ದುಬಾೖಯಲ್ಲಿ 2019ರ ವಿಶ್ವಕಪ್ ಕಬಡ್ಡಿ?
Team Udayavani, Jun 26, 2018, 6:00 AM IST
ದುಬಾೖ: ಪ್ರಸ್ತುತ ದುಬಾೖಯಲ್ಲಿ 6 ರಾಷ್ಟ್ರಗಳ ನಡುವಿನ “ದುಬಾೖ ಕಬಡ್ಡಿ ಮಾಸ್ಟರ್ ಲೀಗ್’ ನಡೆಯುತ್ತಿದ್ದು, ಇದು ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದೇ ಸ್ಫೂರ್ತಿಯಲ್ಲಿ 2019ರ ನಾಲ್ಕನೇ ಆವೃತ್ತಿಯ ವಿಶ್ವಕಪ್ ಕಬಡ್ಡಿ ಕೂಟಕ್ಕೂ ದುಬಾೖ ಆತಿಥ್ಯ ವಹಿಸಲು ಸಜ್ಜಾಗಿದೆ.
ಈ ಕುರಿತಂತೆ ಜೂ. 29ರಂದು ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ ವಾರ್ಷಿಕ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಂದೇ ದುಬಾೖ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಐಕೆಎಫ್ ಅಧ್ಯಕ್ಷ ಜನಾರ್ದನ್ ಸಿಂಗ್ ಗೆಹೊಟ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ದುಬಾೖಯಲ್ಲಿ ವಿಶ್ವಕಪ್ ಕೂಟ ನಡೆಯುವುದು ಖಚಿತ ಎನ್ನಲಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಗೆಹೊಟ್, “ಈ ಹಿಂದಿನ 3 ವಿಶ್ವಕಪ್ ಕೂಟಗಳು ಭಾರತದಲ್ಲಿ ನಡೆದಿವೆ. ಈ ಸಲ ಮೊದಲ ಬಾರಿಗೆ ವಿದೇಶದಲ್ಲಿ ಆಯೋಜಿಸಲು ಚಿಂತನೆ ನಡೆಸ ಲಾಗಿದೆ. ಈ ಕುರಿತಂತೆ ಐಕೆಎಫ್ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.