ಮಾನವ ಹಕ್ಕು ಆಯೋಗಕ್ಕೆ ಗಮಕ ಪರಿಷತ್‌ ದೂರು​​​​​​​


Team Udayavani, Jun 23, 2018, 6:00 AM IST

human-right-commission.jpg

ಕಾಸರಗೋಡು: ಕಾಸರಗೋಡಿನ ಸರಕಾರಿ ಶಾಲೆಗಳ ಕನ್ನಡ ಮಾಧ್ಯಮ ವಿಭಾಗಕ್ಕೆ ಕನ್ನಡ ಭಾಷಾ ಜ್ಞಾನವಿಲ್ಲದ ಶಿಕ್ಷಕರನ್ನು ಮತ್ತೆ ಕೇರಳ ಪಿ.ಎಸ್‌.ಸಿ. ಆಯ್ಕೆ ಮಾಡಿದ್ದು ಇದರ ವಿರುದ್ಧ ಕನ್ನಡಿಗರು, ಕನ್ನಡ ಸಂಘಟನೆಗಳು ದೂರು, ಚಳವಳಿಯನ್ನು ನಡೆಸುತ್ತಿದ್ದು ಪಿ.ಎಸ್‌. ಸಿ. ಚೆಯರ್‌ಮನ್‌, ಪಿ.ಎಸ್‌.ಸಿ.ಯ ಇಪ್ಪತ್ತು ಮಂದಿ ಸದಸ್ಯರು, ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇರಳ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಡಿ.ಪಿ.ಐ, ಡಿ.ಡಿ.ಇ ಮೊದಲಾದವರಿಗೆ ಹಲವಾರು ದೂರುಗಳನ್ನು ಕಳುಹಿಸಲಾಗಿದೆ. 

ಕರ್ನಾಟಕ ಗಮಕ ಕಲಾಪರಿಷತ್‌ ಕೇರಳ ಘಟಕದ  ಅಧ್ಯಕ್ಷರಾದ ಟಿ. ಶಂಕರನಾರಾಯಣ ಭಟ್‌ ಅವರು ಕೇರಳ ಮಾನವ ಹಕ್ಕುಗಳ ಆಯೋಗ, ಮಕ್ಕಳ ಹಕ್ಕುಗಳ ಆಯೋಗ, ಕೇಂದ್ರ ಭಾಷಾ ಅಲ್ಪಸಂಖ್ಯಾಕ ಆಯೋಗ, ಪಿ.ಎಸ್‌.ಸಿ. ಚೆಯರ್‌ಮನ್‌ ಅವರಿಗೆ ದಾಖಲೆಸಹಿತ ದೂರನ್ನು ಸಮರ್ಪಿಸಿದ್ದಾರೆ.

ಈಗಾಗಲೇ ಹೆಚ್ಚಿನ ಸರಕಾರಿ ಹಾಗೂ ಅನು ದಾನಿತ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌, ಹಿಂದಿ, ಸಂಸ್ಕೃತ ಮೊದಲಾದ ಭಾಷಾ ವಿಷಯಗಳನ್ನು ಬೋಧಿಸುತ್ತಿರುವವರು ಕನ್ನಡ ತಿಳಿಯದ ಅಧ್ಯಾಪಕರಾಗಿದ್ದಾರೆ. ಕಲೆ, ದೈಹಿಕ ಶಿಕ್ಷಣ ಮೊದಲಾದ ವಿಷಯಗಳಿಗೂ ಕನ್ನಡ ಬಾರದ ಅಧ್ಯಾಪಕರ ನೇಮಕ ನಡೆಯುತ್ತಿದೆ. 

ಪ್ರಧಾನ ವಿಷಯ (ಕೋರ್‌ ಸಬೆjಕ್ಟ್)ಗಳಿಗೂ ಕನ್ನಡ  ಬಾರದಿರುವವರನ್ನು ಬಾರದವರನ್ನು ನೇಮಿಸಲಾಗುತ್ತಿದ್ದು ಈಗಾಗಲೇ ಅಂತಹ ನಾಲ್ವರು ಅಧ್ಯಾಪಕರು ಕನ್ನಡ ಶಾಲೆಗಳಲ್ಲಿದ್ದಾರೆ. ಅದರ ಮೇಲೆ ಈಗ ಇನ್ನೂ ಐದು ಮಂದಿ ಕನ್ನಡ ತಿಳಿಯದವರಿಗೆ ಪಿ.ಎಸ್‌.ಸಿ. ಅಡ್ವೆಸ್‌ ನೀಡಿದ್ದು ಈ ಅನಿಷ್ಟ ಪದ್ಧತಿ ಮುಂದುವರಿಯುವ ಸಾಧ್ಯತೆಯಿದೆ. ಕನ್ನಡ ಬಾರದವರು ಪಾಠ ಮಾಡಿದರೆ ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಗತಿಯೇನು? ಇದು ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರವಲ್ಲ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೇ ಮಾರಕವಲ್ಲವೆ? ಇದರಿಂದ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದು ಹೇಗೆ? ಇದು ಕನ್ನಡಿಗ ಪೋಷಕರ ಅಳಲು. 

ಕನ್ನಡಿಗ ಮಕ್ಕಳಿಗೆ ಕಲಿಸಲು ಕನ್ನಡ ಬಾರದವರನ್ನು ನೇಮಿಸಿ ಮಲಯಾಳದಲ್ಲಿ ಪಾಠಮಾಡಿಸುತ್ತಿರುವ ವಿಧಾನವು ಭಾಷಾ ಅಲ್ಪಸಂಖ್ಯಾಕರಿಗೆ ಅವರ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ಸಂವಿಧಾನದ 350ಎ ವಿಧಿಗೆ ವಿರುದ್ಧವಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ರಕ್ಷಣೆಗೆ ಬದ್ಧವಾದ ಸರಕಾರ ಕನ್ನಡ ಶಾಲೆಗಳಿಗೆ ಕನ್ನಡ ತಿಳಿಯದವರನ್ನು ನೇಮಿಸುವ ಪದ್ಧತಿಯ ತಡೆಗೆ ಕಾನೂನು ಮಾಡಬೇಕು, ಕನ್ನಡ ಬಲ್ಲ (ಕನ್ನಡ ನೋಯಿಂಗ್‌) ಎಂಬುದಕ್ಕೆ ಕನಿಷ್ಠ ಪಕ್ಷ ಹತ್ತನೇ ತರಗತಿವರೆಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿತವರು ಎಂಬ ವ್ಯಾಖ್ಯಾನವನ್ನು ಅಂಗೀಕರಿಸಬೇಕು. ಭಾಷಾ ವಿಷಯಗಳು, ವಿಶೇಷ ವಿಷಯಗಳು ಹಾಗೂ ಪ್ರಧಾನ ವಿಷಯಗಳ ಸಹಿತ ಹತ್ತನೇ ತರಗತಿವರೆಗಿನ ಕನ್ನಡ ಮಾಧ್ಯಮ ತರಗತಿಗಳಿಗೆ ಕಲಿಸುವ ಶಿಕ್ಷಕರು ತಮ್ಮ ಇತರ ಶೈಕ್ಷಣಿಕ ಅರ್ಹತೆಗಳ ಜತೆಗೆ ಹತ್ತನೇ ತರಗತಿವರೆಗೆ ಕನ್ನಡ ಕಲಿತವರಾಗಿರಬೇಕೆಂದು ಕನ್ನಡ ಮಾಧ್ಯಮ ಶಿಕ್ಷಕರ ಅರ್ಹತಾ ನಿಯಮ ರೂಪಿಸಬೇಕು ಎಂಬುದು  ಕನ್ನಡ ಸಂಘಟನೆಗಳ ಆಗ್ರಹ.

ಇದು ಮೂರನೆಯ ಬಾರಿ
ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕೋರ್‌ ಸಬೆjಕ್ಟ್ಗಳಿಗೆ ಕನ್ನಡದ ಗಂಧಗಾಳಿಯಿಲ್ಲದ ಶಿಕ್ಷಕರನ್ನು ನೇಮಿಸುತ್ತಿರುವುದು ಇದು ಮೂರನೇ ಬಾರಿ. ಹಿಂದೆಯೂ ಇದರ ವಿರುದ್ಧ ಕನ್ನಡಿಗರು ಪ್ರಬಲವಾಗಿ ಪ್ರತಿಭಟಿಸಿದ್ದರು. ಹಲವಾರು ಮಂದಿ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘಟನೆಗಳು, ಕನ್ನಡ ಅಧ್ಯಾಪಕ ಸಂಘಟನೆಗಳು, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಾ ಭಿಮಾನಿಗಳು ಹೋರಾಟ ನಡೆಸಿದ್ದರು. ನ್ಯಾಯಾಲಯದ ಮೊರೆ ಹೋಗಿದ್ದರು. ಸರಕಾರಕ್ಕೆ ಹಲವಾರು ದೂರು ಮನವಿಗಳ ಸಮರ್ಪಣೆಯಾಗಿತ್ತು. 

ಕೇರಳ ಮಾನವ ಹಕ್ಕುಗಳ ಆಯೋಗ, ಜಿಲ್ಲಾ  ವಿದ್ಯಾಧಿಕಾರಿಗಳು ಮೊದಲಾದವರ ತನಿಖೆಯಲ್ಲೂ ಕನ್ನಡ ವಿದ್ಯಾರ್ಥಿಗಳಿಗೆ ಬೋಧಿಸಲು ಕನ್ನಡ ಅರಿತ ಶಿಕ್ಷಕರನ್ನೇ ನೇಮಿಸಬೇಕಾದ ಅಗತ್ಯ ಕಂಡುಬಂದಿತ್ತು. ಇವರನ್ನು ಬಿ.ಆರ್‌.ಸಿ. ಗೆ ಕನ್ನಡ ಕಲಿಯಲು ವರ್ಗಾಯಿಸಿದ್ದೇ ಇವರಿಗೆ ಕನ್ನಡ ಜ್ಞಾನವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು. ಭವಿಷ್ಯದಲ್ಲಿ  ಬಹಳ ಜಾಗರೂಕತೆ ವಹಿಸಿ ಕನ್ನಡ ತಿಳಿದ ಶಿಕ್ಷಕರನ್ನೇ ಕನ್ನಡ ಮಾಧ್ಯಮ ಶಾಲೆಗಳಿಗೆ ಆರಿಸಬೇಕೆಂದೂ ಲಿಖೀತ ಪರೀಕ್ಷೆಯ ಮೂಲಕ ಕನ್ನಡ ಭಾಷಾಜ್ಞಾನವನ್ನು ಪರೀಕ್ಷಿಸಬೇಕೆಂದೂ ಬೊಲ್ಪು ಸಂಘಟನೆ ನಡೆಸಿದ ದಾವೆಯ ತೀರ್ಪಿನಲ್ಲಿ ಕೇರಳ ಉಚ್ಚ ನ್ಯಾಯಾಲಯ ಪಿ.ಎಸ್‌.ಸಿ.ಗೆ ಸೂಚಿಸಿತ್ತು. 

ಕನ್ನಡ ತಿಳಿಯದ ಶಿಕ್ಷಕರು ನೇಮಕಗೊಂಡು ಹಲವು ವರ್ಷಗಳ ಬಳಿಕವೂ ಕನ್ನಡ ಕಲಿಯದೆ ಮಲಯಾಳದಲ್ಲೇ ಪಾಠ ಮಾಡುತ್ತಿದ್ದಾರೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆ ಯಾಗಿದ್ದು ತನ್ನ ತೀರ್ಪಿನಲ್ಲೂ ಇದನ್ನು ಉಲ್ಲೇಖೀಸಿತ್ತು. ಇದರ ಫಲವಾಗಿ ಹಾಗೂ  ಕನ್ನಡಿಗರ ಪ್ರಯತ್ನದ ಕಾರಣದಿಂದ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಮೊದಲಾದ ವಿಷಯಗಳನ್ನು ಬೋಧಿಸುವ ಕನ್ನಡ ಹಾಗೂ ತಮಿಳು ಮಾಧ್ಯಮ ಪ್ರೌಢಶಾಲಾ ಶಿಕ್ಷಕರ ಮೂಲ ಅರ್ಹತೆಯಲ್ಲಿ ಕ್ರಮವಾಗಿ ಕನ್ನಡ ಹಾಗೂ ತಮಿಳು ಕಲಿಕೆಯನ್ನು ಕಡ್ಡಾಯಗೊಳಿಸಿದ ಸರಕಾರಿ ಆದೇಶ G.O(P)No.166/16 G Edn Dt.Tvm 30-9-2016 ಪ್ರಕಟವಾದುದರಿಂದ ಇನ್ನು ಮುಂದೆ ಕನ್ನಡಬಾರದವರ ಆಯ್ಕೆ ನಡೆಯಲಾರದೆಂದು ಕನ್ನಡಿಗರು ಸಮಾಧಾನಪಟ್ಟಿದ್ದರು. ಆ ಆದೇಶದ ಪ್ರಕಾರ ಕನ್ನಡ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮೊದಲಾದ ವಿಷಯಗಳನ್ನು ಬೋಧಿಸಲು ನಿಯುಕ್ತರಾಗುವ ಶಿಕ್ಷಕರು ತಮ್ಮ ಎಸ್‌ಎಸ್‌ಎಲ್‌ಸಿ ಅಥವಾ ಪ್ಲಸ್‌ ಟು ಅಥವಾ ಪದವಿಪೂರ್ವ ತರಗತಿಗಳಲ್ಲಿ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿ ತೇರ್ಗಡೆಗೊಂಡವರಾಗಿರಬೇಕು ಅಥವಾ ಪದವಿ ಇಲ್ಲವೇ ಸ್ನಾತಕೋತ್ತರ ಪದವಿಯಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿತಿರಬೇಕು ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು. 

ಇದೇ ನಿಯಮ ತಮಿಳು ಮಾಧ್ಯಮ ಪ್ರೌಢಶಾಲಾ ಶಿಕ್ಷಕರಿಗೆ ತಮ್ಮ ಶೈಕ್ಷಣಿಕ ಹಂತಗಳಲ್ಲಿ ತಮಿಳು ಕಲಿಕೆಯನ್ನೂ ಕಡ್ಡಾಯಗೊಳಿಸಿತ್ತು.

ಆದರೆ  ಮೇಲಿನ ಆದೇಶ ಪ್ರಕಟ ವಾಗುವುದಕ್ಕಿಂತ ಹಿಂದಿನ ವಿಜ್ಞಾಪನೆ ಯಾದುದರಿಂದ ಈಚೆಗೆ ನಡೆದ  ಫಿಸಿಕಲ್‌ ಸಯನ್ಸ್‌ ಕನ್ನಡ ಮಾಧ್ಯಮ ಶಿಕ್ಷಕರ ಪರೀಕ್ಷೆಯಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡವನ್ನು ಕಲಿತಿರಬೇಕು ಎಂಬ ಅರ್ಹತೆ ಯನ್ನು ಪರಿಗಣಿಸದೆ ಸಂದರ್ಶನ ಸಮಯಲ್ಲಿ ಕನ್ನಡ ಭಾಷಾಜ್ಞಾನ ಪರೀಕ್ಷಿ ಸುವ ಹಳೆಯ ವಿಧಾನದ ಮೂಲಕವೇ ಆಯ್ಕೆ ನಡೆದಿದೆ. 

ಮಾತೃಭಾಷೆ ಶಿಕ್ಷಕರ ನೇಮಕ ನಿಯಮ ರೂಪಿಸಲು ಮನವಿ
ಕನ್ನಡ ಶಾಲೆಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ನೇಮಿಸಬಾರದು, ಕನ್ನಡ ಮಾಧ್ಯಮಕ್ಕೆ ಯಾವುದೇ ವಿಷಯವನ್ನು ಬೋಧಿಸಲು ನೇಮಕವಾಗುವ ಶಾಲೆ ಯಲ್ಲಿ  ಶಿಕ್ಷಕರು ಕನ್ನಡ ಕಲಿತವರಾಗ ಬೇಕೆಂದು ನಿಯಮ ಮಾಡಬೇಕೆಂದು ಟಿ. ಶಂಕರನಾರಾಯಣ ಭಟ್‌ ಸಂಬಂಧಪಟ್ಟವರನ್ನು ವಿನಂತಿಸಿದ್ದಾರೆ.

ಕನ್ನಡ ಭಾಷಾತಜ್ಞರ ಉಪಸ್ಥಿತಿಯಲ್ಲೇ ಆಯ್ಕೆ?
ಸಂದರ್ಶನ ಸಮಿತಿ ಯಲ್ಲಿ ಕನ್ನಡ ಭಾಷಾತಜ್ಞರು ಪಾಲ್ಗೊಂಡಿದ್ದರೂ ಕನ್ನಡ ತಿಳಿಯದ ಅಭ್ಯರ್ಥಿಗಳ ಆಯ್ಕೆಯನ್ನು ವಿರೋಧಿಸ ದಿರುವುದರಿಂದ ಮಲಯಾಳಿ ಅಭ್ಯರ್ಥಿಗಳ ಆಯ್ಕೆ ನಡೆಯಿತೆನ್ನಲಾಗಿದೆ. ಕನ್ನಡ ಭಾಷಾತಜ್ಞರ ಉಪಸ್ಥಿತಿಯಲ್ಲೇ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎಂದು ಪಿಎಸ್‌ಸಿ ಮಾನವಹಕ್ಕು ಆಯೋಗ ಹಾಗೂ ಕೇರಳ ಉಚ್ಚ ನ್ಯಾಯಾಲಯದೆದುರು ಹಿಂದೆ ಕೂಡ ಹೇಳಿಕೆ ನೀಡಿದ್ದರಿಂದ ಇಂತಹ ಸಂದರ್ಭಗಳಲ್ಲಿ ಕನ್ನಡ ಭಾಷಾತಜ್ಞರ ಪಾತ್ರ ಎಷ್ಟು ಮಹತ್ವದ್ದು ಎಂಬುದು ಮನದಟ್ಟಾಗುತ್ತದೆ. ಎಸ್‌.ಸಿ. ವಿಭಾಗದಲ್ಲಿ ಕನ್ನಡಬಲ್ಲ ಅಭ್ಯರ್ಥಿಗಳೇ ಇದ್ದುದರಿಂದ ಅವರಿಬ್ಬರೂ ಆಯ್ಕೆಯಾದರು. ಮುಸ್ಲಿಂ ವಿಭಾಗದಲ್ಲಿ ಕನ್ನಡಿಗರು ಇಲ್ಲದೆ ಇಬ್ಬರು ಮಲಯಾಳಿಗಳ ಆಯ್ಕೆಯಾಯಿತು, ನಾಡಾರ್‌, ಒ.ಎಕ್ಸ್‌, ದೀವಾರ ಸಮುದಾಯಗಳಲ್ಲಿ ಕನ್ನಡ ಕಲಿತವರಿಲ್ಲದ ಕಾರಣ ತಲಾ ಒಬ್ಬರಂತೆ ಮೂವರು ಹೀಗೆ ಒಟ್ಟು ಐದು ಮಂದಿ ಕನ್ನಡ ತಿಳಿಯದವರ ಆಯ್ಕೆ ನಡೆದಿದೆ. ಇವರಲ್ಲಿ ಮೊದಲ ಮೂರು ಮಂದಿಗೆ ತತ್‌ಕ್ಷಣ ನೇಮಕಾತಿ ದೊರೆಯಬಹುದು ಎನ್ನಲಾಗುತ್ತಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ನೇಮಿಸಿದರೆ ಕನ್ನಡ ವಿದ್ಯಾರ್ಥಿಗಳು ಹಾಗೂ ಪೋಷಕರು  ಹೋರಾಟ ನಡೆಸಲು ಸಿದ್ಧವಾಗಿದ್ದಾರೆ.

ಕನ್ನಡಿಗರ ಉದ್ಯೋಗ ಅವಕಾಶಕ್ಕೆ ಕುತ್ತು
ಭೌತಿಕ ವಿಜ್ಞಾನ (ಫಿಸಿಕಲ್‌ ಸಯನ್ಸ್‌) ಕನ್ನಡ ಮಾಧ್ಯಮ ಪ್ರೌಢಶಾಲಾ ಅಧ್ಯಾಪಕ ಎನ್‌.ಸಿ.ಎ. (ಎಸ್‌.ಸಿ, ಒ.ಎಕ್ಸ್‌, ನಾಡಾರ್‌, ದೀವಾರ, ಮುಸ್ಲಿಂ ಸಮುದಾಯಗಳಿಗೆ ಮೀಸಲು) ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ಪಿ.ಎಸ್‌.ಸಿ. ಸಂದರ್ಶನ ನಡೆದಿದ್ದು ಎಸ್‌. ಸಿ. ವಿಭಾಗದಲ್ಲಿ ಇಬ್ಬರು ಕನ್ನಡ ಬಲ್ಲ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಒ.ಎಕ್ಸ್‌, ನಾಡಾರ್‌, ದೀವಾರ ವಿಭಾಗಗಳಲ್ಲಿ ತಲಾ ಒಂದು ಹಾಗೂ ಮುಸ್ಲಿಂ ವಿಭಾಗದಲ್ಲಿ ಇಬ್ಬರು ಹೀಗೆ ಒಟ್ಟು ಐದು ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಅವರಿಗೆ ಕನ್ನಡ ಭಾಷೆಯ ಪ್ರಾಥಮಿಕ ಜ್ಞಾನವೂ ಇಲ್ಲ. ಇಂತಹ ಅನರ್ಹರನ್ನು ಆರಿಸಿದರೆ ಸಮರ್ಪಕವಾಗಿ ಕನ್ನಡ ಬಲ್ಲವರಾದ ತಮ್ಮ ಉದ್ಯೋಗ ಅವಕಾಶಕ್ಕೆ ಕುತ್ತಾಗುತ್ತದೆ ಎಂಬುದು ಕನ್ನಡಿಗ ಉದ್ಯೋಗಾರ್ಥಿಗಳ ದೂರು.

ಟಾಪ್ ನ್ಯೂಸ್

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

1

Pushpa 2: ಕಿಸಿಕ್‌ ಎಂದು ಕುಣಿದ ಶ್ರೀಲೀಲಾ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.