ಶನಿವಾರ ಟಗರು ಶತದಿನೋತ್ಸವ
Team Udayavani, Jun 21, 2018, 3:09 PM IST
ಶಿವರಾಜಕುಮಾರ್ ಅಭಿನಯದ “ಟಗರು’ ಚಿತ್ರವು ಯಶಸ್ವಿಯಾಗಿ ನೂರು ದಿನ ಪೂರೈಸುವ ಮೂಲಕ ಈ ವರ್ಷದ ಮೊದಲ ಹಂಡ್ರೆಡ್ ಡೇಸ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಟಗರು’ ಚಿತ್ರದ ಶತದಿನೋತ್ಸವ ಸಂಭ್ರಮವನ್ನು ಬೆಂಗಳೂರಿನ ವೈಟ್ ಪೆಟಲ್ಸ್‌ನಲ್ಲಿ ಆಯೋಜಿಸಿದ್ದಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.
ಈ ಕಾರ್ಯಕ್ರಮವು ಶನಿವಾರ (ಜೂನ್ 23) ಸಂಜೆ 5 ಗಂಟೆಗೆ ಪ್ರಾರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ಅಂಬರೀಶ್, ಉಪೇಂದ್ರ, ಪುನೀತ್ ರಾಜಕುಮಾರ್, ಮುರಳಿ ಮತ್ತು ಯಶ್ ಭಾಗವಹಿಸುತ್ತಿರುವುದು. ಜೊತೆಗೆ ಸಚಿವ ಡಿ.ಕೆ. ಶಿವಕುಮಾರ್ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಂತೆ.
ಇವರೆಲ್ಲರ ಸಮ್ಮುಖದಲ್ಲಿ ಚಿತ್ರಕ್ಕೆ ದುಡಿದ ಕಲಾವಿದರು, ತಂತ್ರಜ್ಞರು, ವಿತರಕರು ಮತ್ತು ಚಿತ್ರ ಪ್ರದರ್ಶನ ಮಾಡಿದ ಪ್ರದರ್ಶಕರಿಗೆ ಸ್ಮರಣಫಲಕಗಳನ್ನು ಕೊಟ್ಟು ಸನ್ಮಾನಿಸಲಾಗುತ್ತದೆ.ಕಾರ್ಯಕ್ರಮದ ಇನ್ನೊಂದು ಸ್ಪೆಷಾಲಿಟಿಯೆಂದರೆ, ಸೂರಿ ಮತ್ತು ಯೋಗರಾಜ್ ಭಟ್ ಇಬ್ಬರೂ ಸೇರಿ ಕಾರ್ಯಕ್ರಮದ ನಿರೂಪಣೆ ಮಾಡುವುದು. ಇದರ ಜೊತೆಗೆ ವಾಸು ದೀಕ್ಷಿತ್ ಮತ್ತು ತಂಡದ ಕಾರ್ಯಕ್ರಮವಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.