ಭೂತಭಯ ತೊಲಗಿಸಲು ಶ್ಮಶಾನದಲ್ಲೇ 3 ರಾತ್ರಿ ಮಲಗಿ ಹೀರೋ ಆದ TDP ಶಾಸಕ
Team Udayavani, Jun 26, 2018, 12:04 PM IST
ಹೈದರಾಬಾದ್ : ಮೂಢನಂಬಿಕೆಯ ವಿರುದ್ಧದ ಹೋರಾಟದಲ್ಲಿ ಧೈರ್ಯ, ಸಾಹಸ ತೋರಿರುವ ಪಶ್ಚಿಮ ಗೋದಾವರಿಯ ತೆಲುಗು ದೇಶಂ ಪಕ್ಷದ ಶಾಸಕ ನಿಮ್ಮಲ ರಾಮ ನಾಯ್ಡು ಅವರು ರಾತೋರಾತ್ರಿ ಹೀರೋ ಆಗಿ ಖ್ಯಾತಿ ಗಳಿಸಿದ್ದಾರೆ; ಹಿರಿಯ ರಾಜಕಾರಣಿಗಳ ಶಹಬ್ಟಾಸ್‌ಗಿರಿಗೆ ಪಾತ್ರರಾಗಿದ್ದಾರೆ.
ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡು ಅವರು ತಮ್ಮ ಊರಿನ ರುದ್ರಭೂಮಿಯೊಂದರ ಕಟ್ಟಡವನ್ನು ನವೀಕರಿಸಲು ಬಯಸಿದ್ದರು. ಆದರೆ ಊರಿನ ಯಾರೊಬ್ಬರು ಈ ನವೀಕರಣ ಕಾಮಗಾರಿಗೆ ಬರಲು ಸಿದ್ಧರಿರಲ್ಲ. ರುದ್ರಭೂಮಿಯಲ್ಲಿ ಭೂತ ಪ್ರೇತಗಳು ಇರುತ್ತವೆ ಎಂಬ ಭಯವೇ ಇದಕ್ಕೆ ಕಾರಣವಾಗಿತ್ತು.
ಜನರ ಮನದಲ್ಲಿ ಆಳವಾಗಿ ಬೇರೂರಿದ್ದ ಈ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡು ಅವರು ಜೂನ್ 22ರಿಂದ ನಿರಂತರ ಮೂರು ದಿನಗಳ ಕಾಲ ರಾತ್ರಿ ವೇಳೆ ಶ್ಮಶಾನದಲ್ಲೇ ಮಲಗಿದರು. ಆ ಮೂಲಕ ಶ್ಮಶಾನದ ಒಳಗಾಗಲೀ ಹೊರಗಾಗಲೀ ಭೂತ ಪ್ರೇತಗಳು ಇಲ್ಲವೇ ಇಲ್ಲ ಎಂಬುದನ್ನು ಶಾಸಕ ನಾಯ್ಡು ಜನರಿಗೆ ಮನವರಿಕೆ ಮಾಡುವಲ್ಲಿ ಸಫಲರಾದರು.
ಪಶ್ಚಿಮ ಗೋದಾವರಿಯ ಪಲಕೋಳೆ ಪಟ್ಟಣದ ರುದ್ರಭೂಮಿಯಲ್ಲಿ ತೀವ್ರ ನುಸಿ ಕಾಟ ಇದ್ದ ಹೊರತಾಗಿಯೂ ಶಾಸಕ ನಾಯ್ಡು ಅವರು ಮುಕ್ತ ಬಯಲಲ್ಲಿ, ಆಗಸದಡಿ, ಕೇವಲ ಫೋಲ್ಡಿಂಗ್ ಕಾಟ್ ಬಳಿಸಿ, ಮೂರು ರಾತ್ರಿ ನಿದ್ದೆ ಮಾಡಿರುವುದು ಒಂದು ಸಾಧನೆಯೇ ಎಂದು ಜನರಿಗೆ, ಹಿರಿಯ ರಾಜಕಾರಣಿಗಳಿಗೆ ಅನ್ನಿಸಿತು. ನಾಯ್ಡು ಅವರ ಈ ಸಾಹಸದಿಂದ ಜನರಿಗೆ ರುದ್ರಭೂಮಿಯಲ್ಲಿ ಯಾವುದೇ ಭೂತ ಪ್ರೇತ ಇಲ್ಲವೆಂಬುದು ಮನದಟ್ಟಾಯಿತು. ಅಂದ ಹಾಗೆ ನಾಯ್ಡು ಮೊದಲ ಬಾರಿಗೆ ಶಾಸಕರಾಗಿರುವ ಟಿಡಿಪಿ ನಾಯಕ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶಾಸಕ ನಾಯ್ಡು ಅವರು ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟವನ್ನು ಪ್ರಶಂಸಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.