ವಿಶ್ವದ ಅತಿ ಸಣ್ಣ ಕಂಪ್ಯೂಟರ್
Team Udayavani, Jun 24, 2018, 6:00 AM IST
ವಾಷಿಂಗ್ಟನ್: ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧಕರು ವಿಶ್ವದ ಅತಿ ಸಣ್ಣ ಕಂಪ್ಯೂಟರನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಕಂಪ್ಯೂಟರ್ ಕೇವಲ 0.3 ಮಿ.ಮೀ. ಅಗಲ ಹೊಂದಿದೆ. ಎರಡು ಭತ್ತ ಕ್ಕಿಂತಲೂ ಸಣ್ಣದಾಗಿರುವ ಈ ಕಂಪ್ಯೂಟರ್ ಅನ್ನು ಒಮ್ಮೆ ಸ್ವಿಚ್ ಆಫ್ ಮಾಡಿದರೆ ಎಲ್ಲ ದತ್ತಾಂಶವನ್ನೂ ಕಳೆದುಕೊಳ್ಳುತ್ತದೆ. ಇದರಲ್ಲಿ ಪ್ರೋಗ್ರಾಮ್ ಹಾಗೂ ಡೇಟಾವನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲ. ಅಲ್ಲದೆ ಪವರ್ ಬ್ಯಾಕ್ ಅಪ್ ಕೂಡ ಇಲ್ಲ.
ಆದರೆ ಇದನ್ನು ಕಂಪ್ಯೂಟರ್ ಎಂದು ಕರೆಯಬೇಕೇ ಅಥವಾ ಬೇಡವೇ ಎಂದು ಗೊತ್ತಿಲ್ಲ. ಕಂಪ್ಯೂಟರ್ ಎಂದು ಕರೆಯ ಲ್ಪಡಲು ಕನಿಷ್ಠ ಸೌಲಭ್ಯ ಯಾವುದಿರ ಬೇಕು ಎಂಬ ಬಗ್ಗೆ ಗೊಂದಲವಿದೆ ಎಂದು ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯ ರಿಂಗ್ ಪ್ರೊಫೆಸರ್ ಡೇವಿಡ್ ಬ್ಲಾವ್ ಹೇಳಿದ್ದಾರೆ. ರ್ಯಾಮ್ ಹಾಗೂ ಫೋಟೋ ವೋಲ್ಟಾಯಿಕ್ಸ್ ಜೊತೆಗೆ, ಮಿಶಿಗನ್‌ನ ಪರಿಣಿತರು ಅಭಿವೃದ್ಧಿಪಡಿಸಿದ ಮಿಶಿಗನ್ ಮೈಕ್ರೋ ಮೋಟ್ ಹೊಂದಿದೆ. ಸಾಮಾನ್ಯ ಆ್ಯಂಟೆನಾ ಅಳವಡಿಸಲು ಇದರಲ್ಲಿ ಸ್ಥಳಾವಕಾಶ ಇಲ್ಲದ್ದರಿಂದ, ಬೆಳಕನ್ನೇ ಬಳಸಿ ಇದು ಡೇಟಾ ಸಂವಹನ ನಡೆಸುತ್ತದೆ. ವಿದ್ಯುತ್ ಹಾಗೂ ಪ್ರೋಗ್ರಾಮಿಂಗ್‌ಗೆ ಬೇಸ್ ಸ್ಟೇಷನ್‌ನಿಂದ ನೆರವು ಒದಗಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.