ಫುಡ್‌ಪಾರ್ಕ್‌ನಿಂದ ರೈತರಿಗಿಲ್ಲ ಅನುಕೂಲ
Team Udayavani, Jun 23, 2018, 6:25 AM IST
ತುಮಕೂರು: ರೈತರು ಬೆಳೆದ ಬೆಳೆಗಳ ಸಂರಕ್ಷಣೆ ಮತ್ತು ಬೆಳೆಗೆ ಸೂಕ್ತ ಬೆಲೆ ಸಿಗುವ ಕನಸು ಕಂಡು 2014ರ ಸೆಪ್ಟೆಂಬರ್ 24 ರಂದು ಇಲ್ಲಿಗೆ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಿರುವ ಫುಡ್‌ಪಾರ್ಕ್, ಈಗ ರೈತರ ನೆರವಿಗೆಬರುತ್ತಿಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆ.
ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಫುಡ್ ಪಾರ್ಕ್ ಎನ್ನುವ ಹೆಗ್ಗಳಿಕೆ ಇದರದ್ದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆಗೊಳಿಸಿದ್ದರು. ತುಮಕೂರು ಸೇರಿ ಸುತ್ತ ಮುತ್ತಲ ಹತ್ತಾರು ಜಿಲ್ಲೆಗಳ ರೈತರು ಬೆಳೆದಹಣ್ಣು, ತರಕಾರಿ ಗಳ ಸಂರಕ್ಷಣೆ ಮತ್ತು ಮಾರಾಟಕ್ಕೆ ಅನುಕೂಲ ವಾಗುತ್ತದೆ ಎಂದು ಆರಂಭಿಸಿದ್ದ ಈ ಫುಡ್ ಪಾರ್ಕ್‌ಗೆ ಜಿಲ್ಲೆಯಿಂದ ರೈತರು ಹಣ್ಣು, ತರಕಾರಿಗಳನ್ನು ತೆಗೆದುಕೊಂಡು ಹೋಗುವ ಅವಕಾಶಗಳೇ ಈಗ ಇಲ್ಲ ಎಂಬುದು ರೈತರ ಅಳಲು.
ಜಿಲ್ಲೆಯಲ್ಲಿ ಮಾವನ್ನು ವ್ಯಾಪಕವಾಗಿ ಬೆಳೆಯಲಾಗಿದೆ. ಹಣ್ಣು, ತರಕಾರಿಗಳ ಬೆಲೆ ಕುಸಿತ ಕಂಡಿದೆ. ಅವುಗಳನ್ನು ಸಂರಕ್ಷಿಸಲು ಅವಕಾಶವಾಗುತ್ತಿಲ್ಲ. ರೈತರು ತಾವು ಬೆಳೆದ ಬೆಳೆಯನ್ನು ಫುಡ್‌ಪಾರ್ಕ್‌ಗೆ ಹೇಗೆ ತರಬೇಕು ಎನ್ನುವ
ಮಾಹಿತಿ ನೀಡುತ್ತಿಲ್ಲ. ಕೇವಲ ನಂ.1 ಕ್ವಾಲಿಟಿ ಉತ್ಪನ್ನಗಳನ್ನು ಖರೀದಿಸಿ, ಉಳಿದದ್ದನ್ನು ವಾಪಸ್ ನೀಡುತ್ತಾರೆ ಎಂಬುದು ರೈತರ ಅಳಲು. ಆದರೆ, ಫುಡ್‌ಪಾರ್ಕ್‌ನಿಂದ ಸುತ್ತ ಮುತ್ತಲ ಹಳ್ಳಿಯ ರೈತರಿಗೆ ಅನುಕೂಲವಾಗುತ್ತಿದೆ.
ಆದರೆ, ಇಲ್ಲಿಗೆ ಬರುವಂತಹ ಹಣ್ಣು, ತರಕಾರಿಗಳು ಉತ್ತಮವಾಗಿರ ಬೇಕು ಎನ್ನುತ್ತಾರೆ ಅಧಿಕಾರಿಗಳು.
ಫುಡ್‌ಪಾರ್ಕ್‌ನ ಆಶಯಗಳೇನು: ಈ ಭಾಗದ ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ಕಡಿಮೆ ಬೆಲೆಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಈ ಬೆಳೆಯನ್ನು ಸಂರಕ್ಷಿಸಿ, ಮಾರಾ ಟಕ್ಕೆ ಅನುಕೂಲಕರವಾದ
ವಾತಾವರಣ ಸೃಷ್ಠಿಸುವ ಆಶಯದಿಂದ 110 ಎಕರೆ ವಿಸ್ತೀರ್ಣ ದಲ್ಲಿ 114 ಕೋಟಿ ರೂ.ವೆಚ್ಚದಲ್ಲಿ ಈ ಫುಡ್‌ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಸಚಿವಾಲಯದ ನೆರವಿನಲ್ಲಿ ಇದನ್ನು ನಿರ್ಮಿಸಲಾಗಿದ್ದು, ಫ್ಯೂಚರ್ ಗ್ರೂಪ್ ಸಂಸ್ಥೆ ಈ ಪಾರ್ಕ್ ನಿರ್ಮಾಣ ಮಾಡಿದೆ. ಸುಮಾರು 2,000 ಟನ್ ಸಂಗ್ರಹಣ ಸಾಮರ್ಥ್ಯವನ್ನು ಇದು ಹೊಂದಿದೆ.
ಕೇಂದ್ರ ಸರ್ಕಾರ ಈ ಯೋಜನೆಗೆ 50 ಕೋಟಿ ರೂ. ಸಬ್ಸಿಡಿ ನೀಡಿದೆ. ವಿಶ್ವಮಟ್ಟದ ಅತ್ಯಂತ ಉತ್ತಮ ಆಧುನಿಕ
ಯಂತ್ರೋಪಕರಣಗಳನ್ನು ಈ ಫುಡ್‌ಪಾರ್ಕ್ ಹೊಂದಿದೆ. ಇಲ್ಲಿ ತರಕಾರಿ, ದವಸ-ಧಾನ್ಯ, ಹಣ್ಣು- ಹಂಪಲುಗಳನ್ನು ಕೆಡ ದಂತೆ ಶೇಖರಿಸಿಡ ಬಹುದಾಗಿದೆ. ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಹಣ್ಣು ಮಾಡುವ ಘಟಕ, ಕತ್ತರಿ ಸಿದ ತರಕಾರಿಗಳನ್ನು ಒಂದು ವರ್ಷದವರೆಗೆ ಕೆಡದಂತೆ ಪ್ರೀಜ್ ಮಾಡುವ ಘಟಕ, ರೈತರು ಬೆಳೆದ ದವಸ ಧಾನ್ಯಗಳನ್ನು ಹಾಳಾಗದಂತೆ ಸಂಗ್ರಹಿಸಲು ಸೈಲೋಸ್ ಘಟಕ, ಹಣ್ಣುಗಳ ಪಲ್ಪಿಂಗ್ ಮಾಡಲು ಸ್ಟರಿಲೈಸೇಷನ್ μಲ್ಟರ್ ಸೇರಿ ಮತ್ತಿತರ ಸಂಸ್ಕರಣಾ ಘಟಕಗಳು ಇಲ್ಲಿವೆ.
ಎಲ್ಲವೂ ಒಂದೇ ಸೂರಿನಡಿಯಲ್ಲಿ ಎಂಬ ತತ್ವದಡಿಯಲ್ಲಿ ಇದು ತಲೆ ಎತ್ತಿದ್ದು, ರೈತರ ಹೊಲ ದಿಂದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ, ಬೇಗನೆ ಹಾಳಾಗುವ ಕೃಷಿ ಉತ್ಪನ್ನಗಳನ್ನು ತನ್ನ ಶೈತ್ಯಲೀಕರಣ ಘಟಕಗಳಲ್ಲಿ ಸಂರಕ್ಷಿಸಿ,ಉತ್ತಮ ಬೆಲೆ ಬಂದಾಗ ಅವುಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಈ ಫುಡ್‌ಪಾರ್ಕ್
ಹೊಂದಿದೆ. ತುಮಕೂರು ಸುತ್ತಮುತ್ತಲ 200ಕಿ.ಮೀ. ವ್ಯಾಪ್ತಿ ಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ರೈತರು ಬೆಳೆಯುವ ಹಣ್ಣು, ತರಕಾರಿ, ಹೂವು ಸೇರಿ ಎಲ್ಲಾ ರೀತಿಯ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಿ, ಸಂಸ್ಕರಿಸಲಿದೆ.
ಫುಡ್ ಪಾರ್ಕ್‌ನವರು ಏನು ಹೇಳುತ್ತಾರೆ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫುಡ್‌ಪಾರ್ಕ್‌ನ ಹಣ್ಣು ತರಕಾರಿ ಖರೀದಿ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ರೆಡ್ಡಿ,
ತುಮಕೂರು ಸೇರಿ ಸುತ್ತಮುತ್ತಲ ಜಿಲ್ಲೆಗಳ ರೈತರಿಗೆ ನೆರವಾಗುತ್ತಿದೆ. ಈವರೆಗೆ 700ಕ್ಕೂ ಹೆಚ್ಚು ರೈತರು ನಮ್ಮಲ್ಲಿ
ನೋಂದಣಿ ಮಾಡಿಕೊಂಡಿದ್ದಾರೆ.
ರಾಜ್ಯದ ಎಲ್ಲ ಕಡೆ ರೈತರಿಂದಲೇ ತರಕಾರಿ, ಹಣ್ಣುಗಳನ್ನು ಖರೀದಿ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆಯ ಚೇಳೂರು ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಿ ಸಂರಕ್ಷಿಸುತ್ತಿದ್ದೇವೆ. ಯಾವ ದಿನಗಳಲ್ಲಿ ಯಾವ ತರಕಾರಿ, ಹಣ್ಣು ಬರುತ್ತದೋ ಅದನ್ನು ಸಂರಕ್ಷಿಸುತ್ತೇವೆ.
ಟೊಮೇಟೊ ಬೆಲೆ ಕುಸಿತ ಉಂಟಾದಾಗ ಟೊಮೇಟೊ ಹಣ್ಣನ್ನು ರೈತರಿಂದ ಖರೀದಿಸಿ ಸಂರಕ್ಷಣೆ ಮಾಡಿದ್ದೆವು. ಅಕ್ಕಿ ಮಿಲ್ ಇದೆ. ಅಕ್ಕಿಯನ್ನು ಸಂರಕ್ಷಣೆ ಮಾಡುತ್ತಿದ್ದೇವೆ. ಇಲ್ಲಿ ಸಂರಕ್ಷಣೆ ಮಾಡಿದ ಹಣ್ಣು ತರಕಾರಿಗಳನ್ನು ಬಿಗ್‌ಬಝಾರ್ ಸೇರಿ ವಿವಿಧ ಕಡೆಗಳಿಗೆ ಕಳುಹಿಸುತ್ತೇವೆ. ರೈತರಿಗೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುತ್ತೇವೆ.
ಆದರೆ, ಇಲ್ಲಿಗೆ ಬರುವಂತಹ ಹಣ್ಣು, ತರಕಾರಿಗಳು ಉತ್ತಮ ವಾಗಿರಬೇಕು. ಚಿಕ್ಕಬಳ್ಳಾಪುರ ಸೇರಿ ವಿವಿಧ ಕಡೆಗಳಲ್ಲಿ ತರಕಾರಿ ಖರೀದಿ ಕೇಂದ್ರ ಮಾಡಿದ್ದೇವೆ.
ರೈತರು ನಮ್ಮ ಸಂಪರ್ಕಕ್ಕೆ ಬಂದ ಮೇಲೆ ವೆಂಡರ್ ಕೋಡ್ ಕ್ರಿಯೆಟ್ ಮಾಡುತ್ತೇವೆ. ಅವರ ವ್ಯವಹಾರ ಬ್ಯಾಂಕ್ ಮೂಲಕವೇ ನಡೆಯುತ್ತದೆ. ಪ್ರತಿನಿತ್ಯ ಫುಡ್‌ಪಾರ್ಕ್‌ನಲ್ಲಿ 1,200 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಅವರು.
9 ಫ್ಲಾಟ್‌ಗಳಲ್ಲಿ ವಿವಿಧ ಯುನಿಟ್‌ಗಳು ಕೆಲಸ ನಿರ್ವಹಿಸುತ್ತಿವೆ. ಎಲ್ಲಾ ಯುನಿಟ್‌ಗಳು ಕೆಲಸ ನಿರ್ವಹಿಸಿದರೆ ಹೆಚ್ಚಿನ ಉದ್ಯೋಗ ಸೃಷ್ಠಿಯಾಗುತ್ತದೆ.ಕೆಲಸ ನಿರ್ವಹಿಸುತ್ತಿರು ವವರು ತುಮಕೂರು ಸುತ್ತಮುತ್ತಲ ಜನರೇ ಹೆಚ್ಚಿದ್ದಾರೆ.
– ಕಿರಣ್, ಫುಡ್‌ಪಾರ್ಕ್‌ನ ಮಾನವ
ಸಂಪನ್ಮೂಲ ವಿಭಾಗದ ಮುಖ್ಯಸ್ಥ
ಖಾಸಗಿ ಸಹಭಾಗಿತ್ವದಲ್ಲಿ ಫುಡ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುತ್ತಿಲ್ಲ ಎನ್ನುವ ಪ್ರಬಲ ಕೂಗು ಕೇಳಿ ಬರುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ,ಜಿಲ್ಲಾ ಉಸ್ತುವಾರಿ ಸಚಿವರು, ರೈತ
ಪ್ರತಿನಿಧಿಗಳನ್ನು ಕರೆಸಿ ಮಾತನಾಡುತ್ತೇನೆ.
– ಎಸ್.ಪಿ.ಮುದ್ದಹನುಮೇಗೌಡ, ಸಂಸದ
ಫುಡ್‌ಪಾರ್ಕ್ ಉದ್ಘಾಟನೆಯಾದಾಗ ಬಹಳ ನಿರೀಕ್ಷೆ ಹೊಂದಿದ್ದೆವು.ಉದ್ಯೋಗವೂ ಇಲ್ಲ, ಯಾವುದೇ ಅನು
ಕೂಲವೂ ಆಗುತ್ತಿಲ್ಲ. ಬೆಳೆಗಳನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎನ್ನುವ ಮಾಹಿತಿಯನ್ನು ತಿಳಿಸುತ್ತಿಲ್ಲ.
– ಬಿ. ಉಮೇಶ್
ಜಿಲ್ಲಾ ಸಂಚಾಲಕರು ಪ್ರಾಂತ ರೈತ ಸಂಘ
ಬೆಳೆಗಳನ್ನು ಅಲ್ಲಿಗೆ ಹೇಗೆ ತೆಗೆದುಕೊಂಡು ಹೋಗಬೇಕು, ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಅಲ್ಲಿಗೆ ರೈತರು ಹೋದರೆ ಅವರಿಗೆ ಬೇಕಾದ್ದನ್ನು ತೆಗೆದುಕೊಂಡು ಉಳಿದದ್ದನ್ನು ಬೇಡ ಎನ್ನುತ್ತಾರೆ.
– ಚಂದ್ರಶೇಖರ್
ರೈತ, ನರಸಾಪುರ ಗ್ರಾಪಂ ಮಾಜಿ ಉಪಾಧ್ಯಕ್ಷ
ಹಣ್ಣು , ತರಕಾರಿ ಗಳ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಅಲ್ಲಿಯೇ ರೈಸ್ ಮಿಲ್ ಇದ್ದು, ಅಕ್ಕಿ ದಾಸ್ತಾನು ಮಾಡುತ್ತಿ ದ್ದಾರೆ. ಹಲವರು ಹಣ್ಣು, ತರಕಾರಿಗಳನ್ನು ನೀಡುತ್ತಿದ್ದಾರೆ. ನಮ್ಮ ಭಾಗದವರು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
– ಎಲ್. ನಾಗರಾಜ್
ಜಂಟಿ ನಿರ್ದೇಶಕರು ಕೈಗಾರಿಕಾ ಇಲಾಖೆ
– ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.