ತೆರವು ಕಾರ್ಯಾಚರಣೆ; ವ್ಯಾಪಾರ ಮತ್ತೆ ಆರಂಭ
Team Udayavani, Jun 21, 2018, 3:00 PM IST
ಬಂಟ್ವಾಳ: ಬಿ.ಸಿ. ರೋಡ್ ಫ್ಲೈ ಓವರ್ ಅಡಿಯಲ್ಲಿ ಕಳೆದ ಕೆಲವು ಸಮಯದಿಂದ ಅನಧಿಕೃತ ವ್ಯಾಪಾರ ನಡೆಸುತ್ತಿದ್ದ ತರಕಾರಿ ಅಂಗಡಿಗಳವರ ತೂಕದ ಯಂತ್ರ ಸಹಿತ ಇತರ ಸಾಮಗ್ರಿಗಳನ್ನು, ತರಕಾರಿಗಳನ್ನು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೆ ಕೆಲವೇ ಗಂಟೆಗಳ ಬಳಿಕ ಅದೇ ಸ್ಥಳದಲ್ಲಿ ರಸ್ತೆ ಬದಿ ತರಕಾರಿ ವ್ಯಾಪಾರ ಯಥಾ ಸ್ಥಿತಿ ಮುಂದುವರಿಯುವ ಮೂಲಕ ಆಡಳಿತದ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ.
ಬಿ. ಸಿ. ರೋಡ್ ಫ್ಲೈಓವರ್ ಅಡಿ ಭಾಗದಲ್ಲಿ ಆರಂಭವಾದ ಒಂದು ತರಕಾರಿ ಅಂಗಡಿ ಈಗ ರಾ.ಹೆ.ವರೆಗೂ ವಿಸ್ತರಿಸಿಕೊಂಡು ಏಳೆಂಟು ಮಂದಿ ವ್ಯಾಪಾರಿಗಳು ತರಕಾರಿ ಮಾರಾಟ ಆರಂಭಿಸಿದ್ದರು. ಪುರಸಭೆಗೆ ತೆರಿಗೆ ಪಾವತಿಸದೆ ನಗರದ ಮುಖ್ಯಭಾಗದಲ್ಲೇ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದರೂ ಪುರಸಭೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾಗಿ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.
ಹೊರ ಊರುಗಳಿಂದ ಬರುವ ವ್ಯಾಪಾರಿಗಳು ಬಿ.ಸಿ. ರೋಡ್‌ನ ಮೇಲ್ಸೇತುವೆ ಅಡಿ ಭಾಗವನ್ನೇ ತಮ್ಮ ತರಕಾರಿ ವ್ಯಾಪಾರದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಆರಂಭದಲ್ಲಿ ಫ್ಲೈ ಓವರ್‌ನ ಒಂದು ಪಿಲ್ಲರ್‌ನಡಿ ತರಕಾರಿ ಮಾರಾಟ ಆರಂಭಿಸಿ ದಿನಕಳೆದಂತೆ ಒಂದೊಂದೆ ಅಂಗಡಿಗಳು ಹೆಚ್ಚುತ್ತಾ ಹೋಗಿವೆ. ಈಗ ಅದೊಂದು ತರಕಾರಿ ಮಾರುಕಟ್ಟೆಯೇ ಆಗಿ ಹೋಗಿದೆ.
ರಾ.ಹೆ.ವರೆಗೂ ಇಲ್ಲಿ ತರಕಾರಿಗಳನ್ನು ಜೋಡಿಸಿ ಇಡಲಾಗಿದೆ. ವಾಹನಗಳಲ್ಲಿ ಬರುವ ಜನರು ತಮ್ಮ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ ತರಕಾರಿ ಖರೀದಿಸುವುದರಿಂದ ವಾಹನ ಸಂಚಾರಕ್ಕೂ ಸಮಸ್ಯೆ ಎದುರಾಗುತ್ತಿತ್ತು. ಈ ಹಿಂದೆ ಮೇಲ್ಸೇತುವೆ ಅಡಿ ಭಾಗದಲ್ಲಿದ್ದ ಫಾಸ್ಟ್‌ಪುಡ್, ಚಪ್ಪಲಿ ಹೊಲಿಗೆ, ಕ್ಯಾಂಟೀನ್‌ಗಳನ್ನು ಪುರಸಭೆ ತೆರವುಗೊಳಿಸಿತ್ತು.
ಪುರಸಭೆಗೆ ತೆರಿಗೆ ಕಟ್ಟಿ ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದರೂ ವಲಸಿಗರಿಂದ ರಸ್ತೆ ಬದಿಯಲ್ಲಿಯೇ ಅನಧಿಕೃತವಾಗಿ ವ್ಯಾಪಾರ ಮಾಡಲಾಗುತ್ತಿದೆ ಎಂಬ ಆರೋಪ ಇಲ್ಲಿನ ಖಾಯಂ ವ್ಯಾಪಾರಿಗಳದ್ದಾದರೆ, ನಾವು ಬಡವರು. ನಮ್ಮ ಹೊಟ್ಟೆಗೆ ಹೊಡಿಬೇಡಿ ಎನ್ನುವ ಅಳಲು ರಸ್ತೆ ಬದಿಯ ವ್ಯಾಪಾರಿಗಳದ್ದು. ಪ್ರತ್ಯೇಕ ತರಕಾರಿ ಮಾರುಕಟ್ಟೆ ಅಥವಾ ಸಂತೆ ಮಾರುಕಟ್ಟೆ ನಿರ್ಮಿಸಿದರೆ ಎಲ್ಲರಿಗೂ ಅನುಕೂಲ ಎಂಬ ಮಾತಿದೆ.
ಒಮ್ಮೆ ತೆರವು
ರಸ್ತೆಯ ಬದಿಯಲ್ಲಿ ಕುಳಿತು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗುವ ರೀತಿಯಲ್ಲಿ ವ್ಯಾಪಾರ ನಡೆಸುವ ಈ ಅನಧಿಕೃತ ತರಕಾರಿ ಮಾರುಕಟ್ಟೆಯನ್ನು ಈ ಹಿಂದೆ ಪೊಲೀಸರು ತೆರವುಗೊಳಿಸಿದ್ದರು. ಇಲ್ಲಿ ಬ್ಯಾರಿಕೇಡ್ ಇಟ್ಟು ತರಕಾರಿ ಮಾರಾಟ ಮಾಡದಂತೆ ಎಚ್ಚರಿಕೆ ಫಲಕವನ್ನು ಹಾಕಿದ್ದರು. ಆರಂಭದ ಒಂದು ವಾರ ತರಕಾರಿ ಮಾರಾಟಕ್ಕೆ ನಿಯಂತ್ರಣ ಬಿದ್ದಿದ್ದರೂ ಬಳಿಕ ಮತ್ತೆ ಅದೇ ಸ್ಥಿತಿ ಪುನರಾರಂಭಗೊಂಡಿದೆ.
ಸೂಕ್ತ ಕ್ರಮ
ಕಾನೂನು ಪ್ರಕಾರ ಕ್ರಮ ಕೈಗೊಂಡು ಅನಧಿಕೃತ ವ್ಯವಸ್ಥೆಯನ್ನು ತೆರವು ಮಾಡಿದೆ. ಆದರೆ ಪುನಃ ಪುನರಾವರ್ತನೆ ಆಗುತ್ತಿರುವುದರಿಂದ ಇದಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ಪುರಸಭೆಯ ಆಡಳಿತದ ಜತೆ ಚರ್ಚಿಸಿ
ಸೂಕ್ತ ಕ್ರಮ ಮಾಡಲಾಗುವುದು.
-ರೇಖಾ ಜೆ. ಶೆಟ್ಟಿ
ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.