ಕಟಪಾಡಿ ದೇವಸ್ಥಾನದಲ್ಲಿ ಮೋದಿ ಜನ್ಮ ನಕ್ಷತ್ರದ ಅನ್ನ ಸಂತರ್ಪಣೆ ಆರಂಭ
Team Udayavani, Jun 26, 2018, 2:39 PM IST
ಕಟಪಾಡಿ: ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿಯಾಗಬೇಕೆಂಬ ಅಭಿಲಾಷೆಯಿಂದ ಮೋದಿ ಅಭಿಮಾನಿಗಳಿಂದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ವಿಶೇಷ ಸೇವೆಯಾಗಿ ಮೋದಿ ಜನ್ಮ ನಕ್ಷತ್ರವಾದ ಜೂ. 25ರಂದು ಅನ್ನ ಸಂತರ್ಪಣೆ ಸೇವೆ ಜರಗಿತು.
ಪ್ರತೀ ಸೋಮವಾರ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆಯು ನಡೆಯುತ್ತಿದ್ದು, ಸುಮಾರು 250ರಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಆದರೆ ಪ್ರಧಾನಿ ಮೋದಿ ಅವರ ಜನ್ಮನಕ್ಷತ್ರ ದಿನದ ಸೇವೆಯಲ್ಲಿ ಸುಮಾರು 650ಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಮೋದಿ ಅಭಿಮಾನಿ ಬಳಗವು ಈ ಸೇವೆಯನ್ನು ಸಲ್ಲಿಸುತ್ತಿದೆ. ಭಾರತಕ್ಕೆ ವಿಶ್ವ ಮಾನ್ಯತೆಯನ್ನು ಒದಗಿಸಿ ಕೊಟ್ಟ ಮೋದಿ ಅವರೇ ಮುಂದಿನ ಪ್ರಧಾನಿ ಆಗಬೇಕೆಂಬ ಅಭಿಲಾಷೆಯೊಂದಿಗೆ ಈ ಸೇವೆ ನಡೆದಿದ್ದು, ಅರ್ಚಕ ದೇವದಾಸ ಶಾಂತಿ ಅವರು ಮಧ್ಯಾಹ್ನದ ವಿಶೇಷ ಪೂಜೆಯನ್ನು ನಡೆಸಿ ಪ್ರಾರ್ಥನೆ ಸಲ್ಲಿಸಿದರು.
ಉಪಸ್ಥಿತರಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಕ್ರಿಯಿಸಿ, ಹೆಮ್ಮೆಯ ಪ್ರಧಾನಿ ಜನ್ಮ ನಕ್ಷತ್ರದಂದು ಒಳ್ಳೆಯ ಚಿಂತನೆಯೊಂದಿಗೆ ಶುಭ ಕೆಲಸವನ್ನು ಮೋದಿ ಅಭಿಮಾನಿ ಬಳಗ ನಡೆಸುತ್ತಿದೆ ಎಂದರು.
ಚುನಾವಣೆ ತನಕ 2019ರ ಲೋಕಸಭಾ ಚುನಾವಣೆಯ ಅನಂತರವೂ ಮೋದಿ ಅವರೇ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಬೇಕೆಂಬ ಪ್ರಾರ್ಥನೆಯೊಂದಿಗೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಈ ವಿಶೇಷ ಸೇವೆಯು ಆರಂಭಗೊಂಡಿದೆ. ಲೋಕಸಭಾ ಚುನಾವಣೆಯ ತನಕವೂ ಮೋದಿ ಅವರ ಜನ್ಮ ನಕ್ಷತ್ರದಂದು ಕಾಪು ಕ್ಷೇತ್ರದಾದ್ಯಂತ ವಿವಿಧ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳು ನಡೆಯಲಿವೆ ಎಂದು ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಕೆ. ಮುರಲೀಧರ ಪೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.