ಮುಂಡ್ಕೂರು ಮುಖ್ಯ ರಸ್ತೆ: ಕುಸಿದ ಮೋರಿಗಳಿಂದ ಅಪಾಯ
Team Udayavani, Jun 26, 2018, 6:15 AM IST
ಬೆಳ್ಮಣ್: ಮುಂಡ್ಕೂರು ಪಡಿತ್ತಾರುವಿನಲ್ಲಿ ಕೆಲವೇ ಅಡಿಗಳ ಅಂತರದಲ್ಲಿರುವ ಎರಡು ಕುಸಿದ ಮೋರಿಗಳು ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿವೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕೂಡಲೇ ಸ್ಪಂದಿಬೇಕಾಗಿದ್ದು ತಪ್ಪಿದಲ್ಲಿ ದುರಂತದ ದಿನ ದೂರವಿಲ್ಲ.
ಮುಂಡ್ಕೂರಿನ ದಕ್ಷಿಣ ಭಾಗದಲ್ಲಿ ಗದ್ದೆಗಳ ನಡುವಿನ ಮೋರಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ನೀರು ತುಂಬಿ ಒಂದು ಭಾಗ ಕುಸಿದು ಸಂಬಂಧಪಟ್ಟ ಇಲಾಖೆ ದುರಸ್ತಿಗೆ ಚಾಲನೆ ನೀಡಿದ್ದರೂ ನಿರಂತರ ಮಳೆ ಕಾಮಗಾರಿಗೆ ತೊಂದರೆ ಉಂಟು ಮಾಡಿದೆ. ಈ ಕುಸಿದ ಮೋರಿಯ ಸುತ್ತಮುತ್ತ ಗದ್ದೆಗಳಿದ್ದು ಮುಖ್ಯ ರಸ್ತೆಯೂ ಇದೇ ಆಗಿರುವುದರಿಂದ ವಾಹನ ಸಂಚಾರದ ದಟ್ಟಣೆಯಿಂದಾಗಿ ಆಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಮೇಲೆ ತಿಳಿಸಿದ ಮೋರಿಯ ಕೆಲವೇ ದೂರದಲ್ಲಿ ಉತ್ತರ ಭಾಗದಲ್ಲಿನ ಕಾಲುವೆಗೆ ಕಟ್ಟಲಾದ ಕಿರು ಸೇತುವೆ ಮಾದರಿಯ ಮೋರಿಯೂ ದಿನೇ ದಿನೇ ಪಾತಾಳಕ್ಕಿಳಿಯುತ್ತಿದೆ. ಈ ಮಿನಿ ಸೇತುವೆ ರಸ್ತೆಯನ್ನೂ ಪಾತಾಳಕ್ಕಿಳಿಸುತ್ತಿದ್ದು ಹೊಂಡ ಬಿದ್ದು ವಾಹನ ಸಂಚಾರ ದುಸ್ತರವೆನಿಸಿದೆ. ಹೊಂಡದಲ್ಲಿ ನೀರು ತುಂಬಿದ್ದು ರಸ್ತೆಯ ಬಗ್ಗೆ ತಿಳಿಯದ ವಾಹನ ಸವಾರರರು ಗುಂಡಿಯ ಪ್ರಮಾಣ ನೋಡಿಯೇ ಸಾಗುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಮೋರಿಯೂ ರಸ್ತೆ ಸಹಿತ ಸಂಪೂರ್ಣ ಕುಸಿಯುವುದರಲ್ಲಿ ಸಂಶಯ ಇಲ್ಲ.
ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ರಸ್ತೆಯಾದ್ದರಿಂದ ಕೂಡಲೇ ಸ್ಪಂದಿಸಬೇಕೆಂದು ಮುಂಡ್ಕೂರಿನ ಜನ ಆಗ್ರಹಿಸಿದ್ದಾರೆ.
ಕಾಮಗಾರಿ ಬಗ್ಗೆ ಅನುಮಾನ
ಹಿಂದೆ ಈ ಕಾಲಕ್ಕಿಂತಲೂ ಹೆಚ್ಚು ಮಳೆ ಬಂದು ನೆರೆ ಬಂದಿದ್ದರೂ ಈ ರೀತಿಯಲ್ಲಿ ಕುಸಿತ ಉಂಟಾಗುತ್ತಿರಲಿಲ್ಲ. ಇಲ್ಲಿಯ ಕಾಮಗಾರಿಯ ಬಗ್ಗೆ ಅನುಮಾನ ಮೂಡುತ್ತಿದೆ.
– ಸತೀಶ್, ಮುಂಡ್ಕೂರು
ಕೂಡಲೇ ಸ್ಪಂದಿಸಿ
ಮುಂಡ್ಕೂರಿನ ಮುಖ್ಯ ರಸ್ತೆಯಲ್ಲಿ ಈ ಅವಳಿ ಮೋರಿಗಳ ಕುಸಿತದ ಬಗ್ಗೆ ಇಲಾಖೆ ಕೂಡಲೇ ಸ್ಪಂದಿಸಬೇಕಾಗಿದೆ. ಈ ರಸ್ತೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ನಡೆದುಕೊಂಡು ಹೋಗುತ್ತಿದ್ದು ಅಪಾಯ ಎದುರಾಗಿದೆ.
– ಶೇಖರ ಶೆಟ್ಟಿ ಮಾಣಿಬೆಟ್ಟು, ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.