ಹಾಗಲ, ಅಲಸು- ಲಾಭದ ಹುಲುಸು

Team Udayavani, Jun 25, 2018, 11:49 AM IST

hulusu.jpg

ಕೃಷಿಯನ್ನು ನಂಬಿದವನು ಖುಷಿಯಾಗಿ ಇರಬಲ್ಲ ಎಂಬ ಮಾತನ್ನು ರೈತ ಲೋಕೇಶ್‌ ನಿಜ ಮಾಡಿದ್ದಾರೆ. ಹಾಗಲಕಾಯಿ ಮತ್ತು ಅಲಸಂದೆ ಬೆಳೆಯಿಂದ ಅವರಿಗೆ ನಿರೀಕ್ಷೆ ಮೀರಿ ಲಾಭ ಸಿಕ್ಕಿದೆ.

ತರಕಾರಿ ಮಾರುಕಟ್ಟೆಯಲ್ಲಿ  ಬಗೆ ಬಗೆಯ ತರಕಾರಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಉತ್ತಮ ದರ ಯಾವುದಕ್ಕೆ ಸಿಗುತ್ತದೆ ಎಂದು ಮುಂದಾಲೋಚನೆ ಮಾಡಿದರೆ ಖಂಡಿತ ಲಾಭ ಗಳಿಸಲು ಸಾಧ್ಯ ಅನ್ನೋದನ್ನು ಶಿವಮೊಗ್ಗ ತಾಲೂಕು ವ್ಯಾಪ್ತಿಯ ಬೀರನಕೆರೆಯ ರೈತ ಲೋಕೇಶ್‌ ಸಾಧಿಸಿ ತೋರಿಸಿದ್ದಾರೆ.

ಕಳೆದ ಬೇಸಿಗೆಯಲ್ಲಿ ಸುಮಾರು 1.5 ಎಕರೆ ಜಮೀನಿನಲ್ಲಿ  ಅಲಸಂದೆ ಮತ್ತು ಹಾಗಲಕಾಯಿ ಹಾಕಿದ್ದರು. ಇವತ್ತು ಈ ಎರಡೂ ತರಕಾರಿಯಿಂದ ಕೈ ತುಂಬ ಲಾಭ ಬರುತ್ತಿದೆ.  ಬೀಜ ಹಾಕಲು ಅನುಕೂಲವಾಗುವಂತೆ ಹೊಲದ ಉದ್ದಕ್ಕೂ ಸುಮಾರು 300ಅಡಿ ಉದ್ದದ ಪಟ್ಟೆ ಸಾಲು ನಿರ್ಮಿಸಿದ್ದಾರೆ. ಒಟ್ಟು 120 ಪಟ್ಟೆ ಸಾಲು ನಿರ್ಮಿಸಿಕೊಂಡು ಗಿಡದಿಂದ ಗಿಡಕ್ಕೆ 1.5 ಅಡಿ ಮತ್ತು ಸಾಲಿನಿಂದ ಸಾಲಿಗೆ 3.5 ಅಡಿ ಅಂತರ ಕೊಟ್ಟಿದ್ದಾರೆ.  ಪ್ರತಿ ಗುಣಿಯಲ್ಲಿ 2 ಬೀಜದಂತೆ ಬೀಜ ಬಿತ್ತನೆ ಮಾಡಿದ್ದರು. ಹೀಗೆ ಬಿತ್ತನೆ ಮಾಡುವಾಗ ಸರಾಸರಿ 5 ಗ್ರಾಂ.ನಷ್ಟು ಕಾಂಪ್ಲೆಕ್ಸ್‌ ಗೊಬ್ಬರ ನೀಡಿದ್ದರು. ಪ್ರತಿ 300 ಅಡಿಯಲ್ಲಿ 150 ಗಿಡ ಬೆಳೆಸಿದ್ದಾರೆ.  ಇಂತಹ 60 ಸಾಲುಗಳಲ್ಲಿ ಒಟ್ಟು ಸುಮಾರು 9 ಸಾವಿರ ಅಲಸಂದೆ ಗಿಡವಿದೆ. ಬೀಜ ಮೊಳಕೆಯೊಡೆದು ತಲಾ ಮೂರು ಎಲೆ ಕಾಣಿಸಿಕೊಳ್ಳುತ್ತಿದ್ದಂತೆ 20:20ಕಾಂಪ್ಲೆಕ್ಸ್‌ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ಕೊಳವೆ ಬಾವಿಗೆ ಅಳವಡಿಸಿದ ಪಂಪ್‌ ಮೂಲಕ ಪ್ರತಿ 2 ದಿನಕ್ಕೊಮ್ಮೆ  ಅಲಸಂದೆ ಗಿಡದ ಪಟ್ಟೆ ಸಾಲಿಗೆ ನೀರು ಹಾಯಿಸುತ್ತಾರೆ. ಗಿಡ ಬೆಳೆದು ಬಳ್ಳಿಯಾಗುತ್ತಿದ್ದಂತೆ ಕೋಲು ನೆಟ್ಟು ತಂತಿ ಬಿಗಿದು ಹಬ್ಬುವಂತೆ ನೋಡಿಕೊಂಡಿದ್ದಾರೆ. ನಂತರ 20 ದಿನಕ್ಕೊಮ್ಮೆ ಪ್ರತಿ ಗಿಡಕ್ಕೆ ಸರಾಸರಿ 5 ಗ್ರಾಂ.ನಷ್ಟು ಗೊಬ್ಬರ ಸಿಗುವಂತೆ 20:20 ಕಾಂಪ್ಲೆಕ್ಸ್‌ ಗೊಬ್ಬರ ನೀಡಿದ್ದರು .ಒಟ್ಟು ಮೂರು ಸಲ ಗೊಬ್ಬರ ನೀಡಿ ಗಿಡ ಹುಲುಸಾಗಿ ಬೆಳೆಯುವಂತೆ ನೋಡಿಕೊಂಡರು. ಗಿಡಗಳಿಗೆ 40 ದಿನವಾಗುತ್ತಿದ್ದಂತೆ ಹೂವಾಗಿ ಮಿಡಿ ಆರಂಭವಾಯಿತು.  60 ನೇ ದಿನಕ್ಕೆ ಕಟಾವಿಗೆ ಸಿದ್ಧಗೊಂಡಿತು.

ಲಾಭ ಹೇಗೆ ?
ಲೋಕೇಶ್‌ ಈ ಅಲಸಂದೆ ಬೆಳೆಯಲು ರೂ.50 ಸಾವಿರ ವೆಚ್ಚ ಮಾಡಿದ್ದಾರೆ. ಒಟ್ಟು 9 ಸಾವಿರ  ಅಲಸಂದೆ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಮಾರ್ಚ್‌ ಮೊದಲ ವಾರದಿಂದ ಏಪ್ರಿಲ್‌ 20 ರ ವರೆಗೆ, ಅಂದರೆ ಒಂದೂವರೆ ತಿಂಗಳು ಫ‌ಸಲು ಮಾರಾಟ ಮಾಡಿದ್ದಾರೆ. ಪ್ರತಿ ಗಿಡದಿಂದ ಒಟ್ಟು ಸರಾಸರಿ 3 ಕಿ.ಗ್ರಾಂ.  ಅಲಸಂದೆ ದೊರೆತಿದೆ. ವಾರಕ್ಕೆ 2 ದಿನ ಫ‌ಸಲು ಕಿತ್ತಿದ್ದರು. ತರಕಾರಿ ವ್ಯಾಪಾರಿಗಳು ಹೊಲಕ್ಕೇ ಬಂದು ಖರೀದಿಸಿ ಒಯ್ಯುತ್ತಿದ್ದಾರೆ. ಕಿ.ಗ್ರಾಂ.ಒಂದಕ್ಕೆ ರೂ.4 ರಂತೆ ಮಾರಾಟವಾಗಿದೆ.  ಈ ವರ್ಷ 9 ಸಾವಿರ ಬಳ್ಳಿಯಿಂದ ಒಟ್ಟು 270 ಕ್ವಿಂಟಾಲ್‌ ಅಲಸಂದಿ ಫ‌ಸಲು ದೊರೆತಿದೆ. ಕ್ವಿಂಟಾಲ್‌ ಗೆ ರೂ.400 ರಂತೆ ಸುಮಾರು ರೂ.1 ಲಕ್ಷ ಆದಾಯ ಬಂದಿರುವುದಾಗಿ ಲೆಕ್ಕಸಿಕ್ಕಿದೆ. ಖರ್ಚನ್ನೆಲ್ಲ ಕಳೆದರೆ ಅಲಸಂದೆ ಕೃಷಿಯಿಂದ ಇವರಿಗೆ 50 ಸಾವಿರ ಲಾಭ ದೊರೆತಿದೆ.  ಒಟ್ಟು ಸುಮಾರು ಒಂದು ಸಾವಿರ ಹಾಗಲಬಳ್ಳಿ ಹಬ್ಬಿಸಿದ್ದರು. ಪ್ರತಿ ಗಿಡದಿಂದ ಸರಾಸರಿ 3 ಕಿ.ಗ್ರಾಂ. ಫ‌ಸಲು ದೊರೆತಿದೆ.ಕಿ.ಗ್ರಾಂ.ಒಂದಕ್ಕೆ ರೂ.10 ರಂತೆ ಮೂರು ತಿಂಗಳ ಅವಧಿಯಲ್ಲಿ ಒಟ್ಟು ಸುಮಾರು 3,000 ಕಿ.ಗ್ರಾಂ. ಹಾಗಲ ಮಾರಿದ್ದರಿಂದ 30 ಸಾವಿರ ಆದಾಯ ದೊರೆತಿದೆ.  
ಹೀಗೆ ಲೋಕೇಶ್‌ ಹಾಗಲ, ಅಲಸಂದೆಯಿಂದಲೇ ಕೃಷಿ ಬದುಕನ್ನು ನಿರಾಳವಾಗಿಸಿಕೊಂಡಿದ್ದಾರೆ.

ಮಾಹಿತಿಗೆ-7353004490.

– ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

PKL 11: defeat for bengaluru bulls against Patna pirates

PKL 11: ಬುಲ್ಸ್‌ ಗೆ 10ನೇ ಸೋಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯKarnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Gangolli

Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.