ಖಾಲಿ ಜಾಗ ತುಂಬಿರಿ… ಗೋಡೆಯಲ್ಲಿ ಗೂಡುಗಳು


Team Udayavani, Jun 25, 2018, 12:25 PM IST

kali-jaaga.jpg

ಒಂದು ಸಲ ಗೋಡೆ ಕಟ್ಟಿದ ಮೇಲೆ ನಂತರ ಕಬೋರ್ಡುಗಳನ್ನು ಕೊರೆಯುವುದು ಬಹಳ ಕಷ್ಟ. ಗೋಡೆ ಕಟ್ಟುವಾಗಲೇ ಕಬೋರ್ಡಿನ ರೀತಿ ಮಾಡುವುದು ಬಹಳ ಸುಲಭ.  ಗೋಡೆಯಲ್ಲಿ ಬರುವ ಯಾವುದೇ ತೆರೆದ ಸ್ಥಳದ ಮೇಲೆ ಲಿಂಟಲ್‌ ಹಾಕುವುದು ಅತ್ಯಗತ್ಯ. ಆರು ಇಂಚು ದಪ್ಪದ ಗೋಡೆಗಳಲ್ಲಿ ಎರಡೂ ಕಡೆ ಕಡೇಪಕ್ಷ ಒಂದೆರಡು ಬ್ಲಾಕ್‌ ಅಗಲ ಬಿಟ್ಟು, ನಾಲ್ಕರಿಂದ ಆರು ಅಡಿಗಳ ಅಗಲದ ಬಿಲ್ಟ್ ಇನ್‌ ಕಬೋರ್ಡ್‌ ಅನ್ನು ಮಾಡಿಕೊಳ್ಳಬಹುದು.

ಮನೆ ಕಟ್ಟುವಾಗ ಇಂಚಿಂಚೂ ಲೆಕ್ಕ ಮಾಡಬೇಕಾಗುತ್ತದೆ. ಜಾಗ ವೇಸ್ಟ್‌ ಮಾಡುವಂತಿಲ್ಲ. ಸರಿಯಾಗಿ ಬಳಸೋಣ ಎಂದರೆ ಖರ್ಚು ಹೆಚ್ಚು. ಹಾಗಂತ ಸುಮ್ಮನೆ ಬಿಡುವಂತಿಲ್ಲ. ಖಾಲಿ ಜಾಗ ತುಂಬಿರಿ ಅನ್ನೋ ರೀತಿ ಸ್ಥಳವನ್ನು ಉಪಯೋಗಿಸಿ ಕೊಂಡಷ್ಟೂ ನಮಗೆ ಹೆಚ್ಚು ಲಾಭದಾಯಕವೇ. ಮನೆ ಕಟ್ಟಿದ ಮೇಲೆ ಒಮ್ಮೆ ಸಾಮಾನು-ಸರಂಜಾಮುಗಳನ್ನು ಜೋಡಿಸಲು ಮುಂದಾದಾಗಲೇ ಗೊತ್ತುವುದು. ಈ ಕೋಣೆಗಳು ಎಷ್ಟೇ ದೊಡ್ಡದಿದ್ದರೂ ಜಾಗ ಸಾಲದು ಅನ್ನೋ ಸತ್ಯ. ನಿವೇಶನ ಕೊಂಡಾಗಲಂತೂ- ಓಹೋ, ಸಾಕಷ್ಟು ದೊಡ್ಡದಿದೆ. ವಿಶಾಲವಾದ ಮನೆ ಕಟ್ಟಿಕೊಳ್ಳಬಹುದು. ಇನ್ನೇನೂ ಚಿಂತೆ ಇಲ್ಲ ಅಂತ ಅನಿಸಿಬಿಡುತ್ತದೆ.ಆದರೆ,  ಮನೆ ಕಟ್ಟಲು ಇಳಿದಾಗಲೇ ಸೈಟು ಎಷ್ಟು ಸಣ್ಣದು ಎಂದು ತಿಳಿಯುವುದು. ಹೀಗಾಗಲು ಮುಖ್ಯ ಕಾರಣ, ನಮ್ಮ ಮನೆಗಳಲ್ಲಿ ಶೇಕಡವಾರು ಲೆಕ್ಕದಲ್ಲಿ ಶೇ.20ರಷ್ಟು ಸ್ಥಳವನ್ನು ಗೋಡೆಗಳೇ ಆಕ್ರಮಿಸಿಕೊಂಡು, ನಮಗೆ ಕಡೆಗೆ ಸಿಗುವುದು ಕೇವಲ ಶೇ.80ರಷ್ಟು ಸ್ಥಳ ಮಾತ್ರ! ಆದುದರಿಂದ ನಾವು ಗೋಡೆಗಳಿಂದ ಒಂದಷ್ಟು ಸ್ಥಳವನ್ನು ಉಪಯುಕ್ತವಾಗಿ ಒತ್ತರಿಸಿಕೊಂಡರೆ, ಸಾಕಷ್ಟು ಸಾಮಾನುಗಳನ್ನು ಇಟ್ಟುಕೊಳ್ಳಲು ಅನುಕೂಲವಾಗುತ್ತದೆ.  

ಬಕಾಸುರ ಗೋಡೆಗಳು
ಹತ್ತು ಅಡಿಗೆ ಹತ್ತು ಅಡಿ ಕೋಣೆಯಲ್ಲಿ ನಾಲ್ಕು ಕಡೆಯೂ ಆರು ಇಂಚಿನ ಗೋಡೆ ಇದ್ದರೂ ಹತ್ತು ಅಡಿಗೆ ಎರಡು ಅಡಿಯಷ್ಟು ಸ್ಥಳವನ್ನು ಅಂದರೆ ಶೇ.20ರಷ್ಟು ಸ್ಥಳವನ್ನು ಕಬಳಿಸುತ್ತವೆ. ಲೆಕ್ಕ ಮಾಡುವುದು ಕಷ್ಟ.  ಆದರೆ, ಹೀಗೆ ಯೋಚಿಸಿ – ನಾಲ್ಕೂ ಗೋಡೆಯನ್ನು ಒಂದೇ ಕಡೆ ಜೋಡಿಸಿ ನೋಡಿ, ಅರ್ಧ ಅಡಿ ದಪ್ಪದ ನಾಲ್ಕು ಗೋಡೆಗಳು ಸೇರಿದರೆ ಎರಡು ಅಡಿ ಆಗುತ್ತದೆ ಹಾಗೂ ಇದರ ಉದ್ದ ಹತ್ತು ಅಡಿ ಇರುತ್ತದೆ. ಇನ್ನು 9 ಇಂಚಿನ ಗೋಡೆಗಳು ಇದ್ದರಂತೂ ಶೇ.30ರಷ್ಟು ಸ್ಥಳ ಆಕ್ರಮಿಸಿಕೊಂಡು ಬಿಡುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಇಷ್ಟೊಂದು ಜಾಗವನ್ನು ನಾವು ಕಳೆದುಕೊಳ್ಳಲೇ ಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಲಂ ಬೀಮ್‌ ಭಾರ ಹೊರುವ ವ್ಯವಸ್ಥೆ ಹೆಚ್ಚು ಬಳಕೆಯಲ್ಲಿ ಇರುವುದರಿಂದ ಗೋಡೆಗಳು ಹೆಚ್ಚು ಭಾರವನ್ನು ಹೊರುವುದಿಲ್ಲ. ಜೊತೆಗೆ ಇಂಥ ಗೋಡೆಗಳಲ್ಲಿ ಗೂಡುಗಳನ್ನು ಮಾಡಿದರೆ, ಅಕ್ಕ ಪಕ್ಕದಲ್ಲಿ ಉಳಿಯುವ ಗೋಡೆಗಳೇ ಸಾಕಷ್ಟು ಭಾರ ಹೊರುವ ಸಾಮರ್ಥ್ಯ ಹೊಂದಿರುವುದರಿಂದ, ತೊಂದರೆ ಏನೂ ಆಗುವುದಿಲ್ಲ.

ಆದುದರಿಂದ, ಗೋಡೆ ಎಂಬ ಬಕಾಸುರರು ನಮ್ಮ ಮನೆಯ ಸ್ಥಳವನ್ನು ಕಬಳಿಸುತ್ತಿರುವಂತೆಯೇ ನಾವೂ ಕೂಡ ಈ ಗೋಡೆಗಳಿಗೆ ಕನ್ನ ಹಾಕಿ ನಮಗೆ ಬೇಕಿರುವ ಒಂದಷ್ಟು ಸ್ಥಳವನ್ನು ವಾಪಸ್ಸು ಪಡೆಯಬಹುದು. ಅದಕ್ಕೆಲ್ಲ ಮನೆ ಕಟ್ಟುವ ಮೊದಲೇ ಪ್ಲಾನ್‌ ಮಾಡಬೇಕಷ್ಟೆ.

ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳಲ್ಲಿ ಗೂಡು
ಪುಸ್ತಕದ ಕಪಾಟು ಕೋಣೆಯಲ್ಲಿ ಇಟ್ಟು ನೋಡಿ,  ಅದೇ ಸುಮಾರು ಒಂದು ಅಡಿಯಷ್ಟು ಉದ್ದದ ಜಾಗವು ನಿಮ್ಮದಾಗುತ್ತದೆ. ಪುಸ್ತಕಗಳು ಸಾಮಾನ್ಯವಾಗಿ ಒಂಬತ್ತು ಇಂಚು ಕೂಡ ಅಗಲ ಇರುವುದಿಲ್ಲ. ಆದರೆ ಕಪಾಟು ಬೀಳ ಬಾರದು ಎಂದು ಅದನ್ನು ಮಾಡುವವರು ಸ್ವಲ್ಪ ಅಗಲವಾಗೇ ಮಾಡಿರುತ್ತಾರೆ. ಇದರಿಂದಾಗಿ ನಮಗೆ ಹೆಚ್ಚುವರಿ ಪುಸ್ತಕ ಇಡಲು ಜಾಗ ಸಿಗದಿದ್ದರೂ ಸ್ಥಳ ವ್ಯಯವಾಗಿರುತ್ತದೆ. ಜೊತೆಗೆ ಒಮ್ಮೆ ಕೋಣೆಯ ಒಂದು ಬದಿಗೆ ಕಪಾಟು ಬಂದರೆ, ಅದರ ಅಕ್ಕ ಪಕ್ಕದ ಸ್ಥಳವೂ ಯಾವ ಉಪಯೋಗಕ್ಕೂ ಬರುವುದಿಲ್ಲ.  6 ಇಂಚಿನ ದಪ್ಪದ ಗೋಡೆಯ ಹಿಂಬದಿಗೆ ಎರಡು ಇಲ್ಲವೇ ಮೂರು ಇಂಚು ದಪ್ಪದ ಮೆಶ್‌ ಗೋಡೆ ಹಾಕಿದರೆ, ನಮಗೆ ನಿರಾಯಾಸವಾಗಿ ಐದು, ಆರು ಇಂಚು ಅಗಲದ ಗೂಡು ಸಿಗುತ್ತದೆ. ಏಕೆಂದರೆ, ಆರು ಇಂಚು ದಪ್ಪದ ಕಾಂಕ್ರಿಟ್‌ ಬ್ಲಾಕ್‌ ಗೋಡೆ ಪ್ಲಾಸ್ಟರ್‌ ಮಾಡಿದ  ನಂತರ ಸುಮಾರು ಎಂಟು ಇಂಚು ದಪ್ಪ ಆಗಿಬಿಟ್ಟಿರುತ್ತದೆ.  ಗೋಡೆಯಿಂದ ಒಂದೆರಡು ಇಂಚು ಮುಂದೆ ಬರುವಂತೆ ಮರದ ಫ್ರೆàಮ್‌ ಅಳವಡಿಸಿ ಶೆಲ್ಫ್ ಗಳನ್ನು ಸಿಗಿಸಿದರೆ, ನೂರಾರು ಪುಸ್ತಕಗಳನ್ನು ನಿರಾಯಾಸವಾಗಿ ಜೋಡಿಸಿಡಬಹುದು.  ಜೊತೆಗೆ ಇವು ಸುಂದರವಾಗಿ ಕಾಣುತ್ತಲೇ ಧೂಳಿನಿಂದ ರಕ್ಷಣೆ ಪಡೆಯಲು ಗಾಜಿನ ಬಾಗಿಲನ್ನೂ ಕೂಡ ಅಳವಡಿಸಿಕೊಳ್ಳಬಹುದು.

ಸಿಡಿ, ಡಿವಿಡಿ, ಫೋಟೋ ಆಲ್ಬಮ್‌ ಮುಂತಾ¨ ಅಗಲ ಕಡಿಮೆ ಇರುವ ವಸ್ತುಗಳನ್ನೂ ಕೂಡ ನಿರಾಯಾಸವಾಗಿಯೂ, ಕಲಾತ್ಮಕವಾಗಿಯೂ ಸಂರಕ್ಷಿಸಿ ಇಡಬಹುದು. ಜಪಾನ್‌ನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಕೂಡ ವೈರಸ್‌ ಬಂದು ಸ್ಟೋರೇಜ್‌ ಮೀಡಿಯಾಗಳಲ್ಲಿ ಶೇಖರಿಸಿಟ್ಟಿರುವ ಡಾಟ ಕಳೆದು ಹೋಗಬಾರದು ಎಂದು ಒಮ್ಮೆ ಬರೆದ ನಂತರ ಮತ್ತೆ ಬರೆಯಲಾಗದಂಥ ಡಿವಿಡಿ ಗಳಲ್ಲಿ ಬ್ಯಾಕ್‌ಅಪ್‌ ಮಾಡುವ ಪರಿಪಾಠವಿದೆ. ಆದುದರಿಂದ ನಿಮ್ಮಲ್ಲಿರುವ ಹಳೆ ಡಿವಿಡಿ ಹಾಗೂ ಮುಂದೆ ಶೇಖರಿಸಿ ಇಡಬಹುದಾದಂತಹ ವಸ್ತುಗಳನ್ನು ಸಹ ಕಡಿಮೆ ಅಗಲ ಇರುವ ಕಪಾಟುಗಳಲ್ಲಿ ಶೇಖರಿಸಿ ಇಡಬಹುದು.

 ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಶೋಕೇಸ್‌, ಸೈಡ್‌ ಬೋರ್‌x ಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ಸಣ್ಣ ಪುಟ್ಟ ಶೋಕೇಸ್‌ಗಳನ್ನು ಮಾಡಿಕೊಳ್ಳಲಾಗುತ್ತದೆ. ಆದರೆ ಇವೂ ಕೂಡ ಕಡೇಪಕ್ಷ ಒಂದು ಅಡಿಯಷ್ಟು ಅಗಲದ ಸ್ಥಳವನ್ನು ಕಬಳಿಸುತ್ತವೆ. ಈ ಜಾಗವನ್ನು ಉಳಿಸಲು ದಾರಿ ಇದೆ.

ಇವಕ್ಕೂ ಅಂತದೇ ಗೂಡುಗಳನ್ನು ಮಾಡಿದರೆ, ಒಂದು ಅಡಿಗೆ ಬದಲು ಕೆಲವೇ ಇಂಚುಗಳಷ್ಟು ಹೊರಚಾಚುಗಳಲ್ಲಿ, ಎಂಟು ಹತ್ತು ಇಂಚು ಅಗಲದ ಶೋಕೇಸ್‌ಗಳನ್ನು ಮಾಡಿಕೊಳ್ಳಬಹುದು.

ಗೂಡು ಮಾಡುವ ಕ್ರಮ
ಮನೆಯ ವಿನ್ಯಾಸ ಮಾಡುವಾಗಲೇ ಎಲ್ಲೆಲ್ಲಿ ಯಾವ ಮಾದರಿಯ ಬಿಲ್ಟ್ಇನ್‌  ಅಂದರೆ ಗೋಡೆಯಲ್ಲೇ ನಿರ್ಮಾಣ ಮಾಡಬಹುದಾದ ಕಬೋರ್ಡ್‌, ಬುಕ್‌ ಶೆಲ್ಪ್ ಇತ್ಯಾದಿ ಬೇಕು ಎಂದು ನಿರ್ಧರಿಸಬೇಕು. ಇದರಿಂದ ಮುಂದೆ ಆಗುವ ಕಿರಿಕಿರಿಗಳು ತಪ್ಪುತ್ತವೆ. ಒಂದು ಸಲ ಗೋಡೆ ಕಟ್ಟಿದ ಮೇಲೆ ನಂತರ ಕಬೋರ್ಡುಗಳನ್ನು ಕೊರೆಯುವುದು ಬಹಳ ಕಷ್ಟ. ಗೋಡೆ ಕಟ್ಟುವಾಗಲೇ ಕಬೋರ್ಡಿನ ರೀತಿ ಮಾಡುವುದು ಬಹಳ ಸುಲಭ.  ಗೋಡೆಯಲ್ಲಿ ಬರುವ ಯಾವುದೇ ತೆರೆದ ಸ್ಥಳದ ಮೇಲೆ ಲಿಂಟಲ್‌ ಹಾಕುವುದು ಅತ್ಯಗತ್ಯ. ಆರು ಇಂಚು ದಪ್ಪದ ಗೋಡೆಗಳಲ್ಲಿ ಎರಡೂ ಕಡೆ ಕಡೇಪಕ್ಷ ಒಂದೆರಡು ಬ್ಲಾಕ್‌ ಅಗಲ ಬಿಟ್ಟು, ನಾಲ್ಕರಿಂದ ಆರು ಅಡಿಗಳ ಅಗಲದ ಬಿಲ್ಟ್ ಇನ್‌ ಕಬೋರ್ಡ್‌ ಅನ್ನು ಮಾಡಿಕೊಳ್ಳಬಹುದು. ಹೀಗೆ ಲಿಂಟಲ್‌ ಹಾಕುವಾಗ ನಂತರ ಮೆಶ್‌ ಕಟ್ಟಲು ಆಧಾರ ಆಗುವಂತೆ ಮೊದಲೇ ಕಂಬಿಗಳನ್ನು ಬಿಟ್ಟುಕೊಂಡರೆ ಅನುಕೂಲಕರ. ಲಿಂಟಲ್‌ ಕಾಂಕ್ರಿಟ್‌ ಹಾಕಲು ಕೆಳಗೆ ಹಲಗೆಗಳನ್ನು ಅಳವಡಿಸುವಾಗ, ಸ್ವಲ್ಪ ಸಂದಿಬಿಟ್ಟರೆ, ಕಂಬಿಕಟ್ಟುವಾಗ ಲಿಂಟಲ್‌ಗ‌ಳಿಂದ “ಎಲ್‌’ ಆಕಾರದ ಸುಮಾರು ನಾಲ್ಕು ಇಂಚಿಗೆ ಒಂದು ಅಡಿ ಉದ್ದದ ಕಂಬಿಗಳನ್ನು ಪ್ರತಿ ಒಂದು ಅಡಿಗೆ ಅಳವಡಿಸಿದರೆ ನಂತರ ಮೆಶ್‌ ಕಟ್ಟಲು ಅನುಕೂಲಕರ. ( ಎಲ್‌ ಆಕಾರದ ಒಂದು ಕಾಲು ಕೆಳಗೆ ಒಂದು ಅಡಿ ಇಳಿಯಬೇಕು. ಲಿಂಟಲ್‌ ಕಾಂಕ್ರಿಟ್‌ನಲ್ಲಿ ನಾಲ್ಕು ಇಂಚಿನ ಮತ್ತೂಂದು ಕಾಲು ಸೇರುವಂತೆ ಬಾರ್‌ ಬೆಂಡಿಂಗ್‌ ಮಾಡಬೇಕು )

ಇಲ್ಲೂ ಗೂಡುಗಳು
ಒಂಬತ್ತು ಇಂಚಿನ ಗೋಡೆಗಳಿಗೆ ಎರಡೂ ಕಡೆ ಪ್ಲಾಸ್ಟರ್‌ ಮಾಡಿದರೆ ಒಂದು ಅಡಿವರೆಗೂ ದಪ್ಪ ಆಗಿಬಿಡುತ್ತವೆ.  ಈ ಗೋಡೆಗಳಲ್ಲಿ ಮೂರು ಇಂಚಿನ ಮೆಶ್‌ ಗೋಡೆ ಹೋದರೂ ನಿರಾಯಾಸವಾಗಿ ಒಂಬತ್ತು ಇಂಚಿನ ಬಿಲ್ಟ್ ಇನ್‌ ಶೆಲ್ಫ್ ಸಿಕ್ಕೇ ಸಿಗುತ್ತದೆ. ಮತ್ತೂ ಅಗಲದ ಶೆಲ್‌ ³ಬೇಕೆಂದರೆ ಒಂದೆರಡು ಇಂಚು ಹೊರಚಾಚಿದಂತೆ ಮರದ ಫ್ರೆàಂಗಳನ್ನು ಹಾಕಿಕೊಳ್ಳಬಹುದು. ಭಾರ ಹೊರುವ ಗೋಡೆಗಳ ಮನೆಯಾಗಿದ್ದರೆ, ಗೂಡು ಭಾಗ ಕಳೆದಮೇಲೂ ಮಿಕ್ಕಿರುವ ಗೋಡೆ ಸೂರು ಹಾಗೂ ಅದರ ಮೇಲಿನ ಭಾರವನ್ನು ಹೊರುತ್ತದೆಯೇ ಎಂದು ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ಗಳಿಂದ ಲೆಕ್ಕ ಹಾಕಿಸಿ ಮುಂದುವರಿಯುವುದು ಸೂಕ್ತ.  ಕೆಲವೊಮ್ಮೆ ಬಾಗಿಲು, ಕಿಟಕಿ, ಕಪಾಟು ಹಾಕಿದ ನಂತರ ಭಾರ ಹೊರಲು ಹೆಚ್ಚು ಗೋಡೆಗಳೇ ಉಳಿದಿರುವುದಿಲ್ಲ.

ನಾನಾ ಕಾರಣಗಳಿಂದಾಗಿ ಗೋಡೆಗಳು ಅನಿವಾರ್ಯ ಆದರೆ, ಇವುಗಳಿಂದ ಒಂದಷ್ಟು ಉಪಯುಕ್ತ ಸ್ಥಳವನ್ನು ಮರಳಿ ಪಡೆದುಕೊಂಡರೆ, ಹೆಚ್ಚು ಖರ್ಚಿಲ್ಲದೆ ಮನೆಯನ್ನು ವಿಶಾಲವಾಗಿ ಕಟ್ಟಿಕೊಳ್ಳಬಹುದು.

ಹೆಚ್ಚಿನ ಮಾತಿಗೆ: 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.