ಹೂಡಿಕೆ ಮಾಡಲು ಭದ್ರತೆಯ ಭಾವನೆ ಇರಬೇಕು
Team Udayavani, Jun 25, 2018, 12:28 PM IST
ತಿಂಗಳು ತಿಂಗಳು ಹಣ ಉಳಿಸಿ; ಉಳಿಸಿದ್ದು ಇನ್ನೊಂದು ರೂಪದಲ್ಲಿ ನಮಗೇ ಲಾಭವಾಗಿ ಬರುತ್ತದೆಯೋ, ಆಗ ನಾವು ಹೆಚ್ಚು ಹೆಚ್ಚು ಉಳಿಸುವುದಕ್ಕೆ ಮುಂದಾಗುತ್ತೇವೆ. ಇದು ಉಳಿತಾಯದ ವೃತ್ತ. ಉಳಿತಾಯವೆಂದರೆ, ಹೂಡಿಕೆ ಎಂದರೆ, ಕೇವಲ ಹಣ, ಹಣ ಎನ್ನುವುದಕ್ಕಿಂತ ಅದೊಂದು ಭದ್ರತೆ.
ಮಗ ಕೆಲಸಕ್ಕೆ ಸೇರಿ ಇನ್ನೂ 3 ತಿಂಗಳು ಕೂಡ ಆಗಲಿಲ್ಲ. ಆಗಲೇ ಅವನಿಗೆ ಒಂದು ನಿವೇಶನ ಹುಡುಕಿ, ಬ್ಯಾಂಕಿನಲ್ಲಿ ಸಾಲ ಮಾಡಿ, ಅವನ ಹೆಸರಿಗೆ ನಿವೇಶನ ನೋಂದಾಯಿಸಿದರು. “ಇವರಿಗೇನು ಅವಸರವಪ್ಪಾ ಈಗಷ್ಟೇ ಕೆಲಸಕ್ಕೆ ಸೇರಿದ್ದಾನೆ ಆಗಲೆ ಇವೆಲ್ಲ ಮಾಡಬೇಕಾ?’ ಅಂತ ಎಲ್ಲರೂ ಅಂದುಕೊಂಡರು. ಅವರು ಇಷ್ಟೆಲ್ಲ ಮಾಡಿದ್ದು ಯಾಕೆ ಗೊತ್ತಾ? ಮಗನ ಕೈಗೆ ಜಾಸ್ತಿ ಹಣ ಸಿಗಬಾರದು. ಯಾವಾಗ ಕೈಗೆ ಜಾಸ್ತಿ ಹಣ ಸಿಗುತ್ತದೆಯೋ ಆಗ ಅವರಿಗೆ ಯಾವುದಕ್ಕೆ ಖರ್ಚು ಮಾಡಬೇಕು. ಯಾವುದಕ್ಕೆ ಮಾಡಬಾರದು ಎನ್ನುವುದೂ ಗೊತ್ತಾಗುವುದಿಲ್ಲ. ಇಷ್ಟಕ್ಕೂ, ಇದೆಲ್ಲ ಮಾಡುತ್ತಿರುವುದು ಮಗನಿಗಾಗಿ ತಾನೆ?
ಅಗತ್ಯಕ್ಕಿಂತ ಹೆಚ್ಚು ಹಣ ಚಿಕ್ಕ ವಯಸ್ಸಿನಲ್ಲಿ ಬಂದಾಗ, ಅದು ವೆಚ್ಚವಾಗುವುದು ಬಟ್ಟೆಗೆ, ಹೋಟೆಲ್‌ಗೆ, ಮನೋರಂಜನೆಗಳಿಗೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ. ಅತಿ ಹೆಚ್ಚು ಯುವಕರು ಯಾವ ದೇಶದಲ್ಲಿ ದುಡಿಯುತ್ತಾರೋ, ಆ ದೇಶದಲ್ಲಿ ಇಂತಹ ಉದ್ಯಮ ಅತ್ಯಂತ ಲಾಭದಾಯಕ ಆಗಿರುತ್ತದೆ. ಇದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ.
ಉಳಿಸಿದ ಹಣವನ್ನು ವ್ಯವಸ್ಥಿತವಾಗಿ ಮ್ಯೂಚುವಲ್ ಫಂಡ್‌ನಲ್ಲಿ ಹಾಕಬಹುದು ಎನ್ನುವುದು ಗೊತ್ತಾಯಿತು. ಇಷ್ಟೇ ಅಲ್ಲ. ನಾವೇ ನಮ್ಮ ಫಂಡ್ ನಿರ್ವಹಣೆ ಮಾಡಬಹುದು. ಹಾಗೆಂದರೆ ಷೇರು ಪೇಟೆಯ ಬಗೆಗೆ ಸ್ವಲ್ಪ ತಿಳುವಳಿಕೆ ಇದ್ದವರು ಪ್ರತಿ ತಿಂಗಳೂ ನಿರ್ಧಿಷ್ಟ ಪ್ರಮಾಣದ ಷೇರುಗಳನ್ನು ಕೊಳ್ಳುವುದು ಲೇಸು.
ಇದು ಹೇಗೆಂದರೆ, ಒಂದು 50 ಷೇರುಗಳನ್ನು, ಅದೂ ಮುಂಚೂಣಿಯ ಷೇರುಗಳನ್ನು ಆಯ್ಕೆ ಮಾಡಿಕೊಂಡು, ಯಾವ ಷೇರಿನಲ್ಲಿ, ಅದೂ ಯಾವವಲಯದಲ್ಲಿ ಇಳಿಕೆ ಆಗಿದೆ ಎನ್ನುವುದನ್ನು ನೋಡಿ, ಪ್ರತಿ ತಿಂಗಳೂ ಇಂತಿಷ್ಟು ಎಂದು ಖರೀದಿಸುತ್ತ ಹೋಗುವುದು. ಉದಾಹರಣೆಗೆ ನನಗೆ ಗೊತ್ತಿರುವವರು ಒಬ್ಬರು ಮಾಹಿತಿ ತಂತ್ರಜಾnನದ 3 ಕಂಪನಿ, ಬ್ಯಾಂಕ್ ನ 2 ಕಂಪನಿ, ಸಿಮೆಂಟ್, ಸ್ಟೀಲ್ ಹೀಗೆ ಹಲವಾರು ವಲಯದ ಕೆಲವೇ ಕಂಪನಿಗಳನ್ನು ಆರಿಸಿಕೊಂಡು ಆ ಕಂಪನಿಯ ಷೇರುಗಳನ್ನು ಪ್ರತಿ ತಿಂಗಳೂ ಖರೀದಿಸುತ್ತಾರೆ. ಬಿಡುವು ಇರುವವರು, ಆಸಕ್ತಿ ಇರುವವರು, ಜೊತೆಗೆ ಆರ್ಥಿಕ ಶಿಸ್ತು ಇರುವವರು ಇದೇ ದಾರಿಯನ್ನು ಅನುಸರಿಸಬಹುದು.
ಆರ್ಥಿಕ ಶಿಸ್ತಿಗೆ ಯಾಕೆ ಇಷ್ಟು ಒತ್ತುಕೊಡುವುದೆಂದರೆ, ಅದಿರದಿದ್ದರೆ ಹೂಡಿಕೆ ಮಾಡಲು ವಿಶ್ವಾಸ ಇರುವುದಿಲ್ಲ. ನಮಗೆ ನಮ್ಮ ಬಗೆಗೆ, ನಮ್ಮ ಬಗ್ಗೆ ಇತರರಿಗೆ. ಇದು ಹೇಗೆಂದರೆ ನೀವು ಪ್ರತಿ ತಿಂಗಳೂ ಬಾಡಿಗೆ ಕಟ್ಟಿದಾಗ ಹೇಗೆ ಮನೆಯ ಮಾಲೀಕನಿಗೆ ನಂಬಿಕೆ, ವಿಶ್ವಾಸ ಮೂಡುವುದೋ ಅಷ್ಟೇ ಸಹಜವಾದದ್ದು.
ಒಮ್ಮೆ ತಿಂಗಳು ತಿಂಗಳು ಹಣ ಉಳಿಸಿ; ಉಳಿಸಿದ್ದು ಇನ್ನೊಂದು ರೂಪದಲ್ಲಿ ನಮಗೇ ಲಾಭವಾಗಿ ಬರುತ್ತದೆಯೋ, ಆಗ ನಾವು ಹೆಚ್ಚು ಹೆಚ್ಚು ಉಳಿಸುವುದಕ್ಕೆ ಮುಂದಾಗುತ್ತೇವೆ. ಇದು ಉಳಿತಾಯದ ವೃತ್ತ. ಉಳಿತಾಯವೆಂದರೆ, ಹೂಡಿಕೆ ಎಂದರೆ, ಕೇವಲ ಹಣ, ಹಣ ಎನ್ನುವುದಕ್ಕಿಂತ ಅದೊಂದು ಭದ್ರತೆ, ಸರಳತೆ, ಜೊತೆಗೆ ನಮ್ಮ ಜೀವನಕ್ಕೆ ನಾವು ಹಾಕಿಕೊಂಡ ಚೌಕಟ್ಟು ಆಗಿರುತ್ತದೆ ಎನ್ನುವುದನ್ನು ಮರೆಯಬಾರದು.
– ಸುಧಾಶರ್ಮ ಚವತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.