ಕಾಲ್ತೋಡು, ಹೊಸಾಡು ಕಾಲುಸಂಕ ರಿಪೇರಿಗೆ ಕ್ರಮ ಕೈಗೊಳ್ಳಿ
Team Udayavani, Jun 23, 2018, 6:00 AM IST
ಕುಂದಾಪುರ: ಕಾಲ್ತೋಡು, ಹೊಸಾಡು ಗ್ರಾಮಗಳಲ್ಲಿ ಕಾಲು ಸಂಕದಲ್ಲಿಯೇ ವಿದ್ಯಾರ್ಥಿಗಳು ಹಳ್ಳ ದಾಟಬೇಕಾಗಿದ್ದು, ನಿತ್ಯ ಸಂಕಷ್ಟದ ಜೀವನ ಮಾಡುತ್ತಿದ್ದಾರೆ. ಈ ಬಗ್ಗೆ ಪಂಚಾಯತ್‌ಗಳು ಯಾಕೆ ಕ್ರಮಕ್ಕೆ ಮುಂದಾಗಿಲ್ಲ, ಕೂಡಲೇ ರಿಪೇರಿ ಕೈಗೊಳ್ಳಿ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಶುಕ್ರವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಬೈಂದೂರು ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯಾಯ ಪಂಚಾಯತ್ ಮಟ್ಟದಲ್ಲಿ ಯಾವ್ಯಾವ ಶಾಲೆಗಳಲ್ಲಿ ಸಮಸ್ಯೆ ಇದೆ. ಕಟ್ಟಡಗಳು ಶಿಥಿಲಗೊಂಡಿವೆಯೇ? ಪಂಚಾಯತ್‌ನಿಂದ ಸಿಗುವ ಶೇ.25 ರಷ್ಟು ಅನುದಾನ ಸರಿಯಾಗಿ ಹಂಚಿಕೆ ಯಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಟ್ಯಾಂಕರ್ ನೀರು ಖರ್ಚು : ತನಿಖೆ
ಕ್ಷೇತ್ರದಲ್ಲಿ ಐದು ನದಿಗಳು ಹರಿಯುತ್ತಿವೆ. ಆದರೂ ಬೇಸಗೆಯಲ್ಲಿ ನೀರಿನ ಕೊರತೆ ಆಗುತ್ತದೆ. ಈ ಬಗ್ಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಯೋಚನೆ ಮಾಡಬೇಕು. ಜಲಸಂಪನ್ಮೂಲವನ್ನು ಸಂವರ್ಧನೆ ಮಾಡಿಕೊಂಡು ಪೂರೈಸುವತ್ತ ಪಿಡಿಒಗಳು ಚಿಂತನೆ ಮಾಡಬೇಕು. ಈ ಬಾರಿ ಹೆಚ್ಚಿನ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಕುಬಾj ನದಿ ತೀರದಲ್ಲಿರುವ ಗ್ರಾ.ಪಂ.ಗಳು 15 ಲ.ರೂ. ಗಳನ್ನು ಟ್ಯಾಂಕರ್ ನೀರಿನ ಪೂರೈಕೆಗೆ ಖರ್ಚು ಮಾಡುತ್ತಿರುವುದು ಹೇಗೆ? ಟ್ಯಾಂಕರ್ ನೀರಿಗೆ ಹೆಚ್ಚು ಬಿಲ್ ಮಾಡಲಾದ ಪಂಚಾಯತ್‌ಗಳ ಬಿಲ್ ತನಿಖೆ ಮಾಡುವುದಾಗಿ ತಿಳಿಸಿದರು.
ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುವ ಅನುದಾನದಲ್ಲಿ ಸರಕಾರದ ಈಗಿನ ಮಾನದಂಡದಿಂದಾಗಿ ಉಳಿಕೆಯಾಗು ತ್ತದೆ. ಶಾಸಕರು ಈ ಬಗ್ಗೆ ಸರಕಾರದ ಗಮನ ಸಳೆಯಬೇಕು. ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನ ಹೆಚ್ಚು ಮಾಡಿದರೆ ಉಳಿಕೆಯಾಗುವುದಿಲ್ಲ ಎಂದು ಶಿರೂರು ಹಾಗೂ ಹಕ್ಲಾಡಿ ಪಂಚಾಯತ್ ಪಿಡಿಓಗಳು ಸಭೆಯಲ್ಲಿ ಸಲಹೆ ನೀಡಿದರು. ತಹಶೀಲ್ದಾರ್ ರವಿ, ತಾ.ಪಂ.ಅಧ್ಯಕ್ಷೆ ಜಯಶ್ರೀ ಮೊಗವೀರ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡೆ°àಕರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ ಉಪಸ್ಥಿತರಿದ್ದರು.
ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಿ
ಗ್ರಾಮದಲ್ಲಿ ಏನೆಲ್ಲ ಸಮಸ್ಯೆ ಇದೆ ಎಂದು ಪಿಡಿಒಗಳು ಹೋಗಿ ನೋಡಿ ಸಂಬಂಧಪಟ್ಟವರಿಗೆ ತಿಳಿಸಬೇಕು. ಜನರಿಗೆ ಅತಿ ಹತ್ತಿರ ಹಾಗೂ ಸುಲಭವಾಗಿ ಸಿಗುವವರು ಪಿಡಿಒಗಳು. ಜನರಿಗೆ ತತ್‌ಕ್ಷಣ ಸ್ಪಂದನೆ ನೀಡುವುದು ನಿಮ್ಮ ಕರ್ತವ್ಯ. ಪಿಡಿಒಗಳು ಯಾವುದೇ ಕ್ಷಣದಲ್ಲಿಯೂ ತಮ್ಮ ಮೊಬೈಲ್ ಚಾಲನೆಯಲ್ಲಿ ಇರಿಸಿಕೊಳ್ಳಬೇಕು. ಯಾವುದೇ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸದ ಕುರಿತು ದೂರುಗಳು ಬಂದರೆ ಕ್ರಮಕೈಗೊಳ್ಳಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.