ರಾಷ್ಟ್ರೀಯ ವಿಚಾರ ಸಂಕಿರಣ


Team Udayavani, Jun 22, 2018, 9:09 PM IST

b-6.jpg

ಇತ್ತೀಚೆಗೆ ಮಂಗಳೂರಿನಲ್ಲಿ “ಕರಾವಳಿ ಪರಂಪರೆ ಮತ್ತು ಕಲೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಆಧುನಿಕ ಕಲೆಯ ವಿಕಾಸ’ ಎನ್ನುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.


 ದೃಶ್ಯಕಲೆಯ ಬಹುಮುಖ್ಯವಾದ ಅಂಶಗಳನ್ನು ಚರ್ಚಿಸಲು ಮಂಗಳೂರು ವಿ.ವಿ., ಕಲಾವಿದ ಎನ್‌. ಜಿ. ಪಾವಂಜೆ ಲಲಿತಕಲಾ ಪೀಠ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಈ ವೇದಿಕೆಯನ್ನೊದಗಿಸಿತ್ತು. ಮೊದಲನೆಯ ದಿನದ ಗೋಷ್ಠಿಗಳಲ್ಲಿ ನಿಟ್ಟೆ ವಿ.ವಿ.ಯ ತುಳು ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ| ಸಾಯಿಗೀತಾ ಹೆಗ್ಡೆ ಮತ್ತು ಉಡುಪಿಯ ಆರ್‌ಆರ್‌ಸಿ ಸಂಯೋಜಕರಾದ ಪ್ರೊ| ವರದೇಶ ಹಿರೇಗಂಗೆ ಕರಾವಳಿಯ ಧಾರ್ಮಿಕ ಆಚರಣೆಯಲ್ಲಿ ಕಲಾವಂತಿಕೆಯ ಅಂಶಗಳನ್ನು ಚರ್ಚಿಸಿದರು. ಎರಡನೆಯ ಗೋಷ್ಠಿಯಲ್ಲಿ ತುಳುನಾಡಿನ ವಾಸ್ತುಶಿಲ್ಪಗಳ ಭಿನ್ನತೆ ಮತ್ತು  ಕಟ್ಟಡ ಗಳ ಮೇಲೆ ಪಾಶ್ಚಾತ್ಯ ಪ್ರಭಾವ, ವಿನ್ಯಾಸಗಳಲ್ಲಿ ಪ್ರಾದೇಶಿಕತೆಗಳನ್ನು ವಿವರಿಸುತ್ತ ಮಂಗಳೂರು ಇನ್‌ಟ್ಯಾಕ್‌ ವಿಭಾಗದ ವಾಸ್ತುತಂತ್ರಜ್ಞ ಮತ್ತು ಮುಖ್ಯಸ್ಥ ಸುಭಾಷ್‌ ಬಸು ಮತ್ತು ಮಣಿಪಾಲ ಎಂಐಟಿಯ ವಾಸ್ತುಶಿಲ್ಪ ವಿಭಾಗದ ದೀಪಿಕಾ ಶೆಟ್ಟಿ ತುಳುನಾಡಿನ ಪಾರಂಪರಿಕ ವಾಸ್ತುಕಲೆಯ ಬಗೆಗೆ ವಿಚಾರ ಗಳನ್ನು ಮಂಡಿಸಿದರು. 3ನೇ ಗೋಷ್ಠಿಯಲ್ಲಿ ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ವಾಣಿಜ್ಯ ವಿಭಾಗದ ಅಧ್ಯಾಪಕ ಡಾ| ಆಶಾಲತಾ ಎಸ್‌. ಸುವರ್ಣ ತುಳುನಾಡಿನ ಪಾರಂಪರಿಕ ಭೌತಿಕ ವಸ್ತುಪರಿಕರಗಳಲ್ಲಿ ಕಲಾವಂತಿಕೆಯ ಅಂಶಗಳನ್ನು ವಿಶ್ಲೇಷಿಸಿದರು. 

2ನೆಯ ದಿನದ ಗೋಷ್ಠಿಗಳಲ್ಲಿ ಉಡುಪಿಯ ಆರ್‌.ಆರ್‌.ಸಿ.ಯಲ್ಲಿ ಸಂಶೋಧನ ನಿರತರಾಗಿರುವ ಕಲಾವಿದ ಜನಾರ್ದನ ಹಾವಂಜೆ ಕರಾವಳಿಯ ಪ್ರಾಚೀನ ಚಿತ್ರಕಲೆಯ ಬಗೆಗೆ ವಿವರಿಸಿದರು. ಉಪಾಧ್ಯಾಯ ಮೂಡುಬೆಳ್ಳೆ ಜನಪದ ಕ್ರೀಡೆಗಳೊಂದಿಗಿನ ಪರಿಸರ ಹೇಗೆ ಕಲಾಕಾರರ ಮೇಲೆ ಪರಿಣಾಮ ಬೀರುವುದನ್ನು ವಿವರಿಸಿದರು. 

ಆರನೇ ಗೋಷ್ಠಿಯಲ್ಲಿ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಎನ್‌.ಎಸ್‌.ಪತ್ತಾರರು ಕರಾವಳಿ ಜಿಲ್ಲೆಗಳಲ್ಲಿ ಆಧುನಿಕ ಕಲೆಯ ಇತ್ತೀಚಿನ ಬೆಳವಣಿಗೆಗಳ ಬಗೆಗೆ ವಿಚಾರ ಮಂಡಿಸಿದರು. ಕರಾವಳಿಯಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಹೆಸರು ಗಳಿಸಿದ ಕಲಾವಿದರಾದ ಸುದರ್ಶನ್‌ ಶೆಟ್ಟಿ, ಎಲ್‌.ಎನ್‌. ತಲ್ಲೂರು ಮತ್ತು ಮಂಜುನಾಥ ಕಾಮತ್‌ ಅವರ ಕೆಲವು ಕಲಾಕೃತಿಗಳ ಬಗೆಗಿನ ವಿಶ್ಲೇಷಣೆಯನ್ನು ಹೊಸದಿಲ್ಲಿಯಲ್ಲಿ ವಿಶುವಲ್‌ ಥಿಯರಿಸ್ಟ್‌ ಆಗಿರುವ ಶಾಲ್ಮಲಿ ಶೆಟ್ಟಿ ನಡೆಸಿದರು. 

ಮಣಿಪಾಲ ವಿ.ವಿ.ಯ  ಸೃಜನಾತ್ಮಕ ಮತ್ತು ಸಾಂಸ್ಕೃತಿಕ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ| ಉನ್ನಿಕೃಷ್ಣನ್‌ ಕಲಾಶಿಕ್ಷಣದಲ್ಲಿನ ಸನ್ನಿವೇಶ, ಸವಾಲು ಮತ್ತು ಯೋಜನೆಗಳ ಕುರಿತು ಪ್ರಬಂಧ ಮಂಡಿಸಿದರು. ಕೊನೆಯ ಗೋಷ್ಠಿಯಲ್ಲಿ ಇಂದಿನ ಸಮಕಾಲೀನ ಕಲೆಯಲ್ಲಿನ ಸವಾಲುಗಳ ಬಗೆಗೆ ವೀಕ್ಷಕ ಸಹೃದಯರೊಡನೆ ನೇರ ಸಂವಾದಗಳ ಮೂಲಕ ಚರ್ಚಿಸಿದವರು ಎಂ. ಶಾಂತಾಮಣಿ ಮತ್ತು ಪ್ರೊ| ಸುರೇಶ್‌ ಜಯರಾಂ. ಕರಾವಳಿಯ ಯುವ ಕಲಾವಿದರ‌ ಕಲಾಕೃತಿ ಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದುದು ಉತ್ತಮ ಬೆಳವಣಿಗೆ. ಇದರ ಹಿಂದೆ ಶ್ರಮಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಕಲಾವಿದ ರಾಜೇಂದ್ರ ಕೇದಿಗೆ, ಮಂಗಳೂರು ವಿ.ವಿ. ಪ್ರಾಧ್ಯಾಪಕ ಡಾ| ರವಿಶಂಕರ್‌ ಮತ್ತು ಸಹಕರಿಸಿದ ಎನ್‌.ಜಿ. ಪಾವಂಜೆ ಲಲಿತಕಲಾ ಪೀಠದ ಎಲ್ಲರೂ ಅಭಿನಂದನಾರ್ಹರು.

ಭಾವನಾ

ಟಾಪ್ ನ್ಯೂಸ್

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.