ಕಲಾವಿದ ಈಗ ಯಶಸ್ವಿ ಕೃಷಿಕ
Team Udayavani, Jun 24, 2018, 6:00 AM IST
ಬೆಳ್ಮಣ್: ಈಗಿನ ಯುವಕರು ಕೃಷಿಯಿಂದ ವಿಮುಖ ವಾಗುತ್ತಿರುವ ದಿನಗಳಲ್ಲಿ ರಂಗ ಕಲಾವಿದರೂ ಆಗಿರುವರೊಬ್ಬರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಹಡಿಲು ಬಿದ್ದ ಸುಮಾರು 15 ಎಕರೆ ಹಸಿರು ಮಾಡಲು ಪಣ ತೊಟ್ಟಿದ್ದಾರೆ.
ಕೃಷಿ ಕುಟುಂಬ
ಕಿನ್ನಿಗೋಳಿ ವಿಜಯಾ ಕಲಾವಿದರ ನಾಟಕ ತಂಡದ ಪ್ರಬುದ್ಧ ಹಾಸ್ಯ ಕಲಾವಿದನಾಗಿ, ತಂಡದ ನಿರ್ವಾಹಕ ರಾಗಿ ಗುರುತಿಸಿಕೊಂಡಿರುವ ಸುಧಾಕರ ಸಾಲ್ಯಾನ್ ಸಂಕಲಕರಿಯ ಅವರದ್ದು ಮೂಲತಃ ಕೃಷಿ ಕುಟುಂಬ. ಜೀವ ವಿಮಾ ನಿಗಮದ ಪ್ರತಿನಿಧಿಯೂ ಆಗಿದ್ದಾರೆ. ಕಳೆದ ವರ್ಷದಿಂದ ಇವರು ಕೃಷಿಯಲ್ಲಿ ತೊಡಗಿಕೊಂಡಿದ್ದು, ಭತ್ತ ಬೆಳೆಯುತ್ತಿದ್ದಾರೆ.
ಭರ್ಜರಿ ಆದಾಯ
ಸುಧಾಕರ್ ಅವರು ಹಡಿಲು ಬಿದ್ದ ಕೃಷಿ ಭೂಮಿಗಳನ್ನು ಸಿದ್ಧಗೊಳಿಸಿ, ಸುಡು ಮಣ್ಣು ತಯಾರಿಸಿ ಮಳೆ ಬಂದಾಗ ಗದ್ದೆ ಹದಗೊಳಿಸಿ ನಾಟಿ ಕಾರ್ಯ ನಡೆಸಿದ್ದಾರೆ. ಇದಕ್ಕಾಗಿ ಶಾಂತಿಪಲ್ಕೆಯ ಮಹಿಳಾ ಕಾರ್ಮಿಕರ ನೆರವು ಪಡೆದಿ ದ್ದಾರೆ. ಕಳೆದ ವರ್ಷವೂ ಸೀಸನ್‌ಗೆ ಅನುಗುಣವಾಗಿ ಕೃಷಿ ನಡೆಸಿ ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ. ಇವರ ಕಾರ್ಯಕ್ಕೆ ಹೆತ್ತವರಾದ ವಾಸು ಸಾಲ್ಯಾನ್-ಜಾನಕಿ ದಂಪತಿ, ಮನೆಯವರು ಕೈ ಜೋಡಿಸಿದ್ದಾರೆ.
ಬಹುಮುಖ ಪ್ರತಿಭೆ
ಕಲಾವಿದರಾದ ಸುಧಾಕರ ಬಹುಮುಖ ಪ್ರತಿಭೆ. ಐಕಳ ಗ್ರಾ.ಪಂ. ಸದಸ್ಯರಾಗಿರುವ ಅವರು ಈ ಹಿಂದೆ ಸಂಕಲಕರಿಯದಲ್ಲಿ ಶಾಂಭವಿ ನದಿ ಬತ್ತಿ ಹೋಗುತ್ತಿರುವ ಕಾಲಕ್ಕೆ ಅಣೆಕಟ್ಟು ಕಟ್ಟಿ ಯಶಸ್ಸು ಕಂಡಿದ್ದರೆ. ಇದಕ್ಕಾಗಿ ಆಧುನಿಕ ಭಗೀರಥ ಎಂಬ ಗೌರವವನ್ನೂ ಪಡೆದಿದ್ದರು.
ಕೃಷಿ ಪರಂಪರೆ
ನಾವು ಕೃಷಿ ಪರಂಪರೆಯಿಂದಲೇ ಬಂದವರು. ಮುಂದಿನ ಪೀಳಿಗೆಗೆ ಕೃಷಿಯ ಮಹತ್ವ ತಿಳಿಸಬೇಕಾಗಿದೆ. ಕೃಷಿಯಿಂದಲೇ ಬದುಕು ಸಾಗಿಸುವ ಕೃಷಿಕರಿಗೆ ಸರಕಾರ ವೃದ್ಧಾಪ್ಯ ಕಾಲದಲ್ಲಿ ವಿಶೇಷ ಪಿಂಚಣಿ ನೀಡುವ ಬಗ್ಗೆ ಯೋಚಿಸಬೇಕಾಗಿದೆ.
– ಸುಧಾಕರ ಸಾಲ್ಯಾನ್ , ಸಾಧಕ ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.