ಮುರಿದು ಬಿದ್ದ ಮೂಲರಪಟ್ಣ ಸೇತುವೆ “ವೀಕ್ಷಿಸಿ ವಿಡಿಯೋ”


Team Udayavani, Jun 26, 2018, 12:44 PM IST

bridge.jpg

ಪುಂಜಾಲಕಟ್ಟೆ ಎಡಪದವು: ಬಂಟ್ವಾಳ – ಮಂಗಳೂರು ಗಡಿಭಾಗದ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಸೋಮವಾರ ಸಂಜೆ ಏಕಾಏಕಿ ಕುಸಿದುಬಿದ್ದಿದೆ. ಸೇತುವೆಯ ಮೇಲಿನಿಂದ ಎರಡು ಖಾಸಗಿ ಬಸ್‌ಗಳು ಸಂಚರಿಸಿದ ತತ್‌ಕ್ಷಣ ಅವಘಡ ಸಂಭವಿಸಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅಪಾಯದಿಂದ ಪಾರಾಗಿವೆ. ಗಂಜಿಮಠ, ಕುಪ್ಪೆಪದವಿನಿಂದ ಬಂಟ್ವಾಳಕ್ಕೆ ಸಂಪರ್ಕ ಕಡಿತಗೊಂಡಿದೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಶಾರದಾ ಹಾಗೂ ಸೀಗಲ್‌ ಹೆಸರಿನ ಖಾಸಗಿ ಬಸ್‌ಗಳು ದಾಟಿದೊಡನೆ ಸೇತುವೆ ಒಮ್ಮೆಲೇ ಕುಸಿಯಿತು. ಬೇರೆ ವಾಹನಗಳು ಇರದ ಕಾರಣ ಅಪಾಯ ಸಂಭವಿಸಿಲ್ಲ. ಅಕ್ರಮ ಮರಳುಗಾರಿಕೆಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

1981-1982ರಲ್ಲಿ 176.40 ಮೀ. ಉದ್ದದ ಈ ಸೇತುವೆ ಕಟ್ಟ ಲಾಗಿತ್ತು. ಎಡಪದವು- ಕುಪ್ಪೆ ಪದವು, ಅರಳ ಸೊರ್ನಾಡಿನ ಜಿಲ್ಲಾ ಮುಖ್ಯರಸ್ತೆಯ ಕಿ.ಮೀ. 7.40 ರಲ್ಲಿ ಬರುವ ಮೂಲರ ಪಟ್ನ ದಲ್ಲಿ ಬಂಟ್ವಾಳದ ಗಡಿಭಾಗದ ಮಂಗಳೂರು ತಾಲೂಕಿನ ವ್ಯಾಪ್ತಿ ಗೊಳ ಪಡುವ ಸೇತುವೆ ಕುಸಿದುಬಿದ್ದಿದೆ. ಸೇತುವೆ ಯಲ್ಲಿ ಒಟ್ಟು ಎಂಟು ಸ್ಲಾ$Âಬ್‌ಗಳಿದ್ದು, ಮಂಗಳೂರು ಉತ್ತರ ಕ್ಷೇತ್ರಕ್ಕೆ ಸೇರಿದ ಭಾಗದ ಎರಡನೇ ಮತ್ತು ಮೂರನೇ ಸ್ಲಾ$Âಬ್‌ಗಳು ಕುಸಿದು ಬಿದ್ದಿವೆ. ಬಂಟ್ವಾಳ ಕ್ಷೇತ್ರದ ಭಾಗವೂ ಬಿರುಕುಬಿಟ್ಟಿದೆ.

ಸೇತುವೆ ಕುಸಿತದ ಸುದ್ದಿ ಸಾಮಾ ಜಿಕ ಜಾಲತಾಣಗಳ ಮೂಲಕ ಹರಡ ತೊಡಗಿದಂತೆ ಎರಡೂ ಪಾರ್ಶ್ವಗಳಲ್ಲಿ ಜನರು ಜಮಾಯಿಸಿದರು.

ಈ ಘಟನೆಯಿಂದ ಬಂಟ್ವಾಳ ತಾಲೂ ಕಿನ ಬಡಬೆಳ್ಳೂರು, ಅರಳ ಹಾಗೂ ಮುತ್ತೂರು, ಕೊಳವೂರು ಸಂಪರ್ಕ ನೇರವಾಗಿ ಕಡಿದುಹೋಗಿದೆ.

ಸೊರ್ನಾಡಿನಿಂದ ಕುಪ್ಪೆಪದವಿಗೆ ಸಾಗು ವವರು ಬದಲಿ ದಾರಿ ಬಳಸ ಬೇಕಾಗಿದೆ. ಬಂಟ್ವಾಳ ತಾಲೂಕಿನ ಸೊರ್ನಾಡಿನಿಂದ ಮಂಗಳೂರಿನ ಕುಪ್ಪೆಪದವು, ಕಟೀಲು, ಇರುವೈಲು, ಎಡಪದವು, ಗಂಜಿಮಠ ಕಡೆಗಳಿಗೆ ಸಾಗಲು ಈ ರಸ್ತೆ ಸಹಕಾರಿಯಾಗಿತ್ತು. ಸಿದ್ಧಕಟ್ಟೆ, ಬಂಟ್ವಾಳ, ವೇಣೂರು, ಬೆಳ್ತಂಗಡಿಯಿಂದ ಬಜಪೆ ವಿಮಾನ ನಿಲ್ದಾಣಕ್ಕೆ ತೆರಳುವವರಿಗೂ ಇದು ಹತ್ತಿರದ ದಾರಿಯಾಗಿತ್ತು.

ಬದಲಿ ಮಾರ್ಗ ಬಲು ದೂರ
ಪ್ರತಿನಿತ್ಯ ಇಲ್ಲಿ ಸುಮಾರು 15 ಬಸ್‌ ಗಳು ಹಾಗೂ ನೂರಾರು ಖಾಸಗಿ ವಾಹನಗಳು ಸಂಚರಿಸುತ್ತವೆ. ಬಂಟ್ವಾಳ ಭಾಗ ದಿಂದ ಪೊಳಲಿ ಕಡೆಗೆ ತೆರಳು ವವರಿಗೆ, ಗುರುಪುರ ಕಡೆ ಯಿಂದ ಬಂಟ್ವಾಳಕ್ಕೆ ಬರಲೂ ಈ ರಸ್ತೆ ಅನುಕೂಲ ವಾಗುತ್ತಿತ್ತು. ಸೇತುವೆ ಕುಸಿತದಿಂದಾಗಿ ಬಂಟ್ವಾಳ, ಗಂಜಿಮಠದಿಂದ ಕುಪ್ಪೆ ಪದವು- ನೋಣಲ್‌ ಮುಖಾಂತರ ಬಂಟ್ವಾಳ, ಬಿ.ಸಿ. ರೋಡ್‌ಗೆ ಸಂಚಾರ ಸ್ಥಗಿತ ವಾಗಿರುವ ಕಾರಣ ಪ್ರಯಾಣಿಕರು ಪೊಳಲಿ ಮಾರ್ಗವಾಗಿ ಹೋಗ ಬೇಕಾಗುತ್ತದೆ. ಇದರಿಂದಾಗಿ ಇಲ್ಲಿಯ ಜನತೆ ಬಿ.ಸಿ. ರೋಡ್‌ಗೆ ಹೋಗ ಬೇಕಾದರೆ ಮೊದಲಿಗಿಂತ ಸುಮಾರು 20 ಕಿ.ಮೀ.ಗೂ ಅಧಿಕ ದೂರ ಕ್ರಮಿಸ ಬೇಕಾಗುತ್ತದೆ.

ತೂಗುಸೇತುವೆಯೇ ಆಧಾರ
ಕುಸಿದ ಸೇತುವೆಯ ಸಮೀಪದಲ್ಲೇ ತೂಗುಸೇತುವೆಯಿದ್ದು, ಸ್ಥಳೀಯರು ಅತ್ತಿತ್ತ ಸಾಗಲು ಅದನ್ನು ಬಳಸಬ ಹುದು.
ಆದರೆ ವಾಹನಗಳು ಮಾತ್ರ ಸುತ್ತು ಬಳಸಿ ಹೋಗುವುದು ಅನಿವಾರ್ಯ.

ಶಾಸಕರ ಭೇಟಿ: ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್‌, ತಾ.ಪಂ. ಇಒ, ಅಗ್ನಿಶಾಮಕ ದಳದ ಅಧಿ ಕಾರಿ ಗಳು, ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ, ಟ್ರಾಫಿಕ್‌ ಎಸ್‌.ಐ. ಯಲ್ಲಪ್ಪ, ಮುಖಂಡರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಪ್ರಭಾಕರ ಪ್ರಭು, ದೇವಪ್ಪ ಪೂಜಾರಿ, ಉಮೇಶ ಅರಳ, ಉದಯ ಕುಮಾರ್‌ ರಾವ್‌, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ
ಭೇಟಿ ನೀಡಿದರು.

ಎಚ್ಚರಿಸಿದ್ದ  ಉದಯವಾಣಿ
ಈ ಸೇತುವೆಯ ಮೇಲ್ಭಾಗ ದಲ್ಲಿ ಎರಡು ಕಡೆಗಳಲ್ಲಿ ಬಿರುಕು ಮೂಡಿರುವುದು ಕಳೆದ ಮೇ ತಿಂಗಳಲ್ಲೇ ಸ್ಪಷ್ಟ ವಾಗಿ ಗೋಚರಿಸುತ್ತಿತ್ತು. ಈ ಬಗ್ಗೆ ಉದಯವಾಣಿ ಪತ್ರಿಕೆ ಜೂನ್‌ 6ರಂದು “ಸೇತುವೆಯಲ್ಲಿ ಬಿರುಕು; ಕುಸಿಯುವ ಭೀತಿ’ ಎಂಬ ವರದಿ ಪ್ರಕಟಿಸಿ ಹೆದ್ದಾರಿ ಇಲಾಖೆಯನ್ನು ಎಚ್ಚರಿಸಿತ್ತು. ಆದರೆ ಇಲಾಖೆಯ ಅಧಿಕಾರಿಗಳು ಬಿರುಕು ಅಷ್ಟೊಂದು ಅಪಾಯಕಾರಿಯಾಗಿಲ್ಲ ಎಂದು ಸಬೂಬು ಹೇಳಿದ್ದರು. ಆದರೆ ಸೇತುವೆಯ ಅಡಿಭಾಗ ದಲ್ಲಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿರುವುದು ಸ್ಪಷ್ಟವಾಗಿ ಗೋಚರಿಸು ತ್ತಿತ್ತು. ನೂರು ವರ್ಷ ಬಾಳಿಕೆ ಬರಬೇಕಾಗಿದ್ದ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಮೂವತ್ತು ವರ್ಷ ಪೂರ್ತಿಯಾಗುತ್ತಿದ್ದಂತೆ ಕುಸಿದು ಬಿದ್ದಿದೆ.

ನಾವು ಮೂಡಬಿದಿರೆಯಿಂದ ಮೂಲರಪಟ್ಣಕ್ಕೆ ಬೈಕ್‌ನಲ್ಲಿ ಅದೇ ಸೇತುವೆ ಮೂಲಕ ಹೋಗಬೇಕಿತ್ತು. ತೆರಳುವುದು 5 ನಿಮಿಷ ಬೇಗ ಆಗುತ್ತಿದ್ದರೆ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್‌ ಪಾರಾದೆವು. ಸೇತುವೆ ಹತ್ತಿರ ಬಂದಾಗ ಪಕ್ಕದ ಮನೆಯವರು ಸೇತುವೆ ಬಿದ್ದ ಬಗ್ಗೆ ಎಚ್ಚರಿಕೆ ನೀಡಿದರು. ಸುಮಾರು 30 ವರ್ಷ ಹಳೆಯ ಈ ಸೇತುವೆಯ ಕಾಮಗಾರಿಗೆ ನಾವೂ ಹೋಗಿದ್ದೆವು.
– ಮಹಮ್ಮದ್‌, ಸ್ಥಳೀಯರು

ಸೇತುವೆ ಮತ್ತೆ ನಿರ್ಮಿಸಲು ಮಳೆಗಾಲ ಮುಗಿದ ಬಳಿಕವಷ್ಟೇ ಸಾಧ್ಯ. ಹೀಗಾಗಿ ಬದಲಿ ವ್ಯವಸ್ಥೆಯ ಕುರಿತು ತಾನು ಮತ್ತು ಮಂಗಳೂರು ಉತ್ತರ ಶಾಸಕ ಭರತ್‌ ಶೆಟ್ಟಿ ಚರ್ಚಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಸಹಕರಿಸಿ.    
– ರಾಜೇಶ್‌ ನಾೖಕ್‌ ಉಳಿಪ್ಪಾಡಿ, ಶಾಸಕ

ಮಂಗಳೂರು ತಾಲೂಕಿನ ಗುರುಪುರ ಮತ್ತು ಪುಚ್ಚಮೊಗರು ಹಳೆ ಸೇತುವೆಗಳು ಕೂಡ ಶಿಥಿಲಾವಸ್ಥೆಯಲ್ಲಿದ್ದು, ಅಧಿಕಾರಿಗಳು ಈ ಬಗ್ಗೆ ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ಫಲ್ಗುಣಿ ಸೇತುವೆಯ ಸ್ಥಿತಿ ಎದುರಾಗಬಹುದು.  ಕುಸಿತಕ್ಕೆ ಅವೈಜ್ಞಾನಿಕ ಮರಳುಗಾರಿಕೆ ಮತ್ತು ಇಲಾಖಾ ಅಧಿಕಾರಿಗಳ ನಿರ್ಲಕ್ಷéವೇ ಕಾರಣ.    
-ಪ್ರಭಾಕರ ಪ್ರಭು, ತಾ.ಪಂ. ಸದಸ್ಯ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.