ಟೂತ್‌ಪೇಸ್ಟ್‌ನಿಂದ ಹಲವು ಉಪಯೋಗ
Team Udayavani, Jun 23, 2018, 4:35 PM IST
ಮನೆ ಸ್ವಚ್ಛವಾಗಿರಬೇಕು, ಸುಂದರವಾಗಿರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತೇವೆ. ಅದಕ್ಕಾಗಿ ಮಾಡುವ ಪ್ರಯೋಗವೂ ಸಾಕಷ್ಟಿರುತ್ತದೆ. ಕೆಲವು ಬಾರಿ ಪ್ರಯೋಗ ಮಾಡಲು ಹೋಗಿ ಎಡವಿದ್ದೂ ಇದೆ. ಆದರೆ ಮನೆಯನ್ನು ಝಗಮಗಿಸುವಂತೆ ಮಾಡುವಲ್ಲಿ ಮನೆಯಲ್ಲೇ ಇರುವ ಕೆಲವೊಂದು ವಸ್ತುಗಳು ಉಪಯೋಗಕ್ಕೆ ಬರುವುದಿದೆ.
ಅವುಗಳಲ್ಲಿ ಮುಖ್ಯವಾಗಿ ಟೂತ್‌ಪೇಸ್ಟ್. ಟೂತ್‌ಪೇಸ್ಟ್‌ನಿಂದ ಹಲ್ಲನ್ನಷ್ಟೇ ಅಲ್ಲ ಮನೆಯನ್ನೂ ಸಚ್ಛಗೊಳಿಸಬಹುದು.
.ಈರುಳ್ಳಿ, ಬೆಳ್ಳುಳ್ಳಿಯ ವಾಸನೆ ಕೈಗಳಿಂದ ಸುಲಭವಾಗಿ ಹೋಗುವುದಿಲ್ಲ. ಆಗ ಕೈ ತೊಳೆಯಲು ಟೂತ್‌ಪೇಸ್ಟ್ ಬಳಸಿಕೊಳ್ಳಬಹುದು.
.ಕೇಶ ಶೃಂಗಾರಕ್ಕೆ ಬಳಸುವ ಸಾಧನಗಳಲ್ಲಿ ಜಿಡ್ಡಿನಂಶವಿದ್ದರೆ ಟೂತ್‌ಪೇಸ್ಟ್ ಬಳಸಿ ಅದನ್ನು ಸ್ವಚ್ಛಗೊಳಿಸಬಹುದು.
.ಸ್ವಲ್ಪ ತುಕ್ಕು ಹಿಡಿದಂತೆ ಕಾಣುವ ಕಬ್ಬಿಣದ ವಸ್ತುಗಳನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್ ಬಳಸಬಹುದು.
.ಗೋಡೆಗಳ ಮೇಲಿನ ಕಲೆ ನಿವಾರಿಸಲು ಟೂತ್‌ಪೇಸ್ಟ್ ಬಳಕೆ ಮಾಡಬಹುದಾಗಿದೆ.
. ಸಣ್ಣ ಮಕ್ಕಳ ಹಾಲಿನ ಬಾಟಲಿ, ಕುಡಿಯುವ ನೀರಿನ ಬಾಟಲಿಗಳನ್ನು ತೊಳೆಯಲು ಟೂತ್‌ಪೇಸ್ಟ್ ಬಳಸಬಹುದು. ಇದರಿಂದ ಬಾಟಲಿಯೊಳಗಿನ ವಾಸನೆಯೂ ಹೊರಟುಹೋಗುತ್ತದೆ ಮತ್ತು ಹೆಚ್ಚು ಸ್ವಚ್ಛವಾಗಿ ಕಾಣುತ್ತದೆ.
.ವಜ್ರ, ಬೆಳ್ಳಿ, ಚಿನ್ನಾಭರಣ ಸ್ವಚ್ಛತೆಗೆ ಟೂತ್‌ಪೇಸ್ಟ್ ಬಳಸಬಹುದು. ಇದರಿಂದ ಆಭರಣದ ಹೊಳಪು ಹೆಚ್ಚುತ್ತದೆ.
.ಲೆದರ್ ಶೂ, ನ್ಪೋರ್ಟ್ಸ್ ಶೂ ಗಳ ಮೇಲೆ ಕಲೆಗಳಾಗಿದ್ದರೆ ಅದರ ಮೇಲೆ ಪೇಸ್ಟ್ ಹಾಕಿ ಉಜ್ಜಿದರೆ ಕಲೆಗಳು ಹೋಗುತ್ತವೆ.
.ವಾಚ್‌ಗಳ ಚೈನ್‌ನಲ್ಲಿ ಕೊಳೆಯಾಗಿದ್ದರೆ ಹತ್ತಿ ಬಟ್ಟೆ ತುಂಡನ್ನು ನೀರಿಗೆ ಅದ್ದಿ ಅದಕ್ಕೆ ಪೇಸ್ಟ್ ಹಾಕಿ ಚೈನ್‌ನ ಮೇಲೆ ಉಜ್ಜಿ. ಅನಂತರ ಶುದ್ಧ ಬಟ್ಟೆಯಿಂದ ಒರೆಸಿದರೆ ಕೊಳೆ ಹೋಗುತ್ತದೆ.