ನಕ್ಷತ್ರ ತೋರಿಸುವ ಹುಡುಗ

Team Udayavani, Jun 27, 2018, 6:00 AM IST

w-1.jpg

ಮೆಹೆಂದಿ ಹಚ್ಚದಿದ್ದರೆ, ಯಾವುದೇ ಶುಭ ಸಮಾರಂಭ ಪೂರ್ಣಗೊಳ್ಳುವುದಿಲ್ಲ ಎಂಬ ಮಾತೊಂದು ಇದೆ. ಆದರೆ, ಇಂದಿನ ಬಹುತೇಕ ಯುವತಿಯರು ಮಂದರಂಗಿಯನ್ನು ಹಚ್ಚಿಕೊಳ್ಳಲು ಹಬ್ಬ, ಹರಿದಿನಗಳನ್ನು ಕಾಯುತ್ತಲೂ ಇಲ್ಲ. ಬೀದಿ ಬದಿಯ ಮೆಹೆಂದಿ ಕಲಾವಿದರಿಂದ ಕೈಮೇಲೆ ಚಿತ್ತಾರ ಬಿಡಿಸಿಕೊಳ್ಳುವುದು ಈಗಿನ ಟ್ರೆಂಡ್‌…

ನವಿಲುಗರಿಯನ್ನು ಸವರಿದ ಹಾಗೆ ಆಗುತ್ತಿತ್ತೇನೋ, ಆ ಚೆಂದುಳ್ಳಿ ನಸುನಗುತ್ತಿದ್ದಳು. ಅವಳ ಕಂಗಳು ಆ ಹುಡುಗನ ಮೇಲೆಯೇ ನೆಟ್ಟಿದ್ದವು. ಆದರೆ, ಆ ಹುಡುಗ ಮಾತ್ರ ಅವಳ ಕೈಗಳನ್ನೇ ದಿಟ್ಟಿಸಿ ನೋಡುತ್ತಿದ್ದ. ಬಿಳುಪಾಗಿ, ನುಣುಪಾಗಿದ್ದ ಕೈಗಳು ಅವನ ಪಾಲಿಗೆ ಕ್ಯಾನ್ವಾಸ್‌ ಇದ್ದಂತೆ. ಅದರ ಮೇಲೆ ಚೆಂದದ ಚಿತ್ತಾರ ಬಿಡಿಸುತ್ತಿದ್ದ. ದೂರದಿಂದ ನೋಡಿದರೆ, ಅಂಗೈ ನೋಡಿ ಭವಿಷ್ಯ ಹೇಳುತ್ತಿದ್ದಾನೇನೋ ಅನ್ನಿಸುವ ಹಾಗೆ ಅವರಿಬ್ಬರು ಧ್ಯಾನಸ್ಥರಾಗಿದ್ದರು. ಇವಳು ಕನ್ನಡದಲ್ಲಿ ಏನೋ ಹೇಳುತ್ತಿದ್ದಳು, ಅವನು ಹಿಂದಿಯಲ್ಲಿ ಅದಕ್ಕೆ ಸ್ಪಷ್ಟನೆ ಕೊಡುತ್ತಿದ್ದ. ಭಾಷೆ ಗೊತ್ತಿಲ್ಲದ ಇಬ್ಬರ ನಡುವೆ ಮದರಂಗಿ ಹೂವಿನಂತೆ ಅರಳುತ್ತಿತ್ತು. ಅಪರಿಚಿತರನ್ನು ಬೆಸೆದ ಮಧುರ ಸೇತುವೆಯಾಗಿತ್ತು.

  ಮೈಸೂರಿನ ಅರಸು ರಸ್ತೆಗೆ ಕಾಲಿಟ್ಟರೆ, ಅಲ್ಲಿನ ಅಂಗಡಿ ಮುಂಗಟ್ಟುಗಳ ಮುಂದೆ ಈ ದೃಶ್ಯ ಸಾಮಾನ್ಯವಾಗಿ ಕಾಣಿಸುತ್ತದೆ. ದೂರದ ಗುಜರಾತ್‌, ರಾಜಾಸ್ಥಾನದಿಂದ ಬಂದ ಮದರಂಗಿ ಹುಡುಗರು ಆ ಬೀದಿಗೊಂದು ವಿಶೇಷ ಮೆರುಗು ತುಂಬಿದ್ದಾರೆ. ಕೇವಲ ಮೈಸೂರೇ ಅಲ್ಲ, ಬೆಂಗಳೂರಿನ ಮಲ್ಲೇಶ್ವರಂ, ಜಯನಗರ, ಶಿವಮೊಗ್ಗದ ಗಾಂಧಿ ಬಜಾರಿನಲ್ಲೂ ಇಂಥದ್ದೇ ದೃಶ್ಯಗಳು ಸೆಳೆಯುತ್ತವೆ. ಬೀದಿಬದಿಯಲ್ಲಿ ಕುಳಿತ ಆ ಹುಡುಗರು ಮದರಂಗಿ ಬಿಡಿಸಿದರೇನೇ, ಅದು ಹೆಚ್ಚು ರಂಗುಬಿಟ್ಟುಕೊಳ್ಳುವುದು ಎನ್ನುವ ನಂಬಿಕೆಯೂ ಈಗಿನ ಯುವತಿಯರಲ್ಲಿ ಟ್ರೆಂಡಾಗಿದೆ.

  “ಮೆಹಂದಿ ಒಂದು ಬಣ್ಣದ ಚಿತ್ತಾರವಷ್ಟೇ ಅಲ್ಲ. ಅದು ಮನಸ್ಸಿನ ಭಾವದ ಬಣ್ಣ’ ಎಂದು ನಂಬಿರುವ ಈ ಯುವಕರಿಗೆ ಮದುವೆಯ ಸೀಸನ್‌ನಲ್ಲಿ ಬಲುಬೇಡಿಕೆ. ಖುದ್ದಾಗಿ ಮನೆಯ ಬಾಗಿಲಿಗೆ ಬಂದು, ವಧುವಿನ ಅಂಗೈಯನ್ನು ರಂಗುಗೊಳಿಸಿ, ಒಂದೆರಡು ಸಾವಿರ ರೂ. ಪಡೆದು, ವಾಪಸಾಗುತ್ತಾರೆ. ರಂಜಾನ್‌ ಇದ್ದಾಗಲೂ ಇವರ ಕೈಗಳಿಗೆ ಪುರುಸೊತ್ತೇ ಇರುವುದಿಲ್ಲ. ಮೊಘಲ್‌ ಶೈಲಿಯ ಮದರಂಗಿ ಬಿಡಿಸುವಲ್ಲಿಯೂ ಇವರು ನಿಸ್ಸೀಮರು.

  ಮೆಹೆಂದಿ ಹಚ್ಚದಿದ್ದರೆ, ಯಾವುದೇ ಶುಭ ಸಮಾರಂಭ ಪೂರ್ಣಗೊಳ್ಳುವುದಿಲ್ಲ ಎಂಬ ಮಾತೊಂದು ಇದೆ. ಆದರೆ, ಇಂದಿನ ಬಹುತೇಕ ಯುವತಿಯರು ಮಂದರಂಗಿಯನ್ನು ಹಚ್ಚಿಕೊಳ್ಳಲು ಹಬ್ಬ, ಹರಿದಿನಗಳನ್ನು ಕಾಯುತ್ತಲೂ ಇಲ್ಲ. ಮದುವೆ ದಿನ ಹತ್ತಿರ ಬಂದಾಗಲೇ ಮೆಹೆಂದಿ ಹಚ್ಚಿಕೊಳ್ಳುವುದು ಎನ್ನುವ ಕಾತರಿಕೆಯಲ್ಲೂ ಆಕೆಯಿಲ್ಲ. ಬೇರೆ ದಿನಗಳಲ್ಲೂ ತಾನು ಮದುವಣಗಿತ್ತಿಯಂತೆ ಮಿನುಗಬೇಕು, ಸಾಂಪ್ರದಾಯಿಕ ಹೆಣ್ಣಿನಂತೆ ಕಂಗೊಳಿಸಬೇಕು ಎನ್ನುವ ತುಡಿತದಲ್ಲಿ ಆಕೆಯಿದ್ದಾಳೆ. ಹಾಗಾಗಿ, ಅವಳ ಕೈಗಳೀಗ ಯಾವಾಗ ಬೇಕಾದರೂ, ಮೆಹೆಂದಿಯನ್ನು ಚುಂಬಿಸಬಹುದು.

  ಬೀದಿ ಬದಿ ಹುಡುಗರು ಹಾಕುವ ಈ ಮೆಹೆಂದಿಯನ್ನು ಅವಳು ಇಷ್ಟಪಡುವುದಕ್ಕೆ ಇನ್ನೊಂದು ಕಾರಣ, ಅವು ಪಕ್ಕಾ ನೈಸರ್ಗಿಕವೆನ್ನುವುದು. ಇವರ ಶುಲ್ಕವೂ ದುಬಾರಿಯೇನಲ್ಲ. ಕೇವಲ ನೂರು ರೂಪಾಯಿಯಷ್ಟೇ. ನೀವು ಅವರ ಮುಂದೆ ಕೈಚಾಚಿದಾಗ, ಅವರ ಭಾಷೆಯಲ್ಲಿಯೇ ಏನನ್ನೋ ಗುನುಗುತ್ತಾ, ಮುಖದಲ್ಲಿ ಪುಟ್ಟ ನಗುವೊಂದನ್ನು ಹೊಮ್ಮಿಸುತ್ತಾ, ತಮ್ಮ ಕೆಲಸವನ್ನು ತನ್ಮಯದಿಂದ ಮಾಡುತ್ತಿರುತ್ತಾರೆ.

ಮೆಹೆಂದಿ, ಬ್ಯೂಟಿ ವಿತ್‌ ಡಾಕ್ಟರ್‌!
1. ಶರೀರದ ತಾಪ ಇಳಿಸುವಲ್ಲಿ ಮದರಂಗಿ ಸಹಕಾರಿ. ಕೂಲ್‌ ಆದಂಥ ಅನುಭವ ಸಿಗುತ್ತೆ. “ಹೀಟ್‌ ಸ್ಟ್ರೋಕ್‌’ಗಳನ್ನು ದೂರ ಮಾಡುತ್ತೆ.

2. ಚರ್ಮ ಸುಕ್ಕುಗಟ್ಟುವಿಕೆಯನ್ನು ನಿಯಂತ್ರಿಸಿ, ಯವ್ವನದ ಹೊಳಪು ತರುತ್ತದೆ.

3. ಉಗುರುಗಳ ಆರೋಗ್ಯಕ್ಕೆ ಮಹೆಂದಿ ಬಹಳ ಒಳ್ಳೆಯದು. ಸೊಂಪಾಗಿ ಬೆಳೆಯಲು ಸಹಕಾರಿ.

4. ಮೆಹೆಂದಿ ಇಡುವಾಗ ಕಚಗುಳಿ ಇಟ್ಟಂತಾಗುವುದರಿಂದ, ನರವ್ಯೂಹದ ಮೇಲಿನ ಒತ್ತಡವೂ ಕಡಿಮೆಯಾಗಿ, ರಕ್ತಚಲನೆ ಸರಾಗವಾಗುತ್ತೆ.

5. ಅಂಗೈ ಸೌಂದರ್ಯ ಕಳೆಗುಂದಿದ್ದರೆ, ಅದಕ್ಕೆ ತಾಜಾ ಕಳೆ ತುಂಬಿಸುವ ಶಕ್ತಿ ಮೆಹೆಂದಿಗೆ ಇದೆ. ಪುಟ್ಟಗಾಯ, ಸುಟ್ಟಕಲೆಗಳೇನಾದರೂ ಇದ್ದರೆ, ಅದನ್ನು ಮುಚ್ಚಿಹಾಕಲೂ ಇದು ಸರಳ ಮಾರ್ಗ.

6. ಅಂಗೈ ಮೇಲೆ ಅಲರ್ಜಿ ಆಗುವುದು, ತುರಿಕೆ ಸಮಸ್ಯೆ ಇದ್ದವರು ಆಗಾಗ್ಗೆ ಮದರಂಗಿ ಹಚ್ಚಿಕೊಂಡರೆ, ಒಳ್ಳೆಯ ಫ‌ಲಿತಾಂಶ ಸಿಗುತ್ತದೆ.

7. ಪಾದಗಳ ಬಿರುಕುಗಳನ್ನು ಮುಚ್ಚಲು, ಪಾದದ ಚರ್ಮವನ್ನು ಮೃದು ಮಾಡುವಲ್ಲಿಯೂ ಮದರಂಗಿ ಸಹಕಾರಿ.

8. ಫ‌ಂಗಲ್‌ ಇನ್ಫೆಕ್ಷನ್‌, ಸನ್‌ಬರ್ನ್ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಮದರಂಗಿ ಲೇಪನ ಒಳ್ಳೆಯ ಮದ್ದು.

– ರುಬಿನ ಅಂಜುಮ್‌, ಮೈಸೂರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.