ಉಡುಪಿ ರಸ್ತೆಗಳಲ್ಲಿ ಅಪಾಯಕಾರಿ ಹೊಂಡಗಳ ಸೃಷ್ಟಿ
Team Udayavani, Jun 23, 2018, 6:10 AM IST
ಉಡುಪಿ: ಮಳೆಯ ಅಬ್ಬರಕ್ಕೆ ನಗರದೊಳಗಿನ ರಸ್ತೆಗಳ ಡಾಮರು ಕಿತ್ತು ಹೋಗಿ ಅಪಾಯಕಾರಿ ಗುಂಡಿಗಳು ಸೃಷ್ಟಿಯಾಗಿವೆ.
ಬನ್ನಂಜೆ-ಉಡುಪಿಯಾಗಿ ಮಣಿಪಾಲಕ್ಕೆ ಸಾಗುವ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಂಡಿಗಳು ಏಳಲಾರಂಭಿಸಿವೆ. ಕಡಿಯಾಳಿ ಜಂಕ್ಷನ್ ಸಮೀಪ ಗುಂಡಿಯೊಂದು ಸೃಷ್ಟಿಯಾಗಿದೆ. ಮಳೆ ಸಂದರ್ಭ ಗುಂಡಿಗೆ ವಾಹನದ ಚಕ್ರ ಬಿದ್ದಾಗಲೇ ಸಮಸ್ಯೆ ಅರಿವಿಗೆ ಬರುತ್ತದೆ. ವಾಹನ ವೇಗದಲ್ಲಿದ್ದರೆ ಖಂಡಿತ ಇದು ಅಪಾಯಕ್ಕೆ ಆಹ್ವಾನ ನೀಡುತ್ತದೆ.
ಕಡಿಯಾಳಿಯಾಗಿ ಶಾರದಾ ಮಂಟಪ-ಬೀಡಿನಗುಡ್ಡೆ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿದ್ದು, ಗುಂಡಿಯಾಗಿದೆ. ಶ್ರೀಕೃಷ್ಣ ಮಠ ಸಂಪರ್ಕಿತ ವಾದಿರಾಜ ರಸ್ತೆಯಲ್ಲಿಯೂ ಅದೇ ಪರಿಸ್ಥಿತಿ ಇದೆ. ಕಿನ್ನಿಮೂಲ್ಕಿಯಿಂದ ಬ್ರಹ್ಮಗಿರಿಗೆ ಸಂಪರ್ಕಿಸುವ ಒಳ ರಸ್ತೆಯಲ್ಲಿ ಅಜ್ಜರಕಾಡು ಅಬಕಾರಿ ಭವನದ ಮುಂಭಾಗ ಹಾದುಹೋಗುವ ಸಮೀಪ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಪಕ್ಕ ಜಲ್ಲಿ ಪುಡಿಗಳ ರಾಶಿಯೂ ಸಮಸ್ಯೆ ತಂದೊಡ್ಡಿದೆ. ಇಲ್ಲಿ ರಸ್ತೆಯಲ್ಲಿಯೇ ನೀರು ನಿಲ್ಲುವುದು ಸಾಮಾನ್ಯವಾಗಿದೆ.
ಕಾಂಕ್ರೀಟು ರಸ್ತೆಯಲ್ಲೂ ಹೊಂಡ!
ಶಿರಿಬೀಡು ಜಂಕ್ಷನ್‌ನಲ್ಲಿ ಕಾಂಕ್ರೀಟು ರಸ್ತೆಯಲ್ಲೇ ಹೊಂಡ ಸೃಷ್ಟಿಯಾಗಿದೆ. ಇತ್ತೀಚೆಗೆ ಒಳಚರಂಡಿಗಾಗಿ ಕಾಂಕ್ರೀಟ್ ರಸ್ತೆ ಅಗೆದು ಕೆಲಸ ಮಾಡಲಾಗಿತ್ತು. ಈ ಕಾರಣದಿಂದ ಗುಂಡಿ ಬಿದ್ದಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಅವಶ್ಯವಿದ್ದಲ್ಲಿ ತುರ್ತು ಕಾಮಗಾರಿ
ಮಳೆಯ ಸಂದರ್ಭ ಯಾವುದೇ ರಸ್ತೆಗೆ ಅನುದಾನ ಮೀಸಲಿಟ್ಟು ಕಾಮಗಾರಿ ನಡೆಸುವುದಿಲ್ಲ. ರಸ್ತೆ ಡಾಮರು ನಿಲ್ಲಬೇಕಾದರೆ ಕನಿಷ್ಠ 2 ದಿನ ಮಳೆಯಾಗ ಬಾರದು. ಆದರೂ ಗಂಭೀರ ಸಮಸ್ಯೆ ಇರುವಲ್ಲಿ ಆವಶ್ಯಕತೆಗನುಗುಣವಾಗಿ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುತ್ತಿದೆ.
– ಗಣೇಶ್ ಕೆ.,ನಗರಸಭೆ ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.