ನಿರಂತರ ಆರನೇ ಹೆಣ್ಣು ಮಗು: 4 ದಿನದ ಹಸುಳೆಯ ಕೊಂದ ದುಷ್ಟ ಅಪ್ಪ
Team Udayavani, Jun 25, 2018, 4:07 PM IST
ಗಾಂಧಿನಗರ, ಗುಜರಾತ್ : ತನಗೆ ನಿರಂತರ ಆರನೇ ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಕೋಪೋದ್ರಿಕ್ತನಾದ ಮಗುವಿನ ತಂದೆ ಕೇವಲ ನಾಲ್ಕು ದಿನಗಳ ಹಸುಳೆಯನ್ನು ಇರಿದು ಕೊಂದ ಅತ್ಯಮಾನುಷ ಘಟನೆ ಗುಜರಾತ್ ನಿಂದ ವರದಿಯಾಗಿದೆ.
ಗಾಂಧಿನಗರ ಸಮೀಪದ ದೇಘಾಮ್ ಎಂಬಲ್ಲಿನ ರಖೀಯಾಲ್ ಎಂಬಲ್ಲಿಗೆ ಸಮೀಪದ ಮೋತಿ ಮಸಾಂಗ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಲ್ಕು ದಿನಗಳ ಮಗುವನ್ನು ಕೊಂದ ದುಷ್ಟ ಅಪ್ಪನನ್ನು ವಿಷ್ಣು ರಾಠೊಡ್ ಎಂದು ಗುರುತಿಸಲಾಗಿದೆ.
ತನಗೆ ಆರನೇ ಹೆಣ್ಣು ಮಗು ಹುಟ್ಟಿದ ವಾರ್ತೆ ಕೇಳಿ ಕೋಪಾವಿಷ್ಟನಾಗಿ ಹೆಂಡತಿಯ ಮನೆಗೆ ಧಾವಿಸಿ ಬಂದ ರಾಠೊಡ್, ಮಗುವಿನ ಪಕ್ಕೆಲುಬುಗಳನ್ನು ತೀವ್ರವಾಗಿ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿ ಸ್ಥಳದಿಂದ ಪಲಾಯನ ಮಾಡಲೆತ್ನಿಸಿದಾಗ ಆತನ ಪತ್ನಿ, ಹೆಣ್ಣು ಮಕ್ಕಳು ಜೋರಾಗಿ ಬೊಬ್ಬಿಟ್ಟರು. ಇವರ ಆಕ್ರಂದನ ಕೇಳಿ ಧಾವಿಸಿ ಬಂದ ನೆರೆಕರೆಯವರು ಓಡಿ ಹೋಗಲೆತ್ನಿಸುತ್ತಿದ್ದ ರಾಠೊಡ್ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.
ಮಾರಣಾಂತಿಕ ಇರಿತಕ್ಕೆ ಗುರಿಯಾದ ಮಗುವನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿನ ವೈದ್ಯರು ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಸಿದರೂ ಪ್ರಯೋಜನವಾಗದೆ ಅದು ಮೃತಪಟ್ಟಿತು ಎಂದು ಮಗುವಿನ ಅಜ್ಜ ಜಸ್ವಂತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್ಕೌಂಟರ್; ತನಿಖೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.