ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ
Team Udayavani, Jun 23, 2018, 12:22 PM IST
ಹುಣಸೂರು: ಕಳೆದ ಕೆಲ ದಿನಗಳಿಂದ ಜನರನ್ನು ಕಾಡುತ್ತಿದ್ದ, ಚಿರತೆಯೊಂದು ಬೋನಿಗೆ ಬಿದ್ದಿದೆ. ತಾಲೂಕು ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಪಲಿನ ಆನಂದ್‌ರಿಗೆ ಸೇರಿದ ಜಮೀನಿನಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಆನಂದ್ ಕೊಟ್ಟಿಗೆಗೆ ನುಗ್ಗಿದ್ದ ಚಿರತೆ ಕರುವನ್ನು ಕೊಂದು ಹಾಕಿತ್ತು.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಸ್ಥಳದಲ್ಲಿ ಬೋನಿನೊಳಗೆ ಕರುವಿನ ಮಾಂಸ ಇಡಲಾಗಿತ್ತು. ತಿನ್ನಲು ಬಂದ ಚಿರತೆಯು ಸಿಕ್ಕಿಕೊಂಡಿದೆ. ಸುಮಾರು ಎರಡು ವರ್ಷದ ಗಂಡು ಚಿರತೆ ಇದಾಗಿದ್ದು, ಇದನ್ನು ಪ್ರಾದೇಶಿಕ ಅರಣ್ಯ ವಲಯದ ಪಿರಿಯಾಪಟ್ಟಣ ತಾಲೂಕು ಬೂದಿ ತಿಟ್ಟು ಅರಣ್ಯ ಪ್ರದೇಶದಲ್ಲಿ ಬಂಧಮುಕ್ತಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ಆರ್‌ಎಫ್ಒ ಶಾಂತಕುಮಾರ್, ಆರ್‌ಎಫ್‌ಒ ರಿಜ್ವಾನ್, ಫಾರೆಸ್ಟರ್ ಪ್ಯಾರೆಜಾನ್, ದೇವಯ್ಯ ಭಾಗವಹಿಸಿದ್ದರು.
ದೊಡ್ಡ ಚಿರತೆ ಸೆರೆಗೆ ಗ್ರಾಮಸ್ಥರ ಪಟ್ಟು: ಗ್ರಾಮದ ಸುತ್ತಮುತ್ತಲಿನಲ್ಲಿ ಮತ್ತೂಂದು ದೊಡ್ಡ ಚಿರತೆ ಇದ್ದು, ಅದನ್ನು ಹಿಡಿಯಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು, ಸ್ಥಳದಿಂದ ಚಿರತೆಯನ್ನು ಕೊಂಡೊಯ್ಯದಂತೆ ಸುಮಾರು 3 ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಕೊನೆಗೆ ಎಸ್.ಐ.ಆನಂದ್ ಮನವಿ ಮಾಡಿದರೂ ಜಗ್ಗದಿದ್ದಾಗ, ಆರ್.ಎಫ್.ಓ ಶಾಂಕುಮಾರಸ್ವಾಮಿ ಮತ್ತೂಂದು ಬೋನನ್ನು ಜಮೀನಿನಲ್ಲಿರಿಸಿದ ನಂತರ ಸೆರೆ ಸಿಕ್ಕಿದ್ದ ಚಿರತೆ ಕೊಂಡೊಯ್ಯುಲು ಅವಕಾಶ ಮಾಡಿಕೊಟ್ಟರು.