ಜಿಎಸ್‌ಬಿ ಶಾಂತಿಧಾಮ: ಸೇವಾ ಸಮಿತಿಯಿಂದ ಶಿವ ವ್ರತಾಚರಣೆ
Team Udayavani, Jun 27, 2018, 4:50 PM IST
ಮುಂಬಯಿ: ವಸಾಯಿರೋಡ್ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯ ವತಿಯಿಂದ ಶಿವ ವ್ರತಾಚರಣೆ ನಡೆಯಿತು.
ಪ್ರತೀ ಸೋಮವಾರ ಸಮಿತಿಯ ವಿಶ್ವಸ್ಥರಾದ ಲಕ್ಷ್ಮೀ ನರಸಿಂಹ ಪ್ರಭು ಮತ್ತು ಅಭಿಜಿತ್ ನರಸಿಂಹ ಪ್ರಭು ಅವರು ಶಿವಲಿಂಗಕ್ಕೆ ಹಾಲು, ಸೀಯಾಳ, ಕಬ್ಬಿನ ರಸ ಇನ್ನಿತರ ಅಭಿಷೇಕಗೈದು, ಭಸ್ಮಲೇಪನ, ಬಿಲ್ವಾರ್ಚನೆ- ಪೂಜೆ ಸಲ್ಲಿಸಿದರು. ಜೂ. 25ರಂದು ಹದಿನಾರು ಸೋಮ
ವಾರದ ವ್ರತದ ಉದ್ಯಾಪನ ಕಾರ್ಯಕ್ರಮವು ವಿಶೇಷವಾಗಿ ನಡೆಯಿತು. ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ಸಮಿತಿಯ ವಿಶ್ವಸ್ಥರಾದ ಲಕ್ಷ್ಮೀ ನರಸಿಂಹ ಪ್ರಭು ಮತ್ತು ನರಸಿಂಹ ಅನಂತ ಪ್ರಭು, ಅಭಿಜಿತ್ ನರಸಿಂಹ ಪ್ರಭು ಅವರ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಪ್ರಸಾದ ವಿತರಿಸಿದರು.
ಪ್ರಾಥಃಕಾಲ ದೇವರಿಗೆ 1008 ಸೀಯಾಳ ಅಭಿಷೇಕ, ರುದ್ರಾಭಿಷೇಕ, 108 ಲಿಂಗದ ಪೂಜೆ, ಭಸ್ಮಲೇಪನ, ಬಿಲ್ವಾರ್ಚನೆ, ನವಗ್ರಹ ಸಹಿತ ಮಹಾ ಮೃತ್ಯುಂಜಯ ಮತ್ತು ದಾರಿದ್ರÂ ದಹನ ಸಹಿತ ಮಹಾ ಮೃತ್ಯುಂಜಯ ಹವನ ಜರಗಿತು. ಲಕ್ಷ್ಮೀ ಪ್ರಭು ಅವರು ಪೂಜೆಯ ವಿಶೇಷತೆಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಮಿತಿಯವರಿಂದ ಭಜನ ಕಾರ್ಯಕ್ರಮ ಜರಗಿತು. ಹಾರ್ಮೋನಿಯಂ ನಲ್ಲಿ ವಿನಾಯಕ ವಸಂತ ಪ್ರಭು, ತಬಲಾದಲ್ಲಿ ಅಭಿಜಿತ್ ಪ್ರಭು, ಪಖ್ವಾಜ್‌ನಲ್ಲಿ ಸನತ್ ಕುಮಾರ್, ವಸಂತ ಪ್ರಭು ಇವರು ಸಹಕರಿಸಿದರು. ಆನಂತರ ಸಮಿತಿಯ ಪರಿವಾರ ದೇವರಿಗೆ ಮಹಾಮಂಗಳಾರತಿ ನಡೆಯಿತು. 15 ದಂಪತಿಗಳಿಗೆ ವಸ್ತ್ರದಾನ ಮಾಡಲಾಯಿತು.
ಪ್ರಸಾದರೂಪದಲ್ಲಿ ಸಮಿತಿಯವರಿಂದ ಬೆಳಗ್ಗೆ ಫಲಾಹಾರ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಅಭಿಜಿತ್ ಪ್ರಭು ಅವರ ನೇತೃತ್ವದಲ್ಲಿ ಅಲಂಕರಿಸಲ್ಪಟ್ಟ ಶಿವನ ಮಂಟಪವು ಭಕ್ತಾದಿಗಳನ್ನು ಆಕರ್ಷಿಸಿತು. ಸಮಾಜ ಬಾಂಧವರು, ಭಕ್ತಾದಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ವಿಶ್ವಸ್ಥರು, ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.