ಲಿಚೆಟ್‌ ಶುದ್ಧೀಕರಣ ಪ್ರಕ್ರಿಯೆ ಯಶಸ್ವಿ

Team Udayavani, Jun 22, 2018, 11:44 AM IST

licheth.jpg

ಬೆಂಗಳೂರು: ಬಿಬಿಎಂಪಿ ನಿರ್ಮಿಸಿರುವ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ (ಲಿಚೆಟ್‌) ವೈಜ್ಞಾನಿಕ ಸಂಸ್ಕರಣೆಗಾಗಿ ವಿಶ್ವದಲ್ಲೇ ಮೊದಲ ಬಾರಿಗೆ ನಿರ್ಮಿಸಿದ ಲಿಚೆಟ್‌ ಶುದ್ಧೀಕರಣ ಘಟಕಗಳು ಯಶಸ್ವಿಯಾಗಿ ಕಾರ್ಯಾ ನಿರ್ವಹಿಸುತ್ತಿದ್ದು, ನಿತ್ಯ 1.50 ಲಕ್ಷ ಲೀಟರ್‌ ತ್ಯಾಜ್ಯ ನೀರು ಶುದ್ಧಿಯಾಗುತ್ತಿದೆ.

ನಗರದ ಬೆಳ್ಳಹಳ್ಳಿ ಕ್ವಾರಿಯ ಬಳಿ ನಿತ್ಯ 1.20 ಲಕ್ಷ ಲೀಟರ್‌ ಹಾಗೂ ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ 25 ಸಾವಿರ ಲೀಟರ್‌ ಸಾಮರ್ಥಯದ ಲಿಚೆಟ್‌ ಶುದ್ಧೀಕರಣ ಘಟಕಗಳನ್ನು ಪಾಲಿಕೆಯಿಂದ ನಿರ್ಮಿಸಲಾಗಿದೆ. ಘಟಕಗಳು ಈಗಾಗಲೇ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಶುದ್ಧೀಕರಿಸಿದ ನೀರನ್ನು ಪಾಲಿಕೆಯ ಉದ್ಯಾನಗಳು, ಕೆರೆ ಹಾಗೂ ರಾಜಕಾಲುವೆಗಳಿಗೆ ಹರಿಸಲಾಗುತ್ತಿದೆ.

ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಗಾಗಿ ಪಾಲಿಕೆ ಏಳು ಕಡೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಿದೆ. ಜತೆಗೆ ಕೆಲ ಕ್ವಾರಿಗಳಲ್ಲಿಯೂ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ನಡೆಯುತ್ತಿದೆ. ಆದರೆ, ಆಯಾ ದಿನದ ತ್ಯಾಜ್ಯವನ್ನು ಅಂದೇ ಸಂಸ್ಕರಿಸದ ಹಿನ್ನೆಲೆಯಲ್ಲಿ ತ್ಯಾಜ್ಯ ಕೊಳೆತು ವಿಷಕಾರಿ ರಸ ಉತ್ಪತ್ತಿಯಾಗುತ್ತಿದೆ.

ಈ ತ್ಯಾಜ್ಯ ರಸ ಅಂತರ್ಜಲಕ್ಕೆ ಸೇರುವ ಅಪಾಯವಿರುವ ಹಿನ್ನೆಲೆಯಲ್ಲಿ ಘಟಕಗಳಲ್ಲಿ ಕಾಂಕ್ರಿಟ್‌ ನೆಲಹಾಸು ನಿರ್ಮಿಸಲಾಗಿದೆ. ಆದರೆ, ಲಿಚೆಟ್‌ ನೀರು ವಿಲೇವಾರಿ ಪಾಲಿಕೆಗೆ ತಲೆನೋವಾಗಿ ಪರಿಗಣಿಮಿಸಿತ್ತು. ಆ ಹಿನ್ನೆಲೆಯಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯರಸ ಸಂಗ್ರಹಣೆಗೆ ಕಾಂಕ್ರಿಟ್‌ ತೊಟ್ಟಿ ನಿರ್ಮಿಸಿದ್ದು, ತೊಟ್ಟಿಯಲ್ಲಿನ ಲಿಚೆಟ್‌ನಿಂದ ದುರ್ವಾಸನೆ ಹರಡಿ ಸ್ಥಳೀಯರು ಪ್ರತಿಭಟನೆಗಿಳಿಯುವಂತಾಗಿತ್ತು. ಹಾಗಾಗಿ ಪಾಲಿಕೆ ಅಧಿಕಾರಿಗಳು ಎರಡು ಕಡೆ ಲಿಚೆಟ್‌ ಶುದ್ಧೀಕರಣ ಘಟಕ ಸ್ಥಾಪಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಟ್ಯಾಂಕರ್‌ ಮೂಲಕ ರವಾನೆ: ಪಾಲಿಕೆಯಿಂದ ಸದ್ಯ ದೊಡ್ಡಬಿದರಕಲ್ಲು ಹಾಗೂ ಬೆಳ್ಳಹಳ್ಳಿಯಲ್ಲಿ ಲಿಚೆಟ್‌ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಆ ಘಟಕಗಳಲ್ಲಿ ಉತ್ಪತ್ತಿಯಾಗುವ ಲಿಚೆಟ್‌ಅನ್ನು ಅಲ್ಲಿಯೇ ಶುದ್ಧೀಕರಿಸಲಾಗುತ್ತಿದ್ದು, ಉಳಿದ ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಲಿಚೆಟ್‌ ಅನ್ನು ಟ್ಯಾಂಕರ್‌ಗಳ ಮೂಲಕ ಎರಡೂ ಘಟಕಗಳಿಗೆ ಸಾಗಿಸಿ ಶುದ್ಧೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಯಾ ಘಟಕದಲ್ಲಿಯೇ ಸಣ್ಣ ಘಟಕ ಸ್ಥಾಪಿಸುವ ಮೂಲಕ ಲಿಚೆಟ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಚಿಂತಿಸಿದೆ.

ಶುದ್ಧೀಕರಿಸಿದ ನೀರು ಕುಡಿಯಲು ಯೋಗ್ಯ!?: ಲಿಚೆಟ್‌ ನೀರನ್ನು ಐದು ಹಂತಗಳಲ್ಲಿ ಶುದ್ಧೀಕರಿಸುತ್ತಿದೆ. ಸಾಮಾನ್ಯವಾಗಿ ನೀರಿನ ಶುದ್ಧತೆಯನ್ನು ಟೋಟಲ್‌ ಡಿಸಾಲ್ಡ್‌ ಸಾಲಿಡ್ಸ್‌ (ಟಿಡಿಎಸ್‌) ಸಾಧನದ ಮೂಲಕ ಅಳೆಯಲಾಗುತ್ತದೆ. ಅದರಂತೆ ಲಿಚೆಟ್‌ನಲ್ಲಿ ಟಿಡಿಎಸ್‌ 4 ಸಾವಿರದಷ್ಟಿದ್ದರೆ ಸಂಸ್ಕರಣೆ ಬಳಿಕ 100-140ಕ್ಕೆ ಇಳಿಯುತ್ತಿದೆ. ಸಾಮಾನ್ಯವಾಗಿ ಟಿಡಿಎಸ್‌ ಪ್ರಮಾಣ 80ರಿಂದ 140ರಷ್ಟಿದ್ದರೆ ಆ ನೀರು ಕುಡಿಯಲು ಯೋಗ್ಯ. ಶುದ್ಧೀಕರಿಸಿದ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಉದ್ಯಾನಗಳಿಗೆ ಬಳಕೆ!: ಪಾಲಿಕೆಯ ಲಿಚೆಟ್‌ ಶುದ್ಧೀಕರಣ ಘಟಕಗಳಲ್ಲಿ ರಿವರ್ಸ್‌ ಆಸ್ಮೋಸಿಸ್‌ ಕ್ರಿಯೆ ಮೂಲಕ ತ್ಯಾಜ್ಯ ನೀರನ್ನು ಶುದ್ಧೀಕರಿಸಲಾಗುತ್ತಿದ್ದು, ಲಿಚೆಟ್‌ ಹಾಗೂ ಶುದ್ಧೀಕರಿಸಿದ ನೀರು ಶೇಖರಣೆಗಾಗಿ ಪ್ರತ್ಯೇಕ ಟ್ಯಾಂಕ್‌ ನಿರ್ಮಿಸಲಾಗಿದೆ. ಅದರಂತೆ ಶುದ್ಧೀಕರಿಸಿದ ನೀರನ್ನು ಘಟಕದ ಸುತ್ತಮುತ್ತಲಿನ ಪಾಲಿಕೆಯ ಉದ್ಯಾನಗಳಿಗೆ ಪೂರೈಸಿ, ನಂತರ ಸಮೀಪದ ಕೆರೆ ಹಾಗೂ ಮಳೆನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ.

ವಿಶ್ವದಲ್ಲೇ ಮೊದಲು: ಬಿಬಿಎಂಪಿ ಹಾಗೂ ಕೆಆರ್‌ಐಡಿಎಲ್‌ ಸಹಯೋಗದಲ್ಲಿ ನಿರ್ಮಿಸಿರುವ ಬೆಳ್ಳಹಳ್ಳಿ ಹಾಗೂ ದೊಡ್ಡಬಿದರಕಲ್ಲು ಲಿಚೆಟ್‌ ಶುದ್ಧೀಕರಣ ಘಟಕಗಳು ವಿಶ್ವದ ಮೊದಲ ಲಿಚೆಟ್‌ ಶುದ್ಧೀಕರಣ ಘಟಕ ಎಂಬ ಕೀರ್ತಿಗೆ ಪಾತ್ರವಾಗಿವೆ. ಈ ಘಟಕಗಳಿಂದ ಲಿಚೆಟ್‌ ದುರ್ವಾಸನೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಈ ಲಿಚೆಟ್‌ ಶುದ್ಧೀಕರಣ ಘಟಕಗಳಿಗೆ ವಿಶ್ವದ ವಿವಿಧ ನಗರಗಳಿಂದ ತಜ್ಞರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ಉತ್ಪತ್ತಿಯಾಗುತ್ತಿರುವ ಲಿಚೆಟ್‌ ಶುದ್ಧೀಕರಣಕ್ಕೆ ಕಳೆದ ಮೂರು ತಿಂಗ ಳಿಂದ ಬೆಳ್ಳಹಳ್ಳಿ, ದೊಡ್ಡಬಿದರಕಲ್ಲು ಬಳಿಯ ಘಟಕಗಳಲ್ಲಿ ಪ್ರಾಯೋಗಿಕವಾಗಿ ಲಿಚೆಟ್‌ ಶುದ್ಧೀಕರಿಸಲಾಗಿದೆ. ಘಟಕಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಶುದ್ಧೀಕರಿಸಿದ ನೀರನ್ನು ಸಮೀಪದ ಉದ್ಯಾನ, ಕೆರೆ ಹಾಗೂ ಕಾಲುವೆಗಳಿಗೆ ಹರಿಸಲಾಗುತ್ತಿದೆ.
-ಸಫ್ರಾಜ್‌ ಖಾನ್‌, ಜಂಟಿ ಆಯುಕ್ತ, ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ

* ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

Belagavi: ಯುವಕನ ಮೇಲೆ ಗುಂಡಿನ‌ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ

Belagavi: ಯುವಕನ ಮೇಲೆ ಗುಂಡಿನ‌ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Mumbai-Pilot

Mumbai: ಬಾಯ್‌ಫ್ರೆಂಡ್‌ ಮಾಂಸಾಹಾರ ತಿನ್ನಬೇಡ ಎಂದಿದ್ದಕ್ಕೆ ಪೈಲಟ್ ಆತ್ಮಹ*ತ್ಯೆ!

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belagavi: ಯುವಕನ ಮೇಲೆ ಗುಂಡಿನ‌ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ

Belagavi: ಯುವಕನ ಮೇಲೆ ಗುಂಡಿನ‌ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ

Mangaluru: ಅನುಮತಿ ರಹಿತ ಪ್ರತಿಭಟನೆ: ಹಲವರ ವಿರುದ್ಧ ಪ್ರಕರಣ

Mangaluru: ಅನುಮತಿ ರಹಿತ ಪ್ರತಿಭಟನೆ: ಹಲವರ ವಿರುದ್ಧ ಪ್ರಕರಣ

Fraud Case: ಫಾರ್ಚುನ್‌ ಗ್ರೂಪ್‌ ಹೊಟೇಲ್‌ಗೆ ವಂಚನೆ: ಜಾಮೀನು

Fraud Case: ಫಾರ್ಚುನ್‌ ಗ್ರೂಪ್‌ ಹೊಟೇಲ್‌ಗೆ ವಂಚನೆ: ಜಾಮೀನು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್‌ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.