ನಾಲ್ವರು ಐಸಿಸ್ ಉಗ್ರರ ಹತ್ಯೆ
Team Udayavani, Jun 23, 2018, 6:00 AM IST
ಶ್ರೀನಗರ/ಹೊಸದಿಲ್ಲಿ/ಲಕ್ನೋ: ಜಮ್ಮು ಮತ್ತು ಕಾಶ್ಮೀರದ ನೆಮ್ಮದಿ ಹಾಳಾಗಲು ಕಾರಣರಾಗಿರುವ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಗೆ ಶುಕ್ರವಾರ ಅದ್ಭುತ ಯಶಸ್ಸು ಸಿಕ್ಕಿದೆ. ಅಮರನಾಥ ಯಾತ್ರೆ ಶುರುವಾಗಲು 6 ದಿನಗಳು ಉಳಿದಿರುವಂತೆಯೇ ಉಗ್ರ ಸಂಘಟನೆ ಐಸಿಸ್‌ನ ಜಮ್ಮು ಮತ್ತು ಕಾಶ್ಮೀರ ಘಟಕದ ನಾಯಕ ದಾವೂದ್ ಅಹ್ಮದ್ ಸೋಫಿ ಸಹಿತ ನಾಲ್ವರು ಉಗ್ರರನ್ನು ಕೊಲ್ಲ ಲಾಗಿದೆ. ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಒಬ್ಬ ನಾಗರಿಕ ಮತ್ತು ಪೊಲೀಸ್ ಸಿಬಂದಿ ಹುತಾತ್ಮರಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಖಾರಿಮ್ ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿಯನ್ನಾಧರಿಸಿ ಸೇನೆ ಅತ್ತ
ಧಾವಿಸಿತು. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ ಜತೆಗೆ ಗುರುತಿಸಿಕೊಂಡಿ ರುವ ಇಸ್ಲಾಮಿಕ್ ಸ್ಟೇಟ್ ಜಮ್ಮು ಮತ್ತು ಕಾಶ್ಮೀರ (ಐಎಸ್‌ಜೆಕೆ)ದ ನಾಯಕ ದಾವೂದ್ ಅಹ್ಮದ್ ಸೋಫಿ ಮತ್ತು ಇತರ ಮೂವರು ಕಟ್ಟಡದಲ್ಲಿ ಅಡಗಿದ್ದರು. ಜಮ್ಮು-ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಈ ಕಾರ್ಯಾಚರಣೆ ನಡೆಸಿವೆ. ಹಾನಿ ಪ್ರಮಾಣವನ್ನು ಗಣನೀಯ ವಾಗಿ ತಗ್ಗಿಸಲಾಗಿದೆ ಎಂದಿದ್ದಾರೆ ಕಾಶ್ಮೀರದ ಐಜಿಪಿ ಸ್ವಯಂ ಪ್ರಕಾಶ್ ಪಾಣಿ.
21 ಉಗ್ರರ ಪಟ್ಟಿ ಬಿಡುಗಡೆ
ಐಸಿಸ್‌ನ ನಾಲ್ವರು ಉಗ್ರರು ಬಲಿಯಾಗುತ್ತಲೇ, ಹಿಟ್‌ಲಿಸ್ಟ್‌ನಲ್ಲಿರುವ 21 ಮಂದಿಯ ಪಟ್ಟಿಯನ್ನು ಸೇನೆ ಬಿಡುಗಡೆ ಮಾಡಿದೆ. ಅದರಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ 11, ಲಷ್ಕರ್-ಎ- ತಯ್ಯಬಾ ಸಂಘಟನೆಯ 7, ಜೈಶ್-ಎ- ಮೊಹಮ್ಮದ್ ಉಗ್ರ ಸಂಘ ಟನೆಯ 2, ಅನ್ಸರ್ ಘಜ್ವತ್ ಉಲ್- ಹಿಂದ್‌ನ ಒಬ್ಬ ಉಗ್ರ ಸೇರಿದ್ದಾನೆ.
ಸರ್ವಪಕ್ಷ ಸಭೆ
ರಾಜ್ಯಪಾಲ ಎನ್.ಎನ್.ವೋಹ್ರಾ ರಾಜಭವನದಲ್ಲಿ ಎಲ್ಲ ಪಕ್ಷಗಳ ನಾಯಕರ ಜತೆಗೆ ಸಭೆ ನಡೆಸಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ, ಬಿಜೆಪಿ, ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಶುಕ್ರವಾರ ಬೆಳಗ್ಗೆಯೇ ಮಾಜಿ ಸಿಎಂ ಮೆಹಬೂಬಾ ಪ್ರತ್ಯೇಕವಾಗಿ ವೋಹ್ರಾ ಜತೆ ಮಾತನಾಡಿದ್ದರು. ಈ ನಡುವೆ ಅಮರನಾಥ ಯಾತ್ರೆ ಮುಕ್ತಾಯದ ವರೆಗೆ ಹಾಲಿ ರಾಜ್ಯಪಾಲರನ್ನೇ ಮುಂದುವರಿಸಲು ಕೇಂದ್ರ ಇಂಗಿತ ವ್ಯಕ್ತಪಡಿಸಿದೆ.
ಯಾರೀತ ಸೋಫಿ ?
ಸೋಫಿ ಶ್ರೀನಗರದ ನಿವಾಸಿ. ಐಸಿಸ್ ಜತೆ ಗುರುತಿಸಿಕೊಳ್ಳುವ ಮೊದಲು ಹಲವಾರು ಕಲ್ಲು ತೂರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಎಸ್ಸೆ„ ಗುಲಾಂ ಮೊಹಮ್ಮದ್, ಹೆಡ್ ಕಾನ್‌ಸ್ಟೆಬಲ್ ನಸೀರ್ ಅಹ್ಮದ್‌ರ ಹತ್ಯೆಯಲ್ಲೂ ಭಾಗಿಯಾಗಿದ್ದ ಎಂದಿದ್ದಾರೆ ಐಜಿಪಿ. ತೆಹ್ರಿಕ್-ಉಲ್-ಮುಜಾಹಿದೀನ್ ಎಂಬ ಸಂಘಟನೆ ಜತೆಗೆ ಸೋಫಿ ಗುರುತಿಸಿಕೊಂಡಿದ್ದ. ಅನಂತರ ಈ ಸಂಘಟನೆ ಐಸಿಸ್ ಜತೆಗೆ ಗುರುತಿಸಿಕೊಂಡಿತು. ಅದಿಲ್ ರೆಹಮಾನ್ ಭಟ್, ಮೊಹಮ್ಮದ್ ಅಶ್ರಫ್ ಇಟೂ ಮತ್ತು ಮಜಿದ್ ಮನೂjರ್ ದರ್ ಅಸುನೀಗಿರುವ ಇತರ ಉಗ್ರರು. ಅವರೆಲ್ಲ ಸ್ಥಳೀಯರೇ ಆಗಿದ್ದಾರೆ.
ವಿಜಯಕುಮಾರ್ ಅಧಿಕಾರ ಸ್ವೀಕಾರ
ಕರ್ನಾಟಕದಲ್ಲಿ ಕಾಡುಗಳ್ಳ ವೀರಪ್ಪನ್ ನಿಗ್ರಹದಲ್ಲಿ ಭಾಗಿಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಕೆ. ವಿಜಯಕುಮಾರ್ ರಾಜ್ಯಪಾಲರ ಸಲಹೆಗಾರರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರ ಜತೆಗೆ ಭದ್ರತಾ ಸ್ಥಿತಿಯ ಅವಲೋಕನವನ್ನೂ ನಡೆಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ವಿವಿಧ ಹಂತದ ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯತೆ ಇರಬೇಕು ಎಂದು ಸಲಹೆ ಮಾಡಿದ್ದಾರೆ. ಇದೇ ವೇಳೆ ಅಮರನಾಥ ಯಾತ್ರೆಗೆ ತೆರಳುವ ಎಲ್ಲ ವಾಹನಗಳ ಮೇಲೆ ನಿಗಾ ಇಡಲು ವಿಶೇಷವಾದ ಚಿಪ್ ಅಳವಡಿಸ ಲಾಗುತ್ತದೆ ಎಂದು ಜಮ್ಮು ವಲಯದ ಐಜಿಪಿ ಎಸ್.ಡಿ. ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.