ಅವ್ಯವಸ್ಥೆಯಲ್ಲಿರುವ ಉಪ್ಪಿನಂಗಡಿ ನಾಡ ಕಚೇರಿಗೆ ಡಿಸಿ ಭೇಟಿ
Team Udayavani, Jun 23, 2018, 2:55 AM IST
ಉಪ್ಪಿನಂಗಡಿ: ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುವ ಇಲ್ಲಿನ ಹೋಬಳಿ ಮಟ್ಟದ ನಾಡ ಕಚೆೇರಿಯನ್ನು ಸ್ಥಳಾಂತರಿಸಲು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಆದೇಶಿಸಿದರು. ಜಿಲ್ಲಾಧಿಕಾರಿ ಅವರು ತಾಲೂಕಿನ ಗಡಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 75 ಕಾಂಕ್ರೀಟು ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಸಂದರ್ಭ ನಾಡಕಚೆೇರಿಯ ದುಃಸ್ಥಿತಿಯನ್ನು ತಾಲೂಕು ದಂಡಾಧಿಕಾರಿ ಅನಂತಶಂಕರ ಬಿ. ಅವರು ಡಿಸಿ ಬಳಿ ವಿವರಿಸಿದರು. ಇದಕ್ಕೆ ತತ್ ಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ, ಶಿರಾಡಿ ಘಾಟಿ ರಸ್ತೆ ಕಾಮಗಾರಿ ವೀಕ್ಷಿಸಿ ಬಳಿಕ ಪರಿಶೀಲನೆ ನಡೆಸುವ ಭರವಸೆ ನೀಡಿದರು. ಶಿರಾಡಿ ಘಾಟಿ ಕಾಮಗಾರಿ ವೀಕ್ಷಿಸಿ ವಾಪಸ್ ಆಗುವ ಸಂದರ್ಭ ಅವರು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ದಂಡಾಧಿಕಾರಿ ಅನಂತಶಂಕರ ಬಿ. ಅವರು, ಶಿಥಿಲಗೊಂಡ ಕಟ್ಟಡದ ಒಳಗೆ ಮಳೆ ನೀರು ಸೋರಿಕೆಯಾಗುತ್ತಿದೆ. ಇಲ್ಲಿ ಮೂಲ ಸೌಕರ್ಯಗಳ ಹಾಗೂ ಆಧುನಿಕ ಉಪಕರಣಗಳ ಕೊರತೆ ಇದೆ. ಈ ಕೆಂದ್ರಕ್ಕೆ ಸೂಕ್ತವಾದ ಭದ್ರತೆ ಇಲ್ಲದಿರುವ ಕುರಿತು ಡಿಸಿ ಅವರ ಗಮನ ಸೆಳೆದರು. ಇದಕ್ಕೆ ತತ್‌ಕ್ಷಣ ಸ್ಪಂದಿಸಿದ ಡಿಸಿ, ಕಟ್ಟಡವನ್ನು ಮಿನಿವಿಧಾನ ಸೌಧಕ್ಕೆ ಸ್ಥಳಾಂತರಿಸಲು ಸೂಚಿಸಿದರು.
ಸರಕಾರಕ್ಕೆ ಮನವಿ ಸಲ್ಲಿಸಲು ಸೂಚನೆ
ನೂತನ ಕಟ್ಟಡ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಮನವಿ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿದರು. ತತ್ ಕ್ಷಣವೇ ಪ್ರಸ್ತುತ ಕಚೆೇರಿಯನ್ನು ಸ್ಥಳಾಂತರಕ್ಕೆ ಮೌಖೀಕ ಒಪ್ಪಿಗೆ ನೀಡಿದಲ್ಲದೆ ಸೂಕ್ತವಾದ ನೂತನ ಮಿನಿ ವಿಧಾನಸೌಧದಂತ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಲು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೆೇರಿಯಿಂದಲೂ ತಾತ್ಕಾಲಿಕ ವ್ಯವಸ್ಥೆಗೆ ಪತ್ರ ಮುಖೇನ ಮಿನಿವಿಧಾನ ಸೌಧದ ಆಡಳಿತ ವಿಭಾಗಕ್ಕೆ ತಿಳಿಸುವುದಾಗಿ ಹೇಳಿದರು. ಡಿಸಿ ಭೇಟಿ ಸಂದರ್ಭ ಉಪತಾಲೂಕು ದಂಡಾಧಿಕಾರಿ ಸದಾಶಿವ ನ್ಯಾಕ್, ಪ್ರಭಾರ ಕಂದಾಯ ನಿರೀಕ್ಷಕರಾದ ರಮಾನಂದ ಚಕ್ಕಡಿ, ಗ್ರಾಮ ಕರಣಿಕರಾದ ಚಂದ್ರ ನಾಯ್ಕ ಉಪಸ್ಥಿತರಿದ್ದರು.
ಸುದಿನ ವರದಿ ಪ್ರಕಟಿಸಿತ್ತು
ಕಳೆದ 15 ದಿನಗಳ ಹಿಂದೆ ಸುದಿನ ಈ ಕಟ್ಟಡದ ಅವ್ಯವಸ್ಥೆ ಹಾಗೂ ಕರ್ತವ್ಯ ನಿರ್ವಹಿಸಲು ಇದ್ದ ತೊಡಕುಗಳ ಕುರಿತಾದ ಸಚಿತ್ರ ವರದಿಯನ್ನು ಪ್ರಕಟಿಸಿ, ಸಂಬಂಧಪಟ್ಟವರ ಗಮನ ಸೆಳೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.