ಬಿಜೆಪಿಯದ್ದು ವಿಕಾಸ, ಕಾಂಗ್ರೆಸ್‌ನದ್ದು ಹತಾಶೆ
Team Udayavani, Jun 24, 2018, 6:00 AM IST
ಭೋಪಾಲ್: “ಬಿಜೆಪಿ ಸರಕಾರವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದರೆ, ಹತಾಶೆಯಲ್ಲಿ ಮುಳುಗಿರುವ ಕಾಂಗ್ರೆಸ್ ಸುಳ್ಳು ಹೇಳುತ್ತಾ, ಗೊಂದಲ ಸೃಷ್ಟಿಸುತ್ತಾ ಸಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಶನಿವಾರ ಮಧ್ಯಪ್ರದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಭಾರೀ ವಾಗ್ಧಾಳಿ ನಡೆಸಿದ್ದಾರೆ. ಜನರು ಬಿಜೆಪಿಯನ್ನು, ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನಂಬುತ್ತಾರೆ. ಅದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಆದರೆ, ಕಾಂಗ್ರೆಸ್ ಸುಖಾಸುಮ್ಮನೆ ಸುಳ್ಳುಗಳು, ಗೊಂದಲಗಳು ಹಾಗೂ ನಕಾರಾತ್ಮಕತೆಯನ್ನು ಪಸರಿಸುತ್ತಿದೆ. ಅವರಿಗೆ ಸತ್ಯಾಂಶ ಗೊತ್ತಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಧ್ಯಪ್ರದೇಶವು ರೋಗಗ್ರಸ್ತ ರಾಜ್ಯವೆಂಬ ಹಣೆಪಟ್ಟಿ ಹೊಂದಿತ್ತು. ಈಗ ಬಿಜೆಪಿ ಸರಕಾರವು ರಾಜ್ಯವನ್ನು ಈ ಹಣೆಪಟ್ಟಿಯಿಂದ ಮುಕ್ತವಾಗಿಸಿದೆ ಎಂದು ಮೋದಿ ಹೇಳಿದ್ದಾರೆ.
ಮುಖರ್ಜಿಗೆ ನಮನ: ಇದೇ ವೇಳೆ, ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರಿಗೆ ನಮನ ಸಲ್ಲಿಸಿದ ಮೋದಿ, ಅವರ ಕೊಡುಗೆಗಳನ್ನು ಸ್ಮರಿಸಿ ಕೊಂಡಾಡಿದ್ದಾರೆ. ಜವಾಹರ್‌ಲಾಲ್ ನೆಹರೂ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ, ದೇಶದ ಚೊಚ್ಚಲ ಕೈಗಾರಿಕಾ ನೀತಿ ಜಾರಿಗೆ ತಂದರು. ಸರಕಾರವು ಜನರ ಕನಸನ್ನು ಈಡೇರಿಸಬೇಕು ಮತ್ತು ಬಡವರ ಜೀವನಮಟ್ಟ ಸುಧಾರಿಸಬೇಕು ಎಂದು ಅವರು ನಂಬಿದ್ದರು. ಅವರ ಆಲೋಚನೆಗಳು, ಕೆಲಸಗಳು ಇಂದಿಗೂ ನಮಗೆಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ. ಮುಖರ್ಜಿ ಅವರನ್ನು ಸ್ಮರಿಸುತ್ತಲೇ, ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ, ಒಂದು ಕುಟುಂಬವನ್ನು ವೈಭವೀಕರಿಸುವ ಸಲುವಾಗಿ, ದೇಶ ನಿರ್ಮಾಣಕ್ಕೆ ಶ್ರಮಿಸಿದ ಅನೇಕ ನಾಯಕರ ಕೊಡುಗೆಗಳನ್ನು ಅಲಕ್ಷಿಸುವ ಯತ್ನ ನಡೆಯುತ್ತಿದೆ. ಗರಿಷ್ಠ ವರ್ಷಗಳ ಕಾಲ ದೇಶವನ್ನಾಳಿರುವ ಪಕ್ಷವು, ತನ್ನ ಜನರು ಹಾಗೂ ಅವರ ಪರಿಶ್ರಮದ ಮೇಲೆ ವಿಶ್ವಾಸವಿಡಲೇ ಇಲ್ಲ ಎಂದೂ ದೂರಿದ್ದಾರೆ.
ಹಲವು ಯೋಜನೆಗಳಿಗೆ ಮೋದಿ ಚಾಲನೆ
ಪ್ರಧಾನಿ ಮೋದಿ ಅವರು ರಾಜಗಡದಲ್ಲಿ ಮೋಹನ್‌ಪುರ ನೀರಾವರಿ ಯೋಜನೆ, ಭೋಪಾಲ್‌ನಲ್ಲಿ ಸೂತ್ರ ಸೇವಾ ಎಂಬ ಹೆಸರಿನ ನಗರ ಸಾರಿಗೆ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ ನೀಡಿದ್ದಾರೆ. 3,866 ಕೋಟಿ ರೂ. ವೆಚ್ಚದ ಮೋಹನ್‌ಪುರ ನೀರಾವರಿ ಯೋಜನೆ ಯಿಂದ, 400 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದ್ದು, ಇದರ ನೀರು 700ಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಲಿದೆ. 1.25 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲಿದೆ. ಇದೇ ವೇಳೆ, ಪ್ರಧಾನಿ ಮೋದಿ 2018ರ ಸ್ವತ್ಛ ಸರ್ವೇಕ್ಷಣದ ವಿಜೇತರಿಗೆ ಸನ್ಮಾನವನ್ನೂ ಮಾಡಿದ್ದಾರೆ. ಇಂದೋರ್, ಭೋಪಾಲ್, ಜಬಲ್ಪುರ, ಗ್ವಾಲಿಯರ್, ಉಜ್ಜೆ„ನ್‌ನಲ್ಲಿ 278 ಕೋಟಿ ರೂ. ವೆಚ್ಚದ 23 ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ನಡುವೆ, ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾದ 1 ಲಕ್ಷಕ್ಕೂ ಹೆಚ್ಚು ಮನೆಗಳ ಗೃಹ ಪ್ರವೇಶವೂ ರಾಜ್ಯಾದ್ಯಂತ ಶನಿವಾರ ಏಕಕಾಲಕ್ಕೆ ನೆರವೇರಿತು. ಪ್ರಸಕ್ತ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿಯೂ ಪ್ರಧಾನಿ ಭೇಟಿ ಮಹತ್ವ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.