ಮದ್ದುಗುಡ್ಡೆ: ತೋಡಿನಂತಾದ ರಸ್ತೆ, ಸಂಚಾರಕ್ಕೆ ತೊಂದರೆ
Team Udayavani, Jun 27, 2018, 2:30 AM IST
ಕುಂದಾಪುರ: ಪುರಸಭೆ ವ್ಯಾಪ್ತಿಯ ಮದುಗುಡ್ಡೆ ವಾರ್ಡಿನ ರಸ್ತೆಯೊಂದರಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿಯಿಲ್ಲದ ಕಾರಣ ಮಳೆ ನೀರೆಲ್ಲ ರಸ್ತೆಯಲ್ಲಿಯೇ ಹರಿದು ಹೋಗುತ್ತಿರುವುದರಿಂದ ಶಾಲಾ ಮಕ್ಕಳ ವಾಹನ ಸೇರಿದಂತೆ ಈ ಭಾಗದ ಅನೇಕ ಮಂದಿ ತೊಂದರೆ ಅನುಭವಿಸಿದ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಕುಂದಾಪುರದೆಲ್ಲಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮದ್ದುಗುಡ್ಡೆ ರಸ್ತೆಯಲ್ಲಿ ತೋಡು ಹಾಗೂ ರಸ್ತೆಯ ಅಂತರ ತಿಳಿಯದೇ ವಾಹನದ ಚಕ್ರ ತೋಡಿಗೆ ಬಿದ್ದಿದೆ. ಅದಲ್ಲದೆ ಶಾಲಾ ಮಕ್ಕಳ ವಾಹನವು ಈ ರಸ್ತೆಯಲ್ಲಿ ಮುಂದಕ್ಕೆ ಚಲಿಸಲಾಗದೆ ನಿಂತಿತ್ತು.
ಆ ಬಳಿಕ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯರಾದ ಸುರೇಶ್ ಖಾರ್ವಿಯವರು ಪುರಸಭೆಯ ನಾಮ ಸದಸ್ಯ ಕೇಶವ್ ಭಟ್ ಅವರಿಗೆ ವಿಷಯ ತಿಳಿಸಿದ್ದು, ಅವರು ತತ್ ಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಗಂಭೀರತೆ ಅರಿತು, ಪುರಸಭೆಯ ಮುಖ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಮಳೆ ನೀರು ಹರಿದು ಹೋಗಲು ತುರ್ತು ಕ್ರಮ ಕೈಗೊಂಡಿದ್ದಾರೆ. ಆ ಬಳಿಕವಷ್ಟೇ ಸಂಚಾರ ವ್ಯವಸ್ಥೆ ಸುಗಮಗೊಂಡಿತು. ಸುಗಮ ಸಂಚಾರ ವ್ಯವಸ್ಥೆ ಮಾಡುವಲ್ಲಿ ಕಾರ್ಯ ನಡೆಯುವಾಗ, ಪುರಸಭೆಯ ಅಧಿಕಾರಿಗಳು, ಸಿಬಂದಿ, ಪೌರ ಕಾರ್ಮಿಕರು, ಸ್ಥಳೀಯರು, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಸಿಬಂದಿ ಸಹಕರಿಸಿದರು.
ಎಚ್ಚರಿಸಿತ್ತು ಉದಯವಾಣಿ
ಮದ್ದುಗುಡ್ಡೆ ವಾರ್ಡಿನಲ್ಲಿ ಚರಂಡಿಯಿಲ್ಲದೆ ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಮಸ್ಯೆಯಾಗಲಿದೆ ಎನ್ನುವ ಕುರಿತು ‘ಉದಯವಾಣಿ’ ಪತ್ರಿಕೆಯು ತನ್ನ ವಾರ್ಡಿನಲ್ಲಿ ಮಳೆಗಾಲ ಎನ್ನುವ ಸರಣಿ ಅಭಿಯಾನದಲ್ಲಿ ಜೂ. 10 ರಂದು ವರದಿ ಪ್ರಕಟಿಸಿ, ಎಚ್ಚರಿಸಿತ್ತು. ಆದರೆ ಆಗ ಎಚ್ಚೆತ್ತುಕೊಳ್ಳದೇ, ಅನಾಹುತ ಸಂಭವಿಸಿದ ಅನಂತರ ಎಚ್ಚೆತ್ತುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.