ಸೀಶೆಲ್ಸ್‌ನಲ್ಲಿ ನೌಕಾನೆಲೆ ಯೋಜನೆಗೆ ಒಪ್ಪಂದ
Team Udayavani, Jun 26, 2018, 6:00 AM IST
ನವದೆಹಲಿ: ಸೀಶೆಲ್ಸ್‌ನಲ್ಲಿ ಭಾರತ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಂಡಿದ್ದ ನೌಕಾ ನೆಲೆ ಯೋಜನೆ ರದ್ದಾಗುವ ಆತಂಕದಲ್ಲಿತ್ತಾದರೂ, ಇದೀಗ ಈ ಯೋಜನೆಯನ್ನು ಮುಂದುವರಿಸಲು ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಇದರ ಜೊತೆಗೆ 650 ಕೋಟಿ ರೂ. ಸಾಲ ಸೌಲಭ್ಯ ಹಾಗೂ 2 ಡಾರ್ನಿಯರ್ ಯುದ್ಧವಿಮಾನಗಳನ್ನು ಸೀಶೆಲ್ಸ್ ಒದಗಿಸಲಿದೆ.
ಸೀಶೆಲ್ಸ್‌ಅಧ್ಯಕ್ಷ ಡ್ಯಾನಿ ಫಾರೆ ಭಾರತ ಪ್ರವಾಸದಲ್ಲಿದ್ದು, ಅವರು ಸೋಮವಾರ ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಉಭಯ ದೇಶಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಬದ್ಧವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದ್ದಾರೆ.
ಇನ್ನೊಂದೆಡೆ ಹಲವು ಸರ್ಕಾರಿ ಯೋಜನೆಗಳಿಗೂ ಸೀಶೆಲ್ಸ್‌ಗೆ ಭಾರತ ನೆರವು ನೀಡಲಿದೆ. ಸರ್ಕಾರಿ ವಸತಿಗೃಹ, ಪೊಲೀಸ್ ಕೇಂದ್ರ ಕಚೇರಿ ಮತ್ತು ಅಟಾರ್ನಿ ಜನರಲ್ ಕಚೇರಿ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಅಲ್ಲದೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾ ರಕ್ಕಾಗಿ ಸೀಶೆಲ್ಸ್ ಜೊತೆಗೆ ಆರು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಅಸಂಪ್ಷನ್ ದ್ವೀಪದಲ್ಲಿ ಭಾರತ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದ ನೌಕಾ ನೆಲೆ ಯೋಜನೆಗೆ ಸೀಶೆಲ್ಸ್‌ನ ವಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಜೊತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದಿಲ್ಲ ಎಂ ದು ಭಾರತ ಪ್ರವಾಸಕ್ಕೂ ಮುನ್ನ ಫಾರೆ ಹೇಳಿದ್ದರು. ಅಲ್ಲದೆ 3000 ಕೋಟಿ ರೂ. ಯೋಜನೆಯ ಈ ಒಪ್ಪಂದವನ್ನು ಅನುಮೋದಿಸಲು ಸಂಸತ್ತಿನಲ್ಲಿ ಮಂಡಿಸದಿರಲೂ ಫಾರೆ ನಿರ್ಧರಿಸಿದ್ದರು.
ಆರು ದಿನಗಳ ಭೇಟಿ: ಫಾರೆ ಭಾರತಕ್ಕೆ ಆರು ದಿನಗಳ ಭೇಟಿಗಾಗಿ ಶುಕ್ರವಾರ ಗುಜರಾತ್‌ಗೆ ಬಂದಿಳಿದಿದ್ದರು. ಶನಿವಾರ ಸಾಬರಮತಿ ಆಶ್ರಮ ಹಾಗೂ ಅಹಮದಾಬಾದ್ ಐಐಎಂಗೆ ಅವರು ಭೇಟಿ ನೀಡಿದ್ದಾರೆ. ನಂತರ ಗೋವಾಗೆ ತೆರಳಿ ಭಾನುವಾರ ದೆಹಲಿಗೆ ಆಗಮಿಸಿದ್ದಾರೆ. ಸೋಮವಾರ ಪ್ರಧಾನಿ ಮೋದಿ ಜತೆಗೆ ಮಾತುಕತೆ ನಡೆಸಿದ್ದಾರೆ.
ಬೃಹತ್ ಆಮೆಗಳ ಗಿಫ್ಟ್
ಸೀಶೆಲ್ಸ್ ಅಧ್ಯಕ್ಷ ಫಾರೆ ಅವರು 2 ಬೃಹತ್ ಅಲ್ಡಾಬ್ರಾ ಆಮೆಗಳನ್ನು ಭಾರತಕ್ಕೆ ಉಡು ಗೊರೆಯಾಗಿ ನೀಡಿದ್ದಾರೆ. ಸೀಶೆಲ್ಸ್‌ನಿಂದ ತಂದಿದ್ದ ಆಮೆಗಳನ್ನು ಸೋಮವಾರ ಹೈದರಾಬಾದ್‌ನ ನೆಹರೂ ಝುವಾಲಾ ಜಿಕಲ್ ಪಾರ್ಕ್‌ಗೆ ಹಸ್ತಾಂತರಿಸಲಾಗಿದೆ.
ಫಾರೆ ಗಾಯನ
ಮಾತುಕತೆ ಬಳಿಕ ಪ್ರಧಾನಿ ಮೋದಿ ಅವರು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡ ಫಾರೆ ಅವರು, ಕೈಯ್ಯಲ್ಲಿ ಸಿತಾರ್ ಹಿಡಿದುಕೊಂಡು ಹಾಡೊಂದನ್ನು ಹಾಡಿ ಎಲ್ಲರ ಮನತಣಿಸಿದರು. ಇವರ “ಓ ಮೊನ್ ಪೆ ಸೀಶೆಲ್ಸ್’ ಹಾಡು ಕೇಳಿ ಪ್ರಧಾನಿ ಮೋದಿ ಸೇರಿದಂತೆ ನೆರೆದವರೆಲ್ಲರೂ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.
ಬಸವಳಿದು ಬಿದ್ದ ಯೋಧ
ಸೀಶೆಲ್ಸ್ ಅಧ್ಯಕ್ಷ ಡ್ಯಾನಿ ಫಾರೆಯವರಿಗೆ ಗೌರವ ನಮನ ಸಲ್ಲಿಸುವ ವೇಳೆ ನೌಕಾಪಡೆಯ ಯೋಧರೊಬ್ಬರು ಬಿಸಿಲಿನಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ರಾಷ್ಟ್ರಪತಿ ಭವನದಲ್ಲಿ ನಡೆದ ಈ ಕಾರ್ಯಕ್ರಮ ಮುಕ್ತಾಯಗೊಂಡು ಅತಿಥಿಗಳೆಲ್ಲರೂ ವೇದಿಕೆಯಿಂದ ತೆರಳಿದ ಮೇಲೆ ಯೋಧರ ಬಳಿಗೆ ಆಗಮಿಸಿದ ಮೋದಿ, ಅವರ ಆರೋಗ್ಯ ವನ್ನು ವಿಚಾರಿಸಿದರು. ಅಷ್ಟೇ ಅಲ್ಲ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆಯೂ ಸಲಹೆ ನೀಡಿದರು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.