ಮಕ್ಕಳ ಪಾಲನೆ-ಪೋಷಣೆಯಲ್ಲಿ ತಾಯಿ ಪಾತ್ರ ಮಹತದ್ದು
Team Udayavani, Jun 25, 2018, 5:47 PM IST
ಹಾವೇರಿ: ಮಕ್ಕಳ ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ. ಅವರ ಗುರಿ ಸಾಧನೆಗೆ ಸಹಕರಿಸಬೇಕು. ಅವರ ಭವಿಷ್ಯ ತಾಯಂದಿರ ಕೈಯಲ್ಲಿದೆ ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್. ಭಗವಂತಗೌಡರ ಹೇಳಿದರು. ತಾಲೂಕಿನ ಹಳೇರಿತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಎಸ್.ಎಲ್. ಪಾಟೀಲ ತಮ್ಮ ತಂದೆ ಸ್ಮರಣಾರ್ಥ ಸ್ಫೂರ್ತಿ ವಿದ್ಯಾ ಕುಟೀರದ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ಬೋಧನಾ ಸಲಕರಣೆಗಳ ಕೊಡುಗೆ ಹಾಗೂ ತಾಯಂದಿರ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಲಾಲನೆ, ಪಾಲನೆಯಲ್ಲಿ ತಂದೆಗಿಂತ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಹಾಳಾಗಲು ತಾಯಿಯೇ ಕಾರಣವಾಗುತ್ತಾಳೆ. ಶಿವಾಜಿಯ ತಾಯಿ, ಭಗತ್ಸಿಂಗ್ನ ತಾಯಿಯ ಪ್ರೇರಣೆ ಮಹಾನ್ ಸಾಧಕರನ್ನಾಗಿ ಮಾಡಿತು. ತಾಯಿ ಮನಸ್ಸು ಮಾಡಿ ಸಮಯೋಚಿತ ಮಾರ್ಗದರ್ಶನ ಉತ್ತೇಜನ ಮಾಡಬೇಕು ಎಂದರು.
ನಿವೃತ್ತ ಪ್ರಾಚಾರ್ಯ ನಾಗನಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲೆಗೆ ಐದು ನೂರು ಪುಸ್ತಕಗಳನ್ನು ಹಾಗೂ 7ನೇ ವರ್ಗದಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕ-ಬಾಲಕಿಯರಿಗೆ ತಲಾ ಐದು ನೂರು ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು. ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಮಕ್ಕಳ ಬಗ್ಗೆ ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕರದ್ದೂ ಇದೆ. ತಂದೆ-ತಾಯಿ ವ್ಯಕ್ತಿತ್ವ, ಆದರ್ಶ ಮಕ್ಕಳಿಗೆ ಅನುಕರಣೀಯವಾಗಬೇಕು. ಸಮರ್ಥ ಶಿಕ್ಷಕರು ರಾಷ್ಟ್ರ ರಕ್ಷಕರು. ಹಳ್ಳಿಗಳ ಸುಧಾರಣೆ ಶಾಲೆಗಳನ್ನು ಅವಲಂಬಿಸಿದೆ. ನಮ್ಮ ಬದುಕು ಮಕ್ಕಳಿಗೆ ಮೀಸಲಾಗಿರಬೇಕು ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಮಕ್ಕಳ ಗೆಲುವು ತಂದೆ-ತಾಯಿ ಪಾಲಿಗೆ ಹರುಷ, ಸಂಭ್ರಮವನ್ನು ತಂದು ಕೊಡುವುದು ನಿಜ. ಆದರೆ ಕೇವಲ ಸಂತೋಷವನ್ನು ಅನುಭವಿಸಿದರೆ ಸಾಲದು. ಅವರು ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಮಕ್ಕಳಿಗೆ ತಂದೆ- ತಾಯಿಯರೇ ಮಾದರಿ. ಮಕ್ಕಳು ಸತ್ಪ್ರಜೆಯಾಗಬೇಕಾದರೆ ನಾವೂ ಒಳ್ಳೆಯರಾಗಿರಬೇಕು ಎಂದರು. ತಾಪಂ ಸದಸ್ಯ ಮೃತ್ಯುಂಜಯ ವಗ್ಗಣ್ಣನವರ ಮಾತನಾಡಿ, ಎಲ್ಲ ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠ. ಮಕ್ಕಳೆದುರಿಗೆ ದುಶ್ಚಟಗಳಾಗಲಿ, ಜಗಳಗಳಾಗಲಿ ಮಾಡಬೇಡಿ. ಅವು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಎಂದರು.
ಶತಾಯುಷಿ ನಿವೃತ್ತ ಮುಖ್ಯಾಧ್ಯಾಪಕ ಎಂ.ಬಿ. ಹಿರೇಮಠ ಮಾತನಾಡಿ, ತಾಯಂದಿರ ಶಕ್ತಿ ಅಗಾಧವಾದದ್ದೂ ಅವರು ಏನೆಲ್ಲ ಮಾಡಲು ಸಾಧ್ಯ. ಮಕ್ಕಳು ತಪ್ಪು ಮಾಡಿದಾಗ ನಯವಾಗಿ ಸಿಟ್ಟು ಮಾಡಿ ಬುದ್ಧಿಮಾತು ಹೇಳಬೇಕು. ಮಹಾನ್ ಸಾಧಕರ ಚರಿತ್ರೆಗಳು ಮಕ್ಕಳಿಗೆ ಆದರ್ಶವಾಗಬೇಕು ಎಂದರು.
ಹೇಮನಗೌಡ ಪಾಟೀಲ, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎಫ್. ಹುಳ್ಯಾಳ, ನಗರಸಭೆ ಮಾಜಿ ಸದಸ್ಯೆ ಸೌಭಾಗ್ಯ ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಗ್ರಾಪಂಅಧ್ಯಕ್ಷೆ ಕೆಂಚಮ್ಮ ಕಿತ್ತೂರ, ಯಲ್ಲಮ್ಮ ಪಾಟೀಲ, ಮುತ್ತಣ್ಣ ವಗ್ಗಣ್ಣನವರ, ಬಸಣ್ಣ ದೇಸೂರ, ರಾಜು ಡಂಬರಮತ್ತೂರ, ರಮೇಶ ಬಸೇಗಣ್ಣಿ, ಮಲಕಯ್ಯನವರು, ಗೋಪಾಳಿ ಇದ್ದರು. ನೂರಕ್ಕೂ ಅಧಿಕ ತಾಯಂದಿರು ಪಾಲ್ಗೊಂಡಿದ್ದರು. ಶಿಕ್ಷಕ ಬಿ.ವಿ. ಹಿರೇಮಠ ಸ್ವಾಗತಿಸಿದರು. ಎಚ್.ಬಿ. ಸಾಸ್ವಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕ ಎಸ್.ಬಿ. ಮಠದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.