಸಿದ್ದರು. ಆದರೆ ಗುಜರಾತ್‌ನ ವಡೋದರಾದಲ್ಲಿರುವ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಕಾರ್ಯಕರ್ತ ಪ್ರಧಾನಿಯವರ ಹೇಳಿಕೆ ಹಿಂದಿದ್ದ ಸತ್ಯವೇನೆಂದು ರುಜುವಾತು ಪಡಿಸಿದ್ದಾರೆ! ನಾರಾಯಣ್‌ಭಾಯ್ ರಜಪೂತ್ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ಸದಸ್ಯ. ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅವರು ಮೋದಿಯವರ ಪಕೋಡಾ ಭಾಷಣ ಕೇಳಿ, ಅದನ್ನು ಸವಾಲಾಗಿ ಸ್ವೀಕರಿಸಿದ್ದರು.
ಸುಮ್ಮನೇ ಒಂದು ಪ್ರಯೋಗ ಮಾಡೋಣ ಎಂದು ಆರಂಭಿಸಿದ “ಶ್ರೀರಾಮ್ ದಾಲ್ವಾಡಾ ಸೆಂಟರ್’ ಎಂಬ ಬಜ್ಜಿ, ಪಕೋಡಾ ಮಾರುವ ಅಂಗಡಿಯ ವ್ಯಾಪಾರ ಕೆಲವೇ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ಇವರ ಪಕೋಡ ಘಮ ಘಮ ದೂರದ ಪ್ರಾಂತ್ಯಗಳಿಗೂ ಹಬ್ಬಿ ಇದೀಗ ವಡೋದರಾದಲ್ಲಿ 35 ಶಾಖೆಗಳನ್ನು “ಶ್ರೀರಾಮ್ ದಾಲ್ವಾಡ್ ಸೆಂಟರ್’ ಹೊಂದಿದೆ! ದಿನವೊಂದಕ್ಕೆ ಒಂದು ಅಂಗಡಿಯಿಂದ 200 ರೂ. ಲಾಭ ಇದ್ದು, ಪ್ರತಿ ದಿನ 35 ಅಂಗಡಿಗಳಿಂದ 7 ಸಾವಿರ ರೂ. ಲಾಭ ಬರುತ್ತದೆ. ಅಂದರೆ, ತಿಂಗಳಿಗೆ ಅಂದಾಜು 2 ಲಕ್ಷ ರೂ.ಗಳಿಗೂ ಮೀರಿದ ಆದಾಯ ಇವರದ್ದಾಗಿದೆ. ಇದು ನಾರಾಯಣ್ ಅವರ ಜೀವನವನ್ನು ಭದ್ರಗೊಳಿಸಿದೆ. ಈ ಮೂಲಕ, ಕುಹಕಿಗಳ ಬಾಯಿಗೆ ಪಕೋಡ ತುರುಕಿ ಸತ್ಯದ ಸಾಕ್ಷಾತ್ಕಾರವಾಗುವಂತೆ ಮಾಡಿದ್ದಾರೆ ನಾರಾಯಣ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.