ಅಂಕಿತ ರಾಗ, ತಾಳ ಬದಲಾಯಿಸುವ ಮುನ್ನ…


Team Udayavani, Jun 22, 2018, 9:01 PM IST

b-3.jpg

ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಪ್ರಸಂಗಕರ್ತ ತಾನು ರಚಿಸಿದ ಪದಗಳಿಗೆ ರಾಗ ತಾಳಗಳನ್ನು ನಮೂದಿಸಿರುತ್ತಾನಷ್ಟೆ. ಹಾಗೆ ನಿರೂಪಿಸುವಲ್ಲಿ ಕಥಾವಸ್ತು, ಸನ್ನಿವೇಶ, ಪಾತ್ರ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಸನ್ನಿವೇಶದ ಭಾವ ಪ್ರಕಟನೆಗೆ ಯಾವ ರಾಗ ಸೂಕ್ತ ಎಂಬುದನ್ನು ಖಚಿತಪಡಿಸಿಕೊಂಡಿರುತ್ತಾನೆ. ಆದರೆ ಈಗ ಭಾಗವತರು ಅಂಕಿತರಾಗ ತಾಳಗಳನ್ನು ತೊರೆದು ಹೊಸ ರಾಗವನ್ನೋ ಅಥವಾ ಬಳಕೆಯಲ್ಲಿರುವ ಇನ್ನಾವುದೋ ರಾಗವನ್ನು ಬಳಸಿ ಹಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಒಂದು ಉದಾಹರಣೆ; ಜಾಂಬವತಿ ಕಲ್ಯಾಣದ ಕೃಷ್ಣನ ಪದ, “ಕಿರುಬೆಟ್ಟಿನೊಳಗೆ ನಾನು….’ ಈ ಪದದ ಅಂಕಿತರಾಗ “ಬೈರವಿ’ ತಾಳ-ಅಷ್ಟ ಭಾವ- ಪೌರುಷ ಸೂಚಕವಾದ ವೀರರಸ. ಈಗ ಈ ಪದವನ್ನು “ಮೋಹನ’ ರಾಗ ಹಾಗೂ ಅದಕ್ಕನುಕೂಲವಾದ ತಾಳದಲ್ಲಿ ಹಾಡುತ್ತಾರೆ. ಮುಂದುವರಿದು ಚಾಲ್‌ ಹಾಕಿ, ಪದವನ್ನು ಛಿದ್ರಛಿದ್ರಗೊಳಿಸಿ, ಗಾನದ ಆಕಾರವನ್ನು ಕೆಡಿಸಿ, ಅನಗತ್ಯದ ಅಭಿನಯಕ್ಕೆ ಅವಕಾಶ ಕಲ್ಪಿಸಿ, ಒಂದಿಷ್ಟು ಕುಣಿಸಿ ಎಳೆದು ಹಾಡುವುದನ್ನು ಕಾಣುತ್ತಿದ್ದೇವೆ.

ಇಲ್ಲಿ ಪದದ ಭಾವಕ್ಕೂ ಬಳಸಿದ ರಾಗ ಹಾಗೂ ಕುಣಿಸುವ ರೀತಿಗೂ ಸಂಬಂಧ ಕಂಡುಬರುವುದಿಲ್ಲ. ಇದು ಸನ್ನಿವೇಶದ ಅಣಕವೆಂದರೆ ತಪ್ಪಾಗದು. ಈ ಅನುಭವ ಓರ್ವ ಸಾಮಾನ್ಯ ಪ್ರೇಕ್ಷಕನ ಅರಿವಿಗೂ ಬಾರದೆ ಇರು ವಂಥದ್ದಲ್ಲ. ತಾಳದ ತಾಂತ್ರಿಕತೆ, ಸಾಮಾನ್ಯ ಪ್ರೇಕ್ಷಕನ ಅರಿವಿಗೆ ಮೀರಿದ ವಿಚಾರ; ಆದಾದರೂ ಭಾವದ ಅನುಭವ ಸಾಮಾನ್ಯ ಪ್ರೇಕ್ಷಕನಿಗೂ ಆಗುತ್ತದೆ. 

ಈ ರೀತಿಯ ಪ್ರದರ್ಶನ ಒಂದೆರಡು ದಶಕಗಳ ಬೆಳವಣಿಗೆ. ಹಿಂದೆ ಈ ಸನ್ನಿವೇಶವನ್ನು ವೀರರಸಯುಕ್ತವಾಗಿಯೇ ನಿರ್ವಹಿಸುವ ಕ್ರಮವಿತ್ತು. “ಆರು ಎನ್ನಯ ಗುಹೆಯ…’ ಎಂಬಲ್ಲಿಂದ “ಅರರೆ ಎನ್ನೊಳೆಷ್ಟು ಛಲದಿ…’ ಎಂಬಲ್ಲಿಯ ತನಕದ ಸನ್ನಿವೇಶ ಗಂಭೀರವಾಗಿ ಸಾಗುತ್ತದೆ. ಆಗ ವೇಷಧಾರಿಗಳ ರಣೋತ್ಸಾಹದ ಹೆಜ್ಜೆಗಾರಿಕೆ ಹಾಗೂ ಪುಂಖಾನುಪುಂಖವಾಗಿ ಬರುವ ವಿರೋಚಿತ ವಾಗ್ಝರಿ ಮೈನವಿರೇಳುವಂತೆ ಮಾಡುತ್ತಿತ್ತು. ಅದೊಂದು ನೈಜ ರಣಕಣದಂತೆ ಭಾಸವಾಗುತ್ತಿತ್ತು.

ಈಗ ನಾವು ಕಾಣುವ ನಿರ್ವಹಣೆಯಲ್ಲಿ ಪದ, ಕುಣಿತ ಹಾಗೂ ಮಾತಿನ ನಡುವೆ ಯಾವ ಸಾಂಗತ್ಯವೂ ಇಲ್ಲದೆ ಸನ್ನಿವೇಶದ ನೈಜ ಭಾವ ಪ್ರಕಟವಾಗುತ್ತಿಲ್ಲವೆಂಬುದು ಪ್ರೇಕ್ಷಕರ ಅಳಲು. ಹಾಗಾಗಿ ಭಾಗವತರು ಅಂಕಿತ ರಾಗ ತಾಳ ಬದಲಾಯಿಸುವ ಮುನ್ನ ಸಾಕಷ್ಟು ವಿವೇಚಿಸಿ ಬದಲಾದ ರಾಗ ಪದದ ಸಾಹಿತ್ಯದ ಭಾವ ಪ್ರಕಟಿಸಬಲ್ಲದೇ ಎಂದು ಖಚಿತಪಡಿಸಿಕೊಳ್ಳುವುದು ವಿಹಿತ. ಈಗ ಎಲ್ಲ ಪ್ರಸಂಗಗಳಲ್ಲಿಯೂ ಹೀಗೆ ಪದದ ಭಾವಕ್ಕೆ ಸಂಬಂಧ ಇಲ್ಲದ ಕುಣಿತ ನಡೆಸುವುದೇ ಈಗಿನ ಭಾಗವತಿಕೆಯ ಮುಖ್ಯ ಲಕ್ಷಣವಾಗಿದೆ. ಒಂದು ಭಾವ ಪ್ರಧಾನವಾದ ಕಲೆ ಕೇವಲ ರಂಜನೆಯ ಕಲೆಯಾಗಿ ಮಾರ್ಪಾಡಾಗುತ್ತಿರುವುದು ಖೇದದ ವಿಚಾರ.

ಇಷ್ಟಕ್ಕೆಲ್ಲ ಕಾರಣ ಆಯಾ ತಿಟ್ಟಿನ ಮಟ್ಟನ್ನು ಕಡೆಗಣಿಸಿರುವುದು. ಯಕ್ಷಗಾನದ ತಾಳಾವರ್ತನೆಯಲ್ಲಿ ನಿಖರತೆ ಇಲ್ಲ ಅಥವಾ ಇದ್ದರೂ ಪಾಲಿಸುವುದಿಲ್ಲ ಎಂಬ ಅಭಿಪ್ರಾಯ ಸಂಗೀತಜ್ಞರಲ್ಲಿದೆ. ಇಂಥ ದೋಷಗಳು ಕಲೆಯ ಅಸ್ತಿತ್ವ ಹಾಗೂ ಸ್ಥಾನಮಾನ ಉಳಿಸಿಕೊಳ್ಳಲು ಮಾಡುವ ಪ್ರಯತ್ನಕ್ಕೆ ಪ್ರತಿಕೂಲವಾಗಿ ಕೆಲಸ ಮಾಡೀತು. ನಿಖರತೆ ಇಲ್ಲದಿದ್ದರೆ, ಮುಂದೆ ಯಕ್ಷಗಾನಕ್ಕೆ ಶಾಸ್ತ್ರೀಯ ಸ್ಥಾನಮಾನ ಗಿಟ್ಟಿಸಿಕೊಳ್ಳುವ ಮಾತಂತಿರಲಿ, ಇದಕ್ಕೊಂದು ನಿಶ್ಚಿತ ತಳಹದಿ ಇದೆ ಎಂದು ಪ್ರತಿಪಾದಿಸಲೂ ಅಸಾಧ್ಯ. ಆದುದರಿಂದ ಹಿಮ್ಮೇಳದವರೆಲ್ಲ ಸೇರಿ ಒಂದು ಸರ್ವಸಮ್ಮತ ನಿಲುವಿಗೆ ಬರಬೇಕಾದ ಅನಿವಾರ್ಯತೆ ಇದೆ.

ಬೇಳೂರು ರಾಘವ ಶೆಟ್ಟಿ

ಟಾಪ್ ನ್ಯೂಸ್

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.