ಪ್ರಯೋಗಗಳಿಗೆ ಸಾಕ್ಷಿ ನೃತ್ಯಾಂತರಂಗ
Team Udayavani, Jun 22, 2018, 9:14 PM IST
ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರು ಆಯೋಜಿಸುವ ನೃತ್ಯಾಂತರಂಗದ 51, 52ನೇ ಸರಣಿಗಳು ವಿಶಿಷ್ಟ ಅನುಭವಗಳನ್ನು ನೀಡಿದವು. ನೃತ್ಯಾಂತರಂಗ 51ನೇ ಸರಣಿಯಲ್ಲಿ ಅಕಾಡೆಮಿಯ ನಿರ್ದೇಶಕ ವಿ| ದೀಪಕ್ ಕುಮಾರ್ ಅವರ ಹಿರಿಯ ಶಿಷ್ಯೆಯಂದಿರಿಂದ ನೃತ್ಯ ನಡೆಯಿತು. ಚೇತನಾ ಶಶಿಕಾಂತ್ ಮಂಗಳೂರು, ಸುಸ್ಮಿತಾ ಶ್ರೀನಿವಾಸ ಪೂನಾ, ಸಹನಾ ಪ್ರವೀಣ್ ಮುಡಿಪು, ಸುಷ್ಮಾ ಮುರಳಿ ಮತ್ತು ಆಶಾ ರವಿ ಪುತ್ತೂರು ನೃತ್ಯ ಕಾರ್ಯಕ್ರಮ ನೀಡಿದ್ದಲ್ಲದೆ ಗುರುಗಳನ್ನು ಸಮ್ಮಾನಿಸಿದರು.
ನೃತ್ಯಾಂತರಂಗ 52 ಮತ್ತೂಂದು ವಿಶೇಷ ಕಾರ್ಯಕ್ರಮವಾಗಿತ್ತು. ಸಂಸ್ಥೆಯ ಉದಯೋನ್ಮುಖ ಕಲಾವಿದೆಯರಾದ ಕು| ಅಕ್ಷಯಾ ಪಾರ್ವತಿ ಸರೋಳಿ, ಇಶಾ ಸುಲೋಚನಾ ಮುಳಿಯ, ವಿಂಧ್ಯಾ ಕಾರಂತ, ಪ್ರಾರ್ಥನಾ ಮತ್ತು ಆದ್ಯ ಸುಲೋಚನಾ ಮುಳಿಯ ಇವರೆಲ್ಲರು ದೀಪಕ್ ಕುಮಾರ್ ಅವರ ಪರಿಕಲ್ಪನೆಯಂತೆ ಶಾಸ್ತ್ರೀಯ ಸಂಗೀತ ಆಧಾರಿತ ಕನ್ನಡ ಚಿತ್ರರಂಗದ ಹಳೆಯ ಗೀತೆಗಳಿಗೆ ಹೆಜ್ಜೆ ಹಾಕಿದರು. ಕನ್ನಡ ಚಿತ್ರರಂಗದಲ್ಲಿ ಇಷ್ಟೊಂದು ಶಾಸ್ತ್ರೀಯ ಆಧಾರಿತ ಹಾಡುಗಳಿವೆಯೇ ಎನ್ನುವಂತೆ ವಿಸ್ಮಯ ಪಡುವಂತಾಯಿತು. ಕನ್ನಡ ಚಿತ್ರರಂಗ ಎಷ್ಟೊಂದು ಶ್ರೀಮಂತವಾಗಿತ್ತು, ಎಷ್ಟು ಶಾಸ್ತ್ರೀಯ ಸಂಗೀತಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು ಎನ್ನುವುದನ್ನು ಮತ್ತೂಮ್ಮೆ ಅವಲೋಕಿಸುವಂತಾಯಿತು. ಭರತನಾಟ್ಯದ ಶಾಸ್ತ್ರೀಯ ಚೌಕಟ್ಟಿನೊಳಗೆ ಭದ್ರವಾಗಿ ಕೂರಿಸಿದಂತಿತ್ತು ನೃತ್ಯ ಸಂಯೋಜನೆ. ಮುಖ್ಯವಾಗಿ ಎಲ್ಲವೂ ದೇವತಾ ಸ್ತುತಿಯಾಗಿತ್ತು.
ಕಲಾಪ್ರಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.